ಕನ್ನಡದಲ್ಲಿ ಮತ್ತೊಂದ ವೆಬ್ ಸೀರಿಸ್ 'ರಾಕ್ಷಸ'; ಈ ಕ್ರೈಮ್ ಸೈಕಲಾಜಿಕಲ್ ಯಾವಾಗಿನಿಂದ ಸ್ಟ್ರೀಮಿಂಗ್?

ಕನ್ನಡದಲ್ಲಿ ವೆಬ್ ಸೀರಿಸ್‌ಗಳು ನಿರ್ಮಾಣ ಆಗುವುದೇ ಕಡಿಮೆ. ಕನ್ನಡ ಫಿಲ್ಮ್‌ ಮೇಕರ್ಸ್ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದು ತೀರಾ ವಿರಳ. ಆದರೆ, ಜೀ 5 ಕನ್ನಡದ ವೆಬ್ ಸೀರಿಸ್‌ಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಕನ್ನಡದ ಒರಿಜಿನಲ್ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಸ್ಕ್ರೀಮಿಂಗ್ ಮಾಡಿದ ವೆಬ್ ಸೀರಿಸ್‌ಗಳಿಗೆ ಉತ್ತಮ ಪ್ರತಿಕ್ರಿಯೆನೂ ಸಿಕ್ಕಿದೆ.

ಜೀ 5 ಈಗಾಗಲೇ ಸ್ಟ್ರೀಮಿಂಗ್ ಮಾಡಿದ ಕನ್ನಡದ ವೆಬ್ ಸೀರಿಸ್‌ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಕನ್ನಡದ ಫಿಲ್ಮ್ ಮೇಕರ್ಸ್‌ ಜೊತೆ ಕೈ ಜೋಡಿಸಿ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಸ್ಟ್ರೀಮಿಂಗ್ ಮಾಡಿರೋ ವೆಬ್ ಸೀರಿಸ್ 'ಅಯ್ಯನ ಮನೆ' ಹಾಗೂ 'ಮಾರಿಗಲ್ಲು' ವೆಬ್ ಸೀರಿಸ್ ಸಕ್ಸಸ್ ಕಂಡಿದೆ. ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

Zee 5 announced Vijay Raghavendra starrer Rakshasa web series produced by Tharun Sudhir

ಇದೇ ಜೋಷ್‌ನಲ್ಲಿ ಜೀ 5 ಮತ್ತೊಂದು ವೆಬ್ ಸೀರಿಸ್ ಅನ್ನು ಅನೌನ್ಸ್ ಮಾಡಿದೆ. ಅದುವೇ 'ರಾಕ್ಷಸ'. ಟೈಟಲ್‌ ಕೇಳುವುದಕ್ಕೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್. ಇದು ಸ್ಯಾಂಡಲ್‌ವುಡ್‌ನ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅವರ ಚೊಚ್ಚಲ ವೆಬ್ ಸೀರಿಸ್ ಅನ್ನೋದು ಗಮನಿಸಬೇಕಾದ ಅಂಶ. ಹಾಗಿದ್ದರೆ, ಈ ವೆಬ್ ಸೀರಿಸ್ ಯಾವಾಗ ಸ್ಟ್ರೀಮಿಂಗ್ ಆಗುತ್ತಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ರಾಕ್ಷಸ' ಈ ಕನ್ನಡ ವೆಬ್ ಸೀರಿಸ್ ನಂಬಿಕೆ ಹಾಗೂ ಕೊಲೆಯ ಸುತ್ತ ಬೇರೂರಿರುವ ಕರಾಳ ಕ್ರೈಂ ಲೋಕದ ಕಥೆಯ ಸುತ್ತ ಹೆಣೆದಿರುವ ಸರಣಿಯಾಗಿದೆ. ಹೀಗಾಗಿ ಕ್ರೈಂ ಕಥೆಯನ್ನು ಹೇಳುತ್ತಿರುವ 'ರಾಕ್ಷಸ' ವೆಬ್ ಸೀರಿಸ್‌ಗೆ ವೀಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಸದ್ಯ 'ರಾಕ್ಷಸ' ವೆಬ್ ಸೀರಿಸ್‌ನ ಟ್ರೈಲರ್ ರಿಲೀಸ್ ಆಗಿದ್ದು, ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಈ ಮೂಲಕ zee5 ಮತ್ತೊಂದು ವಿಶೇಷ ಕಥೆಯ ಮೂಲಕ ವೀಕ್ಷಕರಿಗೆ ಥ್ರಿಲ್ ನೀಡಲಿದೆ.

ವಿಜಯ ರಾಘವೇಂದ್ರ ನಟನೆಯ 'ರಾಕ್ಷಸ' ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸೀರಿಸ್ ಅನ್ನು ತರುಣ್ ಸುಧೀರ್ ಪ್ರೊಡಕ್ಷನ್ಸ್‌ನಲ್ಲಿ ಜನಪ್ರಿಯ ನಿರ್ದೇಶಕ ತರುಣ್‌ ಸುಧೀರ್ ನಿರ್ಮಿಸಿದ್ದಾರೆ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ರಾಕ್ಷಸ ಮೂಲಕ ಸಿರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಇವರೊಂದಿಗೆ ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತಮ್ಮ ಚೊಚ್ಚಲ ಓಟಿಟಿ ಎಂಟ್ರಿ ಬಗ್ಗೆ ಮಾತನಾಡಿದ ನಟ ವಿಜಯ್ ರಾಘವೇಂದ್ರ, "ರಾಕ್ಷಸ OTT ಲೋಕಕ್ಕೆ ನನ್ನ ಮೊದಲ ಹೆಜ್ಜೆಯಾಗಿದೆ. ಈ ಜರ್ನಿಯನ್ನು ಆರಂಭಿಸಲು ನಾನು ಇದಕ್ಕಿಂತ ಪ್ರಾಮಾಣಿಕ, ಇಲ್ಲವೇ ಸವಾಲಿನ ಕಥೆಯನ್ನು ಕೇಳಲು ಸಾಧ್ಯವಿಲ್ಲ. ನನ್ನನ್ನು ಆಕರ್ಷಿಸಿದ್ದು ಅಪರಾಧ ಅಥವಾ ಸಸ್ಪೆನ್ಸ್ ಮಾತ್ರವಲ್ಲ.. ಕರ್ತವ್ಯ, ನಂಬಿಕೆ ಮತ್ತು ವೈಯಕ್ತಿಕ ಜವಾಬ್ದಾರಿಯ ನಡುವೆ ಹರಿದ ವ್ಯಕ್ತಿ ಪಾತ್ರದ ಭಾವನಾತ್ಮಕ ತೂಕ. ZEE5 ಬೇರೂರಿರುವ, ಶಕ್ತಿಯುತವಾದ ಕನ್ನಡ ಕಥೆಗಳಿಗೆ ಜಾಗವನ್ನು ಸೃಷ್ಟಿಸುತ್ತಿದೆ ಮತ್ತು OTT ರಾಕ್ಷಸದಂತಹ ನಿರೂಪಣೆಗಳು ಉಸಿರಾಡಲು ಮತ್ತು ಪ್ರೇಕ್ಷಕರೊಂದಿಗೆ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ. ಅಂತಿಮ ಸಂಚಿಕೆಯ ನಂತರವೂ ಈ ಸರಣಿಯು ಶಾಶ್ವತವಾದ ಪ್ರಭಾವ ಬೀರುತ್ತದೆ ಎಂದು ನಾನು ನಂಬುತ್ತೇನೆ " ಎಂದರು.

ಓಟಿಟಿಗಾಗಿ ವೆಬ್‌ ಸೀರಿಸ್ ಚೊಚ್ಚಲ ನಿರ್ಮಾಣದ ಬಗ್ಗೆ ತರುಣ್ ಸುಧೀರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಒಬ್ಬ ನಿರ್ಮಾಪಕನಾಗಿ, ನಾನು ಬೇರೂರಿರುವ ಸ್ಥಳದ ಪ್ರಾಮಾಣಿಕ ಕಥೆಯನ್ನು ಬೆಂಬಲಿಸಲು ಉತ್ಸುಕನಾಗಿದ್ದೆ. ರಾಕ್ಷಸ ತನ್ನ ಬಲವಾದ ಬರವಣಿಗೆ ಮತ್ತು ತನಿಖಾ ತಿರುಳಿನಿಂದಾಗಿ ಎದ್ದು ಕಾಣುತ್ತದೆ. ಈ ಕಥೆಯು ಉತ್ತರ ಕರ್ನಾಟಕದಲ್ಲಿ ಸೆಟ್ ಆಗಿರುವುದರಿಂದ ನಾವು ವಿಶೇಷವಾಗಿ ಈ ವೆಬ್ ಸೀರಿಸ್ ಬಗ್ಗೆ ಉತ್ಸುಕರಾಗಿದ್ದೇವೆ. ಈ ಪ್ರಾಜೆಕ್ಟ್ ಜೊತೆಗೆ ಓಟಿಟಿ ಕ್ಷೇತ್ರಕ್ಕೆ ಕಾಲಿಡುವುದು ಒಂದು ರೋಮಾಂಚಕಾರಿ ಕಲಿಕೆಯ ಅನುಭವವಾಗಿದೆ." ಎಂದು ತರುಣ್ ಸುಧೀರ್ ಅಭಿಪ್ರಾಯ ಹಂಚಿಕೊಂಡರು.

ಅಂದ್ಹಾಗೆ ಈ 'ರಾಕ್ಷಸ' ಕ್ರೈಮ್ ಸೈಕಾಲಜಿಕಲ್ ವೆಬ್ ಸೀರಿಸ್ ಬರೋಬ್ಬರಿ ಏಳು ಭಾಗಗಳಲ್ಲಿ ಪ್ರಸಾರವಾಗಲಿದೆ. ಫೆಬ್ರವರಿ 20 ರಿಂದ ಸ್ಟ್ರೀಮಿಂಗ್ ಆಗಲಿದೆ ಎಂದು ಜೀ 5 ಅನೌನ್ಸ್ ಮಾಡಿದೆ.

More from Filmibeat

English summary
Zee 5 announced Vijay Raghavendra starrer Rakshasa web series produced by Tharun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X