ಈ ವೀಕೆಂಡ್‌ನಲ್ಲೂ OTTಯಲ್ಲಿ ಮಸ್ತ್ ಮಸ್ತ್ ಸಿನಿಮಾ, ವೆಬ್ ಸಿರೀಸ್ ರಿಲೀಸ್: ಯಾವುದು ನೋಡ್ತೀರಾ?
ಇನ್ನೊಂದು ವೀಕೆಂಡ್ ಬಂದೇ ಬಿಟ್ಟಿದೆ. ಶನಿವಾರ ಹಾಗೂ ಭಾನುವಾರ ಎರಡು ದಿನ ರಜೆ. ಈ ರಜೆಯಲ್ಲಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಮೂಡು ಇಲ್ಲದೆ ಇರೋರಿಗೆ ಸಿನಿಮಾ ಹಾಗೂ ವೆಬ್ ಸಿರೀಸ್ ಅನ್ನು ತೋರಿಸಲು ಒಟಿಟಿ ವೇದಿಕೆಗಳು ಸಜ್ಜಾಗಿ ನಿಂತಿವೆ. ಒಳ್ಳೊಳ್ಳೆ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳು ವೀಕೆಂಡ್‌ನಲ್ಲಿ ರಿಲೀಸ್ ಆಗಿವೆ. ಹೀಗಾಗಿ ಈ ವಾರ ಕೂಡ ಮನೆಯಲ್ಲಿಯೇ ಸಖತ್ ಮನರಂಜನೆ ಸಿಗುವುದು ಗ್ಯಾರಂಟಿ.
ಮನೆ ಬಿಟ್ಟು ಹೊರಗೆ ಹೋಗುವುದಿಲ್ಲ ಅನ್ನುವವರಿಗೆ ಸ್ಟಾರ್‌ಗಳೇ ಅವರಿರುವ ಕಡೆ ಬಂದು ಬರುತ್ತಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್‌ನಿಂದ ಹಿಡಿದು, ಮಾಧುರಿ ದೀಕ್ಷಿತ್, ಬಾಬಿ ಡಿಯೋಲ್ ಅಂತ ಸ್ಟಾರ್ ನಟರ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳು, ಜೀ 5, ಅಮೆಜಾನ್ ಪ್ರೈಂ, ಡಿಸ್ನಿ+ಹಾಟ್‌ಸ್ಟಾರ್ ಹಾಗೂ ನೆಟ್‌ಫಿಕ್ಸ್‌ನಲ್ಲಿ ಪ್ರಿಮಿಯರ್ ಆಗುತ್ತಿವೆ. ಈ ವೀಕೆಂಡ್‌ನಲ್ಲಿ ನೀವು ನೋಡಬಹುದಾದ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳ ಪಟ್ಟಿ ಇಲ್ಲಿದೆ.

'ದೃಶ್ಯ 2'
ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್ ಹಾಗೂ ಡಿಸ್ನಿ+ಹಾಟ್‌ಸ್ಟಾರ್‌ಗಿಂತ ಜೀ 5 ಒಟಿಟಿ ಪ್ಲ್ಯಾಟ್ ಫಾರ್ಮ್ ಕನ್ನಡ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದೆ. ಈಗಾಗಲೇ ಹಲವು ಕನ್ನಡ ಸಿನಿಮಾಗಳನ್ನು ಪ್ರಿಮಿಯರ್ ಮಾಡಿ ಗೆದ್ದಿದೆ. ಶಿವಣ್ಣನ 'ಭಜರಂಗಿ 2', 'ಗರುಡ ಗಮನ ವೃಷಭ ವಾಹನ', 'ಕನ್ನಡಿಗ' ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ದೃಶ್ಯ 2' ಪ್ರಿಮಿಯರ್ ಆಗಿದೆ. ಫೆಬ್ರವರಿ 25ರಿಂದ 'ದೃಶ್ಯ 2' ಪ್ರಿಮಿಯರ್ ಆಗುತ್ತಿದ್ದು, ಈ ವಾರ ಕನ್ನಡ ಸಿನಿಮಾ ನೋಡಲು ಬಯಸುವವರಿಗೆ 'ದೃಶ್ಯ 2' ಉತ್ತಮ ಆಯ್ಕೆ.

'83'
ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ '83' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲು ಟೀಮ್ ನಿರ್ಧರಿಸಿತ್ತು. ಫೆಬ್ರವರಿ 18ಕ್ಕೆ '83' ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ಹಾಗೂ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಫೆಬ್ರವರಿ 18ರಂದು ಬಿಡುಗಡೆಯಾಗಿಲ್ಲ. ಈ ವೀಕೆಂಡ್‌ನಲ್ಲಿ '83' ರಿಲೀಸ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಒಂದುವೇಳೆ ರಿಲೀಸ್ ಆದರೆ '83' ಮಸ್ತ್ ಮನರಂಜನೆ ಸಿಗಬಹುದು.

ಮಾಧುರಿ ದೀಕ್ಷಿತ್ 'ದಿ ಫೇಮ್ ಗೇಮ್'
ಬಾಲಿವುಡ್‌ನ ಧಕ್ ಧಕ್ ಗರ್ಲ್ ಮಾಧುರಿ ದಿಕ್ಷಿತ್ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಫೆಬ್ರವರಿ 25ರಂದು 'ದಿ ಫೇಮ್ ಗೇಮ್' ಬಿಡುಗಡೆಯಾಗಿದೆ. ಮಾಧುರಿ ದೀಕ್ಷಿತ್ ಅನಾಮಿಕಾ ಎಂಬ ಸೂಪರ್‌ಸ್ಟಾರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿಢೀರನೇ ಈ ನಟಿ ಕಾಣೆಯಾಗುತ್ತಾರೆ. ಆ ಬಳಿಕ ಸಸ್ಪೆನ್ಸ್, ಥ್ರಿಲ್ಲರ್ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ತನಿಖೆ ಜೊತೆ ಒಂದೊಂದೇ ರಹಸ್ಯಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಮಾಧುರಿ ಜೊತೆ ಸಂಜಯ್ ಕಪೂರ್ ಹಾಗೂ ಮಾನವ್ ಕೌಲ್ ಕೂಡ ನಟಿಸಿದ್ದಾರೆ.

'ಲವ್ ಹಾಸ್ಟೆಲ್'
ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಹಾಗೂ ವಿಕ್ರಾಂತ್ ನಟಿಸಿರುವ 'ಲವ್ ಹಾಸ್ಟೆಲ್' ಈ ವೀಕೆಂಡ್‌ನ ಬೆಸ್ಟ್ ಚಾಯ್ಸ್. ಬಾಲಿವುಡ್ ಸ್ಟಾರ್ ನಟ ಬಾಬಿ ಡಿಯೋಲ್ 'ಲವ್ ಹಾಸ್ಟೆಲ್'ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಆಗ ತಾನೇ ಮದುವೆಯಾದ ಜೋಡಿ ಗನ್ ಜೊತೆ ಎಸ್ಕೇಪ್ ಆಗುತ್ತಾರೆ. ತನ್ನ ಅಂತಸ್ಥಿಗೆ ವಿರುದ್ಧವಾಗಿ ವಿವಾಹವಾಗಿದ್ದಾರೆ ಎಂದು ಕುಟುಂಬವೇ ಈ ಜೋಡಿಯ ವಿರುದ್ಧ ಸುಪಾರಿ ನೀಡುತ್ತಿದೆ. ಕಿಲ್ಲರ್‌ಗಳಿಂದ ತಪ್ಪಿಸಿಕೊಳ್ಳುವುದೇ 'ಲವ್ ಹಾಸ್ಟೆಲ್'. ಥ್ರಿಲ್ಲರ್ ಕ್ರೈಂ ಇಷ್ಟು ಪಡುವವರಿಗೆ 'ಲವ್ ಹಾಸ್ಟೆಲ್' ಖುಷಿಕೊಡಬಹುದು.

'ಯಾತ್ರಿ ಕೃಪಿಯಾ ದ್ಯಾನ್ ದೇ'
ಅಮೆಜಾನ್ ಪ್ರೈಂ ವಿಡಿಯೋದಲ್ಲಿ 'ಯಾತ್ರಿ ಕ್ರಿಪಿಯಾ ದ್ಯಾನ್ ದೇ' ಶಾರ್ಟ್ ಫಿಲ್ಮ್ ರಿಲೀಸ್ ಆಗಿದೆ. ಶಾಹೀರ್ ಶೇಖ್ ಮತ್ತು ಶ್ವೇತಾ ಬಸು ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೇರಳ ಕಾಲಿ ರಸ್ತೆಯಲ್ಲಿ ನಾಯಕಿ ಜೊತೆ ನಾಯಕ ಡ್ರೈವ್‌ಗೆ ಹೊರಡುತ್ತಾನೆ. ಈ ವೇಳೆ ಭೂತ-ಪ್ರೇತಗಳ ಬಗ್ಗೆ ಚರ್ಚೆ ಆರಂಭ ಆಗಿ ನಾಯಕಿ ಭಯ ಹುಟ್ಟಿಸಲು ಆರಂಭಿಸುತ್ತಾಳೆ. ಮುಂದೆನಾಗುತ್ತೆ ಅನ್ನುವುದೇ ಕಥೆ. ಇದು ಅಮೆಜಾನ್ ಶಾಪಿಂಗ್ ಆಪ್‌ನಲ್ಲಿರುವ ಮಿನಿ ಟಿವಿಯಲ್ಲೂ ಲಭ್ಯವಿದ್ದು, ಉಚಿತವಾಗಿ ನೋಡಬಹುದಾಗಿದೆ.


Click it and Unblock the Notifications











