ಸಪ್ತಮಿ ಗೌಡ ತೆಲುಗು ಸಿನಿಮಾ 'ತಮ್ಮುಡು' ಒಟಿಟಿಗೆ ಬರೋದು ಯಾವಾಗ? ಯಾವುದರಲ್ಲಿ ಸ್ಟ್ರೀಮಿಂಗ್?

'ಕಾಂತಾರ' ನಟಿ ಸಪ್ತಮಿ ಗೌಡ ಕೈಯಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಇವೆ. ಇದರಲ್ಲೊಂದು ತೆಲುಗು ಸಿನಿಮಾ. ಟಾಲಿವುಡ್ ಸ್ಟಾರ್ ನಿತಿನ್ ನಟನೆಯ 'ತಮ್ಮುಡು' ಸಿನಿಮಾದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಸಿನಿಮಾದ ತುಣುಕುಗಳು ಸಿನಿಪ್ರಿಯರಲ್ಲಿ ಕುತೂಹಲವನ್ನು ಕೆರಳಿಸಿದ್ದಾರೆ.

ನಿತಿನ್, ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ತಮ್ಮುಡು' ಜೂನ್ 4ರಂದು ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ. ಮೇಲ್ನೋಟಕ್ಕೆ 'ತಮ್ಮುಡು' ಸಿನಿಮಾ ಒಂದು ಭಾವನಾತ್ಮಕ ಸನ್ನಿವೇಶಗಳಿಂದ ಕೂಡದ ಆಕ್ಷನ್ ಸಿನಿಮಾ ಎಂದು ತೋರುತ್ತಿದೆ. ಇನ್ನು ಸಪ್ತಮಿ ಗೌಡಗೆ ಇದು ಮೊದಲ ತೆಲುಗು ಸಿನಿಮಾ. ಹೀಗಾಗಿ ತೆಲುಗು ಮಂದಿ ಸಪ್ತಮಿ ಗೌಡ ಕೈ ಹಿಡಿಯುತ್ತಾರಾ? ಸಪ್ತಮಿ ಗೌಡ ಅಭಿನಯ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಎನ್ನುವ ಕುತೂಹಲವಿದೆ.

Where to watch Nithiin Sapthami Gowda upcoming movie Thammudu after its theatrical run

ಇನ್ನು ತೆಲುಗಿನ ಸ್ಟಾರ್ ನಿರ್ಮಾಪಕ ದಿಲ್ ರಾಜು 'ತಮ್ಮುಡು' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ದಿಲ್ ರಾಜು ಸ್ಮಾಲ್ ಬಜೆಟ್‌ ಸಿನಿಮಾಗಳನ್ನು ನಿರ್ಮಿಸಿದರೆ, ಅದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದು ಪಕ್ಕಾ. ಹೀಗಾಗಿ 'ತಮ್ಮುಡು' ಮೇಲೂ ಅದೇ ನಿರೀಕ್ಷೆಯಿದೆ. ಇನ್ನೊಂದು ಸಿನಿಮಾ ಬಿಡುಗಡೆಗೂ ಮುನ್ನವೇ ಒಟಿಟಿ ರೈಟ್ಸ್ ಕೂಡ ಸೇಲ್ ಆಗಿದೆ. ಹಾಗಿದ್ದರೆ, ಥಿಯೇಟರ್‌ನಲ್ಲಿ ತೆರೆಕಂಡ ಬಳಿಕ ಯಾವ ಒಟಿಟಿ ವೇದಿಕೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತೆ? ತಿಳಿಯುವುದಕ್ಕೆ ಮುಂದೆ ಓದಿ.

ಶ್ರೀರಾಮ್ ವೇಣು ನಿರ್ದೇಶಿಸಿರುವ 'ತಮ್ಮುಡು' ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಥಿಯೇಟರ್‌ನಲ್ಲಿ ಯಾವ ಮಟ್ಟಿಗೆ ಸದ್ದು ಮಾಡುತ್ತೆ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಒಂದು ವೇಳೆ ಸಿನಿಮಾ ಗೆದ್ದರೆ, ಒಟಿಟಿಯಲ್ಲಿ ರಿಲೀಸ್ ಆಗುವುದು ತಡವಾಗುತ್ತೆ. ಅದೇ ಸಿನಿಮಾಗೆ ಏನಾದರೂ ನೆಗೆಟಿವ್ ರೆಸ್ಪಾನ್ಸ್ ಸಿಕ್ಕರೆ, ನಿರೀಕ್ಷೆಗೂ ಮುನ್ನವೇ ಸಿನಿಮಾ ಬಿಡುಗಡೆಯಾಗಲಿದೆ.

ಇನ್ನು 'ತಮ್ಮುಡು' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳನ್ನು ನಿಲ್ಲಿಸಿದ ಬಲಿಕ ಅಮೆಜಾನ್ ಪ್ರೈ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಒಂದು ವೇಳೆ ಸಿನಿಮಾ ಚಿತ್ರಮಂದಿರದಲ್ಲಿ ಸದ್ದು ಮಾಡದೇ ಹೋದರೆ, ಒಂದು ತಿಂಗಳ ಒಳಗಾಗಿ, ಅಂದರೆ, ನಾಲ್ಕು ವಾರಗಳ ಅಂತರದಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ. ಸದ್ಯ ಒಟಿಟಿ ಪ್ಲಾಟ್‌ಫಾರ್ಮ್ ಹಾಗೂ ನಿರ್ಮಾಪಕರ ನಡುವೆ ಏನು ಒಪ್ಪಂದಗಳು ಆಗಿವೆ ಅನ್ನೋದು ಅಧಿಕೃತವಾಗಿ ರಿವೀಲ್ ಆಗಿಲ್ಲ.

Where to watch Nithiin Sapthami Gowda upcoming movie Thammudu after its theatrical run

ನಿತಿನ್, ಸಪ್ತಮಿ ಗೌಡ ನಟಿಸಿರುವ ಈ ಸಿನಿಮಾ 35 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಸಿನಿಮಾದ ಕಥೆಯ ಬಗ್ಗೆ ಚಿತ್ರತಂಡ ಸುಳಿವನ್ನು ಬಿಟ್ಟು ಕೊಡದೇ ಹೋದರೂ, ಇದು ಗ್ರಾಮೀಣ ಪ್ರದೇಶದ ರಿವೇಂಜ್ ಸ್ಟೋರಿ ಎಂದು ಹೇಳಲಾಗುತ್ತಿದೆ. ಹಳ್ಳಿಯ ಮುಗ್ಧ ಜನರನ್ನು ಕಣ್ಣಿಗೆ ಕಾಣದ ಪವರ್‌ಫುಲ್ ವ್ಯಕ್ತಿಗಳು ಹೇಗೆ ನಡೆಸಿಕೊಳ್ಳುತ್ತಾರೆ? ಅದರಿಂದ ಹೊರ ಬರುವುದಕ್ಕೆ ಆ ಜನರ ಹೋರಾಟ ಹೇಗಿರುತ್ತೆ? ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ.

'ತಮ್ಮುಡು' ಸಿನಿಮಾದಲ್ಲಿ ನಿತಿನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಸಪ್ತಮಿ ಗೌಡ, ಲಯಾ, ವರ್ಷಾ ಬೊಳ್ಳಮ್ಮ, ಸೌರಭ್ ಸಚ್‌ದೇವ್, ಸ್ವಸಿಕಾ, ಹರಿ ತೇಜಾ ಸೇರಿದಂತೆ ಹಲವು ನಟಿಸಿದ್ದಾರೆ. ಶ್ರೀರಾಮ್ ವೇಣು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, 'ಕಾಂತಾರ' ಖ್ಯಾತಿಯ ಅಜನೀಶ್ ಬಿ. ಲೋಕನಾಥ್ ಈ ಸಿನಿಮಾ ಟ್ಯೂನ್ ಅನ್ನು ಕಂಪೋಸ್ ಮಾಡಿದ್ದಾರೆ. ಥಿಯೇಟರ್‌ನಲ್ಲಿ ಸಿನಿಮಾ ಸದ್ದು ಮಾಡಿದರೆ, ಒಟಿಟಿಯಲ್ಲೂ 'ತಮ್ಮುಡು' ಗೆಲುವಿನ ನಗೆ ಬೀರಲಿದೆ.

More from Filmibeat

English summary
Where to watch Nithiin Sapthami Gowda upcoming movie Thammudu after its theatrical run.
Read more about: nithin sapthami gowda tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X