Zee5ನ ಕನ್ನಡದ ವೆಬ್ ಸೀರಿಸ್‌ಗೆ ಮೊದಲ ಜಯ; ಅಯ್ಯನ ಮನೆ ಬರೆದ ದಾಖಲೆ ಏನು?

ಎಲ್ಲಾ ಭಾಷೆಯಲ್ಲಿ ವೆಬ್‌ ಸೀರಿಸ್‌ಗಳು ಸದ್ದು ಮಾಡುತ್ತಿವೆ. ಆದರೆ, ಕನ್ನಡದಲ್ಲಿ ಮಾತ್ರ ವೆಬ್ ಬಂದಿದ್ದರೂ, ದೊಡ್ಡ ಮಟ್ಟಕ್ಕೆ ಸದ್ದು ಮಾಡಿರಲಿಲ್ಲ. ಓಟಿಟಿ ಜಮಾನದಲ್ಲೂ ವೆಬ್ ಸೀರಿಸ್ ಮಾಡಿ ಪರಭಾಷೆಗಳಲ್ಲಿ ಸೆಡ್ಡು ಹೊಡೆಯುವವರೇ ಇಲ್ವಲ್ಲ ಎನ್ನುವ ಅಳುಕು ಕನ್ನಡಿಗರಿಗೆ ಇತ್ತು. ಈ ಹಿಂದೆನೇ ವೆಬ್ ಸೀರಿಸ್ ಮಾಡುವ ಪ್ರಯತ್ನ ಮಾಡಿದರೂ, ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿರಲಿಲ್ಲ.

ಕನ್ನಡಿಗರಿಗೂ ಓಟಿಟಿಯಲ್ಲಿ ವೆಬ್ ಸೀರಿಸ್‌ಗಳನ್ನು ನೋಡಬೇಕು ಎನ್ನುವ ಹಂಬಲವಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ವೆಬ್‌ ಸೀರಿಸ್‌ಗಳು ಯಶಸ್ಸು ಕಂಡಿವೆ. ಫಿಲ್ಮ್ ಮೇಕರ್ಸ್ ವೆಬ್ ಸೀರಿಸ್ ಮಾಡುವುದಕ್ಕೆ ಬ್ಯುಸಿಯಾಗಿದ್ದಾರೆ. ಆದರೆ, ಕನ್ನಡ ಚಿತ್ರರಂಗ ಮಾತ್ರ ಈ ವಿಚಾರದಲ್ಲಿ ಹಿಂದೆ ಬಿತ್ತು. ಕೊನೆಗೂ ವೆಬ್ ಸೀರಿಸ್‌ ಅಖಾಡದಲ್ಲಿ ದೊಡ್ಡದೊಂದು ಯಶಸ್ಸು ಸಿಕ್ಕಿದೆ. ಆ ವೆಬ್ ಸೀರಿಸ್‌ 'ಅಯ್ಯನ ಮನೆ'.

Zee5 first Kannada mini web series Ayyana Mane recorded 100 million minuts streaming

Zee5 ಒರಿಜಿನಲ್ 'ಅಯ್ಯನ ಮನೆ' ಓಟಿಟಿಯಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಪರಭಾಷೆಯ ವೆಬ್ ಸೀರಿಸ್‌ಗಳನ್ನು ಕನ್ನಡದಲ್ಲಿ ನೋಡಿ ಖುಷಿ ಪಡುತ್ತಿದ್ದ ಕನ್ನಡಿಗರು ಈಗ ನಮ್ಮದೇ ಭಾಷೆಯಲ್ಲಿ ನೋಡಿ ಖುಷಿ ಪಟ್ಟಿದ್ದಾರೆ. ಇದು ಮಿನಿ ವೆಬ್ ಸೀರಿಸ್ ಆಗಿದ್ದರೂ, ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ಇದೇ ಜೋಷ್‌ನಲ್ಲಿ ಕನ್ನಡದಲ್ಲೂ ಸಾಲು ಸಾಲು ವೆಬ್ ಸೀರಿಸ್ ಓಟಿಟಿಗೆ ಲಗ್ಗೆ ಇಡಬಹುದಾ? ಸದ್ಯಕ್ಕಂತೂ ಎಲ್ಲರೂ ಅಂತಹದ್ದೊಂದು ನಿರೀಕ್ಷೆಯಿದೆ.

ಮೊದಲ ಬಾರಿಗೆ Zee5 ಕನ್ನಡದ ವೆಬ್‌ ಸೀರಿಸ್ ಅನ್ನು ಸ್ಟ್ರೀಮಿಂಗ್ ಮಾಡಿತ್ತು. ಶ್ರುತಿ ನಾಯ್ಡು ಮಿನಿ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡಿದ್ದರು. 'ಅಯ್ಯನ ಮನೆ' ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಈ ವೆಬ್‌ ಸೀರಿಸ್‌ನಿಂದ Zee5 ಅನ್ನು ಸಬ್‌ಸ್ಕ್ರೈಬ್ ಮಾಡುವ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಮೊದಲ ಬಾರಿಗೆ ಮಾಡಿದ ಪ್ರಯೋಗ ಕೈ ಹಿಡಿದೆ. ಕನ್ನಡದಲ್ಲಿ ವೆನ್ ಸೀರಿಸ್ ಯಾರು ನೋಡಲ್ಲ? ವೆಬ್ ಸೀರಿಸ್ ಮಾಡುವುದಕ್ಕೆ ಬರೋದಿಲ್ಲ ಎನ್ನುವವರಿಗೆ 'ಅಯ್ಯನ ಮನೆ' ಉದಾಹರಣೆಯಾಗಿದೆ.

'ಅಯ್ಯನ ಮನೆ' ಯಶಸ್ಸು ಕಂಡಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದೆ. ಜಾಜಿಯ ಈ ರೋಚಕ ಕಥೆ ಓಟಿಟಿ ವೇದಿಕೆಯಲ್ಲಿ ಬರೋಬ್ಬರಿ 100 ಮಿಲಿಯನ್ ಮಿನಿಟ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಇನ್ನು ಈ ಮಿನಿ ವೆಬ್ ಸೀರಿಸ್‌ನಲ್ಲಿ ಒಟ್ಟು 7 ಸಂಚಿಕೆಗಳು ಇವೆ. ಪ್ರತಿಯೊಂದು ಸಂಚಿಕೆ ಕೂಡ ವೀಕ್ಷಕರಲ್ಲಿ ಕುತೂಹಲ, ಭಯ, ಥ್ರಿಲ್ ನೀಡುತ್ತೆ. ಒಬ್ಬೊಬ್ಬರ ಪಾತ್ರನ್ನೂ ನಿರ್ದೇಶಕ ರಮೇಶ್ ಇಂದಿರಾ ಅಚ್ಚು ಕಟ್ಟಾಗಿ ಹೆಣೆದಿದ್ದಾರೆ.

'ಅಯ್ಯನ ಮನೆ' ವೆಬ್ ಸರಣಿಯಲ್ಲಿ 'ದಿಯಾ' ಸಿನಿಮಾ ಮೂಲಕ ಜನಮನ ಗೆದ್ದಿರುವ ನಟಿ ಖುಷಿ ರವಿ ಜಾಜಿ ಪಾತ್ರದಲ್ಲಿ ನಟಿಸಿದ್ದಾರೆ. 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನಟಿಸಿದ್ದ ನಾಯಕ ನಟ ಅಕ್ಷಯ್ ನಾಯಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ 'ಕಾಂತಾರ' ಸಿನಿಮಾದ ನಟಿ ಮಾನಸಿ ಸುಧೀರ್ ಗಂಭೀರ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ.

Zee5 first Kannada mini web series Ayyana Mane recorded 100 million minuts streaming

ಹಳ್ಳಿ ಹುಡುಗಿ ಜಾಜಿ ಮದುವೆಯಾಗಿ ನೂರಾರು ಕನಸುಗಳನ್ನು ಹೊತ್ತು ಪತಿ ಮನೆಯನ್ನು ಸೇರುತ್ತಾಳೆ. ಜಾಜಿಯನ್ನು ಅತಿಯಾಗಿ ಪ್ರೀತಿಸುವ ಪತಿ ಅವಳಿಗೂ ಇಷ್ಟ. ಆದರೆ, ಪತಿಯ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಜಾಜಿಗೆ ವಿಚಿತ್ರ ಅನುಭವಗಳು ಆಗುವುದಕ್ಕೆ ಶುರುವಾಗುತ್ತವೆ. ಜಾಜಿ ಹಳ್ಳಿಯ ಹುಡುಗಿ. ಗಂಡನ ಮನೆಯಲ್ಲಾಗುವ ವಿಚಿತ್ರ ಅನುಭವಗಳನ್ನು ಅನುಭವಿಸುತ್ತಾ ಕಥೆ ಮುಂದಕ್ಕೆ ಸಾಗುತ್ತೆ. ಈ ಭಾವನಾತ್ಮಕ ಪಯಣದಲ್ಲಿ ಜಾಜಿ ಮನೆಯಲ್ಲಿನ ರಹಸ್ಯಗಳನ್ನು ಬಯಲು ಮಾಡುತ್ತಾಳಾ? ಇಲ್ಲವೇ ಇವಳೇ ರಹಸ್ಯವಾಗಿರುತ್ತಾಳಾ ಎಂಬುವುದೇ ಕುತೂಹಲ.

'ಅಯ್ಯನ ಮನೆ' ವೆಬ್ ಸೀರೀಸ್ ಅನ್ನು ರಮೇಶ್ ಇಂದಿರಾ ನಿರ್ದೇಶಿಸಿದ್ದಾರೆ. ಈ ವೆಬ್ ಸಿರೀಸ್‌ನಲ್ಲಿ ನಿರ್ದೇಶನದ ಜೊತೆಗೆ ರಮೇಶ್ ಇಂದಿರಾ, ಶೋಭರಾಜ್ ಪಾವೂರ್, ಅನಘಾ ನಾಗೇಶ್, ರಮ್ಯಾ ಶಂಕರ್, ಗೌರಿ ಕೃಷ್ಣ, ವಿಜಯ್ ಶೋಭರಾಜ್ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ನಟಿಸಿದ್ದಾರೆ.

More from Filmibeat

Read more about: web series sandalwood zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X