ಕನ್ನಡದಲ್ಲೂ ಮಿನಿ ವೆಬ್ ಸೀರಿಸ್ 'ಅಯ್ಯನ ಮನೆ'; ಎಲ್ಲಿ? ಯಾವಾಗ ನೋಡಬಹುದು ಅಂದರೆ..?

ಈಗಂತೂ ಥಿಯೇಟರ್‌ಗೆ ಬದಲಿಯಾಗಿ ಓಟಿಟಿ ಪ್ರೇಕ್ಷಕರನ್ನು ಆವರಿಸಿಕೊಂಡುಬಿಟ್ಟಿದೆ. ಭಾರತದ ಎಲ್ಲಾ ಪ್ರಮುಖ ಭಾಷೆಯ ಸಿನಿಮಾ ಮಂದಿನೂ ಓಟಿಟಿ ಕಡೆಗೆ ಒಂದು ಕಣ್ಣು ಇಟ್ಟಿರುತ್ತಾರೆ. ಇತ್ತೀಚೆಗಂತೂ ಸಿನಿಮಾಗಿಂತ ಹೆಚ್ಚಾಗಿ ವೆಬ್‌ ಸೀರಿಸ್ ಕಡೆಗೆ ವಾಲುತ್ತಿರುವವರ ಸಂಖ್ಯೆನೂ ಅಷ್ಟೇ ದೊಡ್ಡದಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ವೆಬ್‌ ಸೀರಿಸ್‌ ಹೆಚ್ಚೆಚ್ಚು ನಿರ್ಮಾಣ ಆಗುತ್ತಿದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಮಾತ್ರ ಹಿಂದೆ ಉಳಿದುಕೊಂಡಿದೆ.

ಕನ್ನಡ ಪ್ರೇಕ್ಷಕರು ಡಬ್ ಆದ ಬೇರೆ ಭಾಷೆಯ ವೆಬ್‌ ಸೀರಿಸ್‌ಗಳನ್ನು ನೋಡಿ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಇದೇ ಕೊರಗಿನಲ್ಲಿದ್ದ ಸಿನಿಪ್ರಿಯರಿಗೊಂದು ಸಿಹಿ ಸುದ್ದಿಯಿದೆ. ಜೀ 5ನಲ್ಲಿ ಕನ್ನಡ ಸಿನಿಪ್ರಿಯರಿಗಾಗಿ ಹೊಸ ಸಾಹಸಕ್ಕೆ ಕೈ ಹಾಕಿದೆ. ಕನ್ನಡದಲ್ಲಿ ಮಿನಿ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡಿದ್ದು. ಅದು ಇದೇ ತಿಂಗಳು ಜೀ 5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Zee5 first Kannada mini web series Ayyana Mane streaming date and details

ಕನ್ನಡ ಸಿನಿಮಾ ಪ್ರೇಮಿಗಳಿಗಾಗಿ ಜೀ 5 ಮಿನಿ ವೆಬ್ ಸೀರೀಸ್ ಅನ್ನು ಪರಿಚಯಿಸುತ್ತಿದೆ. ಅದುವೇ 'ಅಯ್ಯನ ಮನೆ'. ಇದು ಜೀ 5ನಿಂದ ಬರುತ್ತಿರುವ ಮೊದಲ ಕನ್ನಡ ಮಿನಿ ವೆಬ್ ಸೀರಿಸ್. ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಾಗೂ ನಟ ರಮೇಶ್ ಇಂದಿರಾ ಈ ವೆಬ್ ಸೀರಿಸ್ ಅನ್ನು ಡೈರೆಕ್ಟ್ ಮಾಡಿದ್ದಾರೆ. ಹೀಗಾಗಿ ಓಟಿಟಿವೇ ಕ್ಷೇತ್ರದಲ್ಲಿ ಈ ವೆಬ್‌ ಸೀರಿಸ್‌ ಮೇಲೊಂದು ಕಣ್ಣಿದೆ. ಒಂದು ವೇಳೆ 'ಅಯ್ಯನ ಮನೆ' ಯಶಸ್ಸು ಕಂಡರೆ, ಇನ್ನೊಂದಿಷ್ಟು ವೆಬ್‌ ಸೀರಿಸ್ ಅನ್ನು ನಿರೀಕ್ಷೆ ಮಾಡಬಹುದು.

ಇನ್ನು 'ಅಯ್ಯನ ಮನೆ' ಮಿನಿ ವೆಬ್‌ ಸೀರಿಸ್‌ ಸ್ಟೋರಿ ಬಗ್ಗೆನೂ ಕಣ್ಣು ಇಡಲಾಗಿದೆ. ಪ್ರತಿ ಮನೆಯೂ ಸ್ವರ್ಗದಂತೆ ಇರುವುದಿಲ್ಲ. ಪ್ರತಿಯೊಬ್ಬರ ಮನೆಗಳಲ್ಲಿ ಎಷ್ಟೋ ಮುಚ್ಚಿಟ್ಟ ವಿಷಯಗಳು ಇರುತ್ತವೆ. ಅಂತಹ ಸಂಗತಿಗಳನ್ನು ಇಟ್ಟುಕೊಂಡು ಈ ಮಿನಿ ವೆಬ್ ಸೀರಿಸ್ ಅನ್ನು ರಮೇಶ್ ಇಂದಿರಾ ಹೇಳುವುದಕ್ಕೆ ಹೊರಟಿದ್ದಾರೆ. ಇನ್ನು ಕನ್ನಡ ಕಿರುತೆರೆಯ ಜನಪ್ರಿಯ ನಿರ್ಮಾಪಕಿ ಶ್ರುತಿ ನಾಯ್ಡು ಈ ಮಿನಿ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡಿದ್ದಾರೆ.

ಅಂದ್ಹಾಗೆ, 'ಅಯ್ಯನ ಮನೆ' ಈ ವೆಬ್ ಸೀರಿಸ್‌ನಲ್ಲಿ ಏಳು ಎಪಿಸೋಡ್‌ಗಳು ಇವೆ. ಪ್ರಮುಖ ಪಾತ್ರದಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ನಟಿಸಿದ್ದಾರೆ. ಇನ್ನು ಈ ಮಿನಿ ವೆಬ್‌ ಸೀರಿಸ್‌ನ ಕತೆ ಚಿಕ್ಕಮಗಳೂರಿನಲ್ಲಿ ಶುರುವಾಗುತ್ತೆ. ಅಯ್ಯನ ಮನೆಯಲ್ಲಿ ಅಡಗಿರುವ ಮಿಸ್ಟ್ರಿಯನ್ನು ವೀಕ್ಷಕರ ಮುಂದೆ ಇಡುವುದಕ್ಕೆ ತಂಡ ಕಾತುರದಲ್ಲಿದೆ. ಹೊಸಬಗೆಯ ಕಥೆ, ಸಸ್ಪೆನ್ಸ್, ಥ್ರಿಲ್ಲರ್ ಮೂಲಕ ಓಟಿಟಿ ಪ್ರಿಯರನ್ನು ತಲುಪುವುದಕ್ಕೆ ಈ ತಂಡ ಕಾತುರವಾಗಿದೆ.

Zee5 first Kannada mini web series Ayyana Mane streaming date and details

"ಅಯ್ಯನ ಮನೆ ವೆಬ್ ಸೀರಿಸ್ ರೋಚಕತೆ ಜೊತೆಗೆ ಭಯ, ನಂಬಿಕೆ ಹಾಗೂ ಫ್ಯಾಮಿಲಿಯ ಕಥೆಯನ್ನು ಒಳಗೊಂಡಿದೆ. ಈ ವೆಬ್ ಸೀರಿಸ್ ಕರ್ನಾಟಕ ಸಂಸ್ಕೃತಿ, ಸಂಪ್ರದಾಯದವನ್ನು ಪ್ರತಿಬಿಂಬಿಸುತ್ತೆ. ಈ ಮಿನಿ ವೆಬ್ ಸೀರಿಸ್ ಅನ್ನು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂತು ನೋಡುವಂತೆ ಮಾಡುತ್ತೆ" ಎಂದು ನಿರ್ದೇಶಕ ರಮೇಶ್ ಇಂದಿರಾ ಹೇಳಿದ್ದಾರೆ.

ಇನ್ನು ಈ ವೆಬ್ ಸೀರಿಸ್‌ನಲ್ಲಿ ಜಾಜಿ ಪಾತ್ರದಲ್ಲಿ ನಟಿಸಿರುವ ಖುಷಿ ರವಿ " ಈ ವೆಬ್‌ ಸೀರಿಸ್‌ನಲ್ಲಿ ಮುಗ್ದ ಹೆಣ್ಣು, ಗಂಡನ ಪ್ರೀತಿಯ ಹೆಂಡತಿ, ಸಂಪ್ರದಾಯಕ್ಕೆ ತಕ್ಕಂತೆ ನಡೆದುಕೊಳ್ಳುವಂತಹ ಪಾತ್ರದಲ್ಲಿ ನಟಿಸಿದ್ದೇನೆ. ಇದೊಂದು ಭಾವನಾತ್ಮಕ ಪಯಣವಾಗಿದ್ದು, ಜೊತೆಗೆ ಅನೇಕ ರಹಸ್ಯಗಳ ಜೊತೆಗೆ ಕಥೆ ಸಾಗುತ್ತೆ." ಎನ್ನುತ್ತಾರೆ ರವಿ ಖುಷಿ. ಈ ವೆಬ್‌ ಸೀರಿಸ್ ಇದೇ ಏಪ್ರಿಲ್ 25ರಿಂದ ಜೀ 5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

More from Filmibeat

Read more about: web series sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X