Womens Day 2025: ಮಹಿಳಾ ದಿನದಂದು ಓಟಿಟಿಯಲ್ಲಿ ನೋಡಬಹುದಾದ 5 ಸಿನಿಮಾಗಳು
ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ವಿಶೇಷವಾದ ಸ್ಥಾನವಿದೆ. ಮಹಿಳೆಯರನ್ನೇ ಪ್ರಧಾನವಾಗಿಸಿಕೊಂಡು ಕಥೆಯನ್ನು ಹೆಣೆದ ಸಿನಿಮಾಗಳು ಕೇವಲ ಮೆಚ್ಚುಗೆಯನ್ನಷ್ಟೇ ಅಲ್ಲ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿವೆ. ಈ ಕ್ಯಾಟಗರಿಯ ಸಿನಿಮಾಗಳು ಇಂದಿನ ಓಟಿಟಿ ಜಮಾನದಲ್ಲೂ ತನ್ನ ಚಾರ್ಮ್ ಅನ್ನು ಹಾಗೇ ಉಳಿಸಿಕೊಂಡಿವೆ. ಹಾಗೇ ಫಿಮೇಲ್ ಓರಿಯೆಂಟೆಡ್ ವೆಬ್ ಸೀರಿಸ್‌ಗಳು ಕೂಡ ಹೆಚ್ಚಾಗಿವೆ.
ಬೇರೆ ಭಾಷೆಗಳಿಗಿಂತ ಬಾಲಿವುಡ್‌ನಲ್ಲಿ ಹೆಚ್ಚು ಮಹಿಳಾ ಪ್ರಧಾನ ಸಿನಿಮಾಗಳು ನಿರ್ಮಾಣ ಆಗುತ್ತವೆ. ಅಲ್ಲಿನ ನಟಿಯರು ಕೂಡ ನಾಯಕರಿಗಿಂತ ಕಮ್ಮಿ ಇಲ್ಲ ಅನ್ನೋ ಹಾಗೇ ನಟಿಸಿದ ಉದಾಹರಣೆಗಳು ಇವೆ. ಹೊಸ ಜೋಷ್‌ನೊಂದಿಗೆ ಓಟಿಟಿ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ಜೊಯೋ ಹಾಟ್‌ಸ್ಟಾರ್‌ನಲ್ಲಿ ಉತ್ತಮವಾದ ಮಹಿಳಾ ಪ್ರಧಾನ ಸಿನಿಮಾಗಳು ಇವೆ. ತಾಪ್ಸಿ ಪನ್ನು, ಸುಶ್ಮಿತಾ ಸೇನ್, ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ರತ್ನ ಪಾಟಕ್ ಶಾರಂತಹ ದಿಗ್ಗಜರ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಟಾಪ್ 5 ಸಿನಿಮಾಗಳು ಇಲ್ಲಿವೆ.
ಸುಶ್ಮಿತಾ ಸೇನ್- 'ತಾಲಿ'
ಸುಶ್ಮಿತಾ ಸೇನ್ ಟ್ರಾನ್ಸ್‌ಜೆಂಡರ್ ಪರ ಹೋರಾಟಗಾರ್ತಿ ಶ್ರೀಗೌರಿ ಸಾವಂತ್ ಅವರ ರಿಯಲ್ ಲೈಫ್ ಅನ್ನು ಆಧರಿಸಿದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದುವೇ 'ತಾಲಿ'. ಇವರ ಕತೆಯನ್ನು ಸೀರಿಸ್‌ಗಳ ಲೆಕ್ಕಾಚಾರದಲ್ಲಿ ಓಟಿಟಿ ಪ್ರಿಯರಿಗೆ ಹೇಳಲಾಗಿತ್ತು. ಶ್ರೀಗೌರಿ ಸಾವಂತ್ ಪಾತ್ರದಲ್ಲಿ ಸುಶ್ಮಿತಾ ಸೇನ್ ವೀಕ್ಷಕರ ಮನ ಸೆಳೆದಿದ್ದರು. ಈ ವೆಬ್ ಸೀರಿಸ್ ಮೂಲಕ ಮಹಿಳೆಯರ ಸಬಲೀಕರಣವನ್ನು ಪ್ರೋತ್ಸಾಹಿಸಲಾಗಿತ್ತು. ಈ ವೆಬ್ ಸೀರಿಸ್ ಜೊಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ಸೋನಂ ಕಪೂರ್- 'ನೀರ್ಜಾ'
ಮಹಿಳೆಯರ ದಿನದಂದು ಓಟಿಟಿಯಲ್ಲಿ ನೋಡಬಹುದಾದ ಸಿನಿಮಾ ನೀರ್ಜಾ. ಸೋನಂ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಗಗನ ಸಖಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. 1986ರಲ್ಲಿ ಹೈಜಾಕ್ ಆದ ವಿಮಾನದಲ್ಲಿ ಪ್ರಯಾಣಿಕರನ್ನು ಬಚಾವ್ ಮಾಡುವುದಕ್ಕೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನೀರ್ಜಾ ಭಾನೋಟ್ ಅವರ ಕಥೆಯನ್ನು ತೆರೆಮೇಲೆ ತರಲಾಗಿತ್ತು. ನೀರ್ಜಾ ಪಾತ್ರದಲ್ಲಿ ನಟಿಸಿದ ಸೋನಂ ಕಪೂರ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದವು.

ಪ್ರಿಯಾಂಕಾ ಚೋಪ್ರಾ-'ಮೇರಿ ಕೂಮ್'
ಪ್ರಿಯಾಂಕಾ ಚೋಪ್ರಾ ಅವರ 'ಮೇರಿ ಕೂಮ್' ಈ ಬಾರಿಗೆ ಮಹಿಳಾ ದಿನದಂದು ನೋಡಬಹುದಾದ ಸಿನಿಮಾಗಳಲ್ಲಿ ಒಂದು. ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೂಮ್ ಕುರಿತಾದ ಸಿನಿಮಾವಿದು. ಮಣಿಪುರ ಮೂಲದ ಈ ಬಾಕ್ಸರ್ ಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆದರು. ಇವರ ಈ ಸ್ಪೂರ್ತಿದಾಖಕ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ತಾಪ್ಸಿ ಪನ್ನು- 'ಪಿಂಕ್'
ತಾಪ್ಸಿ ಪನ್ನು ನಟಿಸಿದ ಸಿನಿಮಾ 'ಪಿಂಕ್' ಸಿನಿಮಾ ಅತೀ ದೊಡ್ಡ ಸಕ್ಸಸ್ ಕಂಡ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಒಂದು. 'ಪಿಂಕ್' ಇದು ಕೇವಲ ಸಿನಿಮಾ ಆಗಿರಲಿಲ್ಲ. ಇದೊಂದು ಸ್ಟೇಟ್‌ಮೆಂಟ್ ಆಗಿ ಬದಲಾಗಿತ್ತು. ತಾಪ್ಸಿ ಪನ್ನು ಅಸಹಾಯಕ ಮಹಿಳೆಯಾಗಿ ಕೊನೆಯಲ್ಲಿ ಹೇಗೆ ಸಮಾಜದ ವಿರುದ್ಧ ಸಿಡಿದೇಳುತ್ತಾಳೆ ಅನ್ನೋದೇ ಕಥೆ. ಇದರಲ್ಲಿ ಅಮಿತಾಭ್ ಬಚ್ಚನ್ ಅಡ್ವೋಕೆಟ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಒಂದು ಡೈಲಾಗ್ "ನೋ ಅಂದರೆ ನೋ" ಅನ್ನೋದು ಇಂದಿಗೂ ಬಳಕೆಯಾಗುತ್ತಿದೆ.

ರತ್ನ ಪಾಟಕ್ ಶಾ- 'ಧಕ್ ಧಕ್'
ರತ್ನ ಪಾಟಕ್ ಶಾ 'ಧಕ್ ಧಕ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದು ವಯಸ್ಸು 50 ದಾಟಿದ ಮಹಿಳೆಯ ಆಸೆಯನ್ನು ತೀರಿಸಿಕೊಳ್ಳಲು ಮುಂದಾಗುವ ಕಥೆ. ಮೂರು ಮಹಿಳೆಯರಿಂದಿಗೆ ರೋಡ್ ಟ್ರಿಪ್ ಹೋಗುವ ಈ ಕಥೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ವಯಸ್ಸಿನ ಅಡೆತಡೆಗಳನ್ನೂ ಮೀರಿ ಸಿನಿಮಾ ಮಾಡಲಾಗಿತ್ತು. ರತ್ನ ಪಾಟಕ್ ಶಾ ಈ ಸಿನಿಮಾದಲ್ಲಿ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಈ ಐದು ಸಿನಿಮಾಗಳು ಜಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.


Click it and Unblock the Notifications











