ತಂದೆ ಜೊತೆ ಲಿಪ್ ಕಿಸ್ ಮಾಡಿದ್ದ ಪೂಜಾ ಭಟ್: "ನಾನು ಅವಳನ್ನು ಮದ್ವೆ ಆಗ್ತಿದ್ದೆ.." ಎಂದಿದ್ದ ಅಪ್ಪ

ಬಾಲಿವುಡ್ ಹಿರಿಯ ನಟಿ ಪೂಜಾ ಭಟ್ ಕಳೆದ ನಾಲ್ಕೈದು ದಿನಗಳಿಂದ ಚರ್ಚೆಯಲ್ಲಿದ್ದಾರೆ. ಈಗಾಗಲೇ ಆರಂಭ ಆಗಿರುವ ಹಿಂದಿ ಬಿಗ್ ಬಾಸ್ ಓಟಿಟಿಯ ಸೀಸನ್ 2ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಂದ ಪೂಜಾ ಭಟ್ ಬಗ್ಗೆ ಟ್ರೆಂಡಿಂಗ್‌ನಲ್ಲಿದ್ದಾರೆ.

ಪೂಜಾ ಭಟ್ 90ರ ದಶಕದಲ್ಲಿ ಬಂದ ಬಾಲಿವುಡ್‌ನ ಯಶಸ್ವಿ ನಾಯಕಿಯಲ್ಲಿ ಒಬ್ಬರು. ಆರಂಭದ ದಿನಗಳಲ್ಲಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದವು. ಅಪ್ಪ ಮಹೇಶ್ ಭಟ್‌ನಂತೆ ಮಗಳು ಭಟ್ ಕೂಡ ಸಕ್ಸಸ್ ಕಂಡಿದ್ದರು.

 Pooja Bhatt and Mahesh Bhatts Lip-kisses Sparked Controversy

ತಂದೆ ಮಹೇಶ್ ಭಟ್ ಅಂತಲೇ ಮಗಳು ಕೂಡ ಆಗಿನ ಕಾಲಕ್ಕೆ ಬೋಲ್ಡ್ ಸಿನಿಮಾಗಳಲ್ಲಿ ನಟಿಸಿದ್ದರು. ಅಂತಹ ಸಿನಿಮಾಗಳು ಮೆಚ್ಚುಗೆ ಕೂಡ ಗಳಿಸಿದ್ದರು. ಒಂದ್ಕಡೆ ತಂದೆ, ಇನ್ನೊಂದು ಕಡೆ ಮಗಳು. ಇಬ್ಬರೂ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಸ್ಟಾರ್‌ಡಸ್ಟ್ ಮ್ಯಾಗಜೀನ್ ಮುಖ ಪುಟದಲ್ಲಿ ಬಂದ ಫೋಟೊವೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಬಿಗ್‌ಬಾಸ್ ಮನೆಯೊಳಗೆ ಪೂಜಾ ಭಟ್ ಗದ್ದಲ

ಬಾಲಿವುಡ್‌ ನಟಿ, ನಿರ್ದೇಶಕಿ ಪೂಜಾ ಭಟ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಎಂಟ್ರಿ ಕೊಡುತ್ತಿದ್ದಂತೆ ತನ್ನ ಸಹ ಸ್ಪರ್ಧಿಯ ಜೊತೆ ಕಿತ್ತಾಟಕ್ಕೆ ಇಳಿದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಗದ್ದಲ ಎಬ್ಬಿಸಿದ್ದಾರೆ.

ಬಿಗ್ ಬಾಸ್ ಓಟಿಟಿ 2ನಲ್ಲಿ ಪೂಜಾ ಭಟ್ ಜೊತೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿಯ ಮಾಜಿ ಪತ್ನಿ ಆಲಿಯಾ ಸಿದ್ಧಿಕಿ ಕೂಡ ಇದ್ದಾರೆ. ಸದ್ಯ ಆಲಿಯಾ ಸಿದ್ದಿಕಿಯನ್ನು ನಾಮಿನೇಟ್ ಮಾಡುವ ಮೂಲಕ " ವಿಕ್ಟಿಮ್ ಕಾರ್ಟ್" ಪ್ಲೇ ಮಾಡಬಾರದೆಂದು ಹೇಳಿದ್ದಾರೆ. ಇನ್ನೊಂದು ಸನ್ನಿವೇಶದಲ್ಲಿ ಮತ್ತೊಬ್ಬ ಸ್ಪರ್ಧಿ ಪಾಲಕ್ ವಿರುದ್ಧ ತಿರುಗಿಬಿದ್ದು ಕಣ್ನೀರು ಹಾಕಿಸಿದ್ದಾರೆ. ಇವೇ ವೇಳೆ ಪೂಜಾ ಭಟ್ ಹಳೆಯ ವಿವಾದವೊಂದು ಚರ್ಚೆಗೆ ಬಂದಿದೆ.

 Pooja Bhatt and Mahesh Bhatts Lip-kisses Sparked Controversy

ತಂದೆ ಜೊತೆ ಲಿಪ್ ಕಿಸ್ ವಿವಾದ

90ರ ದಶಕದಲ್ಲಿ ಜನಪ್ರಿಯ ನಟಿಯಾಗಿದ್ದ ಪೂಜಾ ಭಟ್ 'ಸ್ಟಾರ್‌ಡಸ್ಟ್' ಮುಖ ಪುಟ್ಟಕ್ಕೆ ತಂದೆಯೊಂದಿಗೆ ಪೋಸ್ ಕೊಟ್ಟುದ್ದರು. ಆ ಫೋಟೊಗಳಲ್ಲಿ ಪೂಜಾ ಭಟ್ ತನ್ನ ತಂದೆಯ ತೊಡೆಯ ಮೇಲೆ ಕೂತು ಲಿಪ್ ಕಿಸ್ ಮಾಡಿದ್ದರು. ಈ ಫೋಟೊ ಮ್ಯಾಗಜೀನ್ ಮುಖ ಪುಟದಲ್ಲಿ ರಾರಾಜಿಸುತ್ತಿದ್ದಂತೆ ವಿವಾದಕ್ಕೊಳಗಾಗಿತ್ತು. ಜನರು ಈ ಫೋಟೊಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಪೂಜಾ ಭಟ್ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ ಮೊದಲ ಪತ್ನಿ ಕಿರಣ್ ಭಟ್ ಮಗಳು. 1989ರಲ್ಲಿ ತಂದೆ ಮಹೇಶ್ ಭಟ್ ನಿರ್ದೇಶಿಸಿದ 'ಡ್ಯಾಡಿ' ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಆಗ ಪೂಜಾಗೆ ಕೇವಲ 17 ವರ್ಷ. ವಿಚಿತ್ರ ಅಂದ್ರೆ, ಈ ಸಿನಿಮಾ ಕೂಡ ತಂದೆ ಮಗಳ ಸಂಬಂಧದ ಬಗ್ಗೆನೇ ಆಗಿತ್ತು.

"ನಾನು ಅವಳನ್ನು ಮದ್ವೆ ಆಗ್ತಿದ್ದೆ.."

ಸ್ಟಾರ್‌ಡಸ್ಟ್ ಮ್ಯಾಗಜೀನ್‌ನ ಫೋಟೊಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿತ್ತು. ಇತ್ತ ಮಹೇಶ್ ಭಟ್ ಪತ್ರಿಕಾಗೋಷ್ಠಿ ಕರೆದಿದ್ದರು. ಇದೇ ಫೋಟೊ ಶೂಟ್ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಅದು ಕೂಡ ವಿವಾದಕ್ಕೆ ಒಳಗಾಗಿತ್ತು. ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಪತ್ರಿಕಾಗೋಷ್ಠಿಯಲ್ಲಿ ಮಹೇಶ್ ಭಟ್ " ಪೂಜಾ ಒಂದು ವೇಳೆ ನನ್ನ ಮಗಳಾಗದೆ ಇದ್ದಿದ್ದರೆ, ನಾನು ಆಕೆಯನ್ನು ಮದುವೆ ಆಗುತ್ತಿದ್ದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಕೂಡ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಸದ್ಯ ಹಿಂದಿ ಬಿಗ್ ಬಾಸ್ ಓಟಿಟಿ 2ಗೆ ಎಂಟ್ರಿ ಕೊಟ್ಟಿರೋ ಪೂಜಾ ಭಟ್ ಅಲ್ಲೂ ಹವಾ ಎಬ್ಬಿಸಿದ್ದಾರೆ.

More from Filmibeat

English summary
When Bigg Boss Ott 2 contestants Pooja Bhatt and Mahesh Bhatt's Lip-kisses Sparked Controversy, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X