ಜೀ ಕನ್ನಡದ ಸರಿಗಮಪ ಸೀಸನ್ 21 ಒಟಿಟಿಯಲ್ಲಿ ನೇರ ಪ್ರಸಾರ; ಯಾವಾಗ? ಎಲ್ಲಿ?

ಜೀ ಕನ್ನಡದಲ್ಲಿ ಹಲವು ವರ್ಷಗಳಿಂದ ಪ್ರಸಾರ ಆಗುತ್ತಿರುವ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ 'ಸರಿಗಮಪ'. ಈ ಬಾರಿ 21ನೇ ಸೀಸನ್ ನಡೆಯುತ್ತಿದ್ದು, ಫಿನಾಲೆಗೆ ಅದ್ಧೂರಿಯಾಗಿ ಅಂತ್ಯ ಹಾಡುವುದಕ್ಕೆ ಜೀ ಸಂಸ್ಥೆ ನಿರ್ಧರಿಸಿದೆ. ಈಗಾಗಲೇ 13 ಮಂದಿ ಸ್ಪರ್ಧಿಗಳು ಸಂಗೀತ ರಿಯಾಲಿಟಿ ಶೋನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಟಿಕೆಟ್‌ ಟು ಫಿನಾಲೆ ಅಂತ ಇತ್ತೀಚೆಗೆ ಸದ್ದು ಬೇರೆ ಮಾಡಿತ್ತು.

ಈ ಬಾರಿ ಸರಿಗಮಪ ಸೀಸನ್ 21 ಅನ್ನು ಒಟಿಟಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಅವರದ್ದೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜೀ5 ನಲ್ಲಿ ಲೈವ್ ಮಾಡಲಾಗುತ್ತಿದೆ. ಈ ಮೂಲಕ ರಿಯಾಲಿಟಿ ಶೋ ಅನ್ನು ಒಟಿಟಿಯಲ್ಲಿ ನೇರ ಪ್ರಸಾರ ಮಾಡುವುದ ಮೂಲಕ ಕನ್ನಡದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುವುದಕ್ಕೆ ಜೀ 5 ಮುಂದಾಗಿದೆ. ಇದು ಭಾರತೀಯ OTT ಪ್ಲಾಟ್ಫಾರ್ಮ್ ನಲ್ಲಿ ಇತಿಹಾಸ ಸೃಷ್ಟಿಸುವುದಂತೂ ಗ್ಯಾರಂಟಿ ಎನ್ನಲಾಗಿದೆ.

Zee Kannada reality show Saregamapa season 21 will be live streaming on Zee 5 ott platform

ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಸಿಂಗಿಂಗ್ ರಿಯಾಲಿಟಿ ಶೋ 'ಸರಿಗಮಪ' ತನ್ನದೇ ಫ್ಯಾನ್ ಬೇಸ್ ಅನ್ನು ಹೊಂದಿದೆ. ಈ ಬಾರಿ ಟಿವಿಗಿಂತ ಮೊದಲೇ ಒಟಿಟಿಯಲ್ಲಿ ಪ್ರಸಾರ ಆಗಲಿದೆ. Zee5ನಲ್ಲಿ 'ಸರಿಗಮಪ ಫಿನಾಲೆ' ನೇರ ಪ್ರಸಾರ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡಿಗರ ಫೇವರಿಟ್ ಸಿಂಗಿಂಗ್ ರಿಯಾಲಿಟಿ ಶೋ ಒಟಿಟಿ ವೇದಿಕೆಗೆ ಲಗ್ಗೆ ಇಡುತ್ತಿದೆ. ಇದರೊಂದಿಗೆ ಜೀ5 ಚಂದದಾರರಿಗೆ 'ಸ ರಿ ಗ ಮ ಪ ಫಿನಾಲೆ'ಯ ಸಂಪೂರ್ಣ ಮಾಹಿತಿಯನ್ನು ತಕ್ಷಣವೇ ಸಿಗುವಂತೆ ಮಾಡಲಾಗಿದೆ. ಅಲ್ಲದೆ ಫಿನಾಲೆ ನಡೆಯುವ ಹೊತ್ತಲ್ಲೇ ಎಲ್ಲಿದ್ದಾರೋ ಅಲ್ಲಿಂದಲೇ ಈ ಜನಪ್ರಿಯ ಸಿಂಗಿಂಗ್ ವೀಕ್ಷಣೆ ಮಾಡುವ ಅವಕಾಶ ಮಾಡಿಕೊಡಲಾಗಿದೆ.

'ಸರಿಗಮಪ ಸೀಸನ್ 21'ರಲ್ಲಿ 'ಮೋಸ್ಟ್ ಪಾಪ್ಯುಲರ್ ಸಿಂಗರ್' ಅನ್ನು ಜೀ 5 ಹುಡುಕಾಟದಲ್ಲಿದೆ. ಹೀಗಾಗಿ ಈ ಆಯ್ಕೆ ಪ್ರಕ್ರಿಯೆಯಲ್ಲಿಯೂ ಜೀ5 ಚಂದಾದಾರರು ಭಾಗವಹಿಸಬಹುದು. ಅಂದ್ಹಾಗೆ ಈ ಆಯ್ಕೆ ಪ್ರಕ್ರಿಯೆ ಇದೇ ತಿಂಗಳು ಅಂದರೆ, ಮೇ 16 ರಿಂದ ಮೇ 22ರ ವರೆಗೆ ನಡೆಯಲಿದೆ. ಚಂದಾದಾರರು ತಮ್ಮ ಅಚ್ಚು ಮೆಚ್ಚಿನ ಗಾಯಕನನ್ನು Zee5 App ಮೂಲಕ ವೋಟ್ ಮಾಡಿ ಆಯ್ಕೆ ಮಾಡುವ ಅವಕಾಶವಿದೆ. ಇಷ್ಟೇ ಅಲ್ಲ ಈ ವೋಟಿಂಗ್ ಪ್ರಕ್ರಿಯೆಲ್ಲಿ ಭಾಗವಹಿಸಿದವರಿಗೆ ಒಳ್ಳೊಳ್ಳೆ ಬಹುಮಾನಗಳು ಸಿಗುವ ಸಾಧ್ಯತೆಗಳು ಕೂಡ ಇವೆ. ಹಾಗೇ 'ಮೋಸ್ಟ್ ಫೇವರಿಟ್ ವೋಟರ್' ಅನ್ನೋ ಪಟ್ಟ ಒಬ್ಬ ಅದೃಷ್ಟ ಚಂದಾದಾರನಿಗೆ ದೊರೆಯಲಿದೆ.

Zee Kannada reality show Saregamapa season 21 will be live streaming on Zee 5 ott platform

ಪ್ರತಿ ಬಾರಿಯಂತೆ 'ಸ ರಿ ಗ ಮ ಪ 21'ರ ಫಿನಾಲೆಯ ನಿರೂಪಣೆಯನ್ನು ಕಿರುತೆರೆ ವೀಕ್ಷಕರ ಅಚ್ಚು ಮೆಚ್ಚಿನ ನಿರೂಪಕಿ ಅನುಶ್ರೀ ಅವರೇ ಮಾಡುತ್ತಿದ್ದಾರೆ. ಇವರೊಂದಿಗೆ ಜಡ್ಜ್‌ಗಳಾಗಿ ಗಾಯಕ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಫಿನಾಲೆಯಲ್ಲಿ ಸ್ಪರ್ಧಿಗಳಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.

ಸಿಂಗಿಂಗ್ ರಿಯಾಲಿಟಿ ಶೋ ಅನ್ನು ಒಟಿಟಿಯಲ್ಲಿ ಲೈವ್ ಮಾಡುತ್ತಿರುವ ಉದ್ದೇಶವನ್ನು ಜೀ5 ಹಾಗೂ ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ರಿವೀಲ್ ಮಾಡಿದ್ದಾರೆ. " ಕರ್ನಾಟದಕ ಸಂಗೀತ ಪರಂಪರೆಯನ್ನು ಎತ್ತಿ ಹಿಡಿಯುತ್ತಿರುವ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಜೀ 5ನಲ್ಲಿ ನೇರ ಪ್ರಸಾರ ಆಗುತ್ತಿದೆ. ಈ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಜನರು ಈ ಕಾರ್ಯಕ್ರಮವನ್ನು ಅಡೆತಡೆಯಿಲ್ಲದೆ ವೀಕ್ಷಿಸಬಹುದಾಗಿದೆ. ಇಂತಹ ಪ್ರಾದೇಶಿಕ ಕಂಟೆಂಟ್‌ ಹಾಗೂ ಮ್ಯೂಸಿಕ್ ಜೀ5 ಬೆಳವಣಿಗೆ ಸಹಕಾರಿಯಾಗಿದೆ. ಇಂತಹ ಪ್ರಾದೇಶಿಕ ಕಂಟೆಂಟ್‌ಗಳನ್ನು ಜೀ5ನಲ್ಲಿ ಪ್ರಸಾರ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಇನ್ನಷ್ಟು ಹತ್ತಿರವಾಗುತ್ತೇವೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಇದೇ ಮೊದಲ ಬಾರಿಗೆ ಇಂತಹ ಹೆಜ್ಜೆಯನ್ನು ಇಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವೀಕ್ಷಕರು ಇನ್ನಷ್ಟು ಪ್ರಯೋಗಗಳನ್ನು ನಿರೀಕ್ಷೆ ಮಾಡಬಹುದು" ಎಂದು ಮಾಹಿತಿ ನೀಡಿದ್ದಾರೆ.

ಅಂದ್ಹಾಗೆ, 'ಸರಿಗಮಪ 21' ಫಿನಾಲೆ ಇದೇ ಜೂನ್ 5ರಂದು ಜೀ5 ಆಪ್‌ನಲ್ಲಿ ನೇರಪ್ರಸಾರ ಆಗುತ್ತಿದೆ. ಇನ್ನು 6 ಮಂದಿ ಸ್ಪರ್ಧಿಗಳಲ್ಲಿ ಗೆಲುವು ಯಾರಿಗೆ ಸಿಗುತ್ತೆ? ಅನ್ನೋದು ಸದ್ಯಕ್ಕೆ ಕುತೂಹಲ.

More from Filmibeat

English summary
Zee Kannada reality show Saregamapa season 21 will be live streaming on Zee 5 ott platform. Here is the details;
Read more about: reality show music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X