bredcrumb

ಸ್ಕೂಬಾ ಡೈವ್ ಮಾಡಿ ಡಾಲಿ ಜಾಲಿ

By Narayan
| Published: Monday, November 25, 2024, 19:02 [IST]

ನಟ ಧನಂಜಯ್ ಮದುವೆ ಫಿಕ್ಸ್ ಆಗಿದೆ. ಇತ್ತೀಚೆಗೆ ಎಂಗೇಜ್‌ಮೆಂಟ್ ಸಹ ನಡೆದಿದೆ. ಕಳೆದ ವಾರ ಡಾಲಿ ನಟಿಸಿದ ಜೀಬ್ರಾ ಸಿನಿಮಾ ತೆರೆಗೆ ಬಂದಿದೆ. ಮುಂದಿನ ವಾರ 'ಪುಷ್ಪ-2' ಬಿಡುಗಡೆ ಆಗಲಿದೆ. ಇದೆಲ್ಲದರ ನಡುವೆ ಸ್ನೇಹಿತರ ಜೊತೆ ಧನು ಸ್ಕೂಬಾ ಡೈವ್ ಮಾಡಿ ಎಂಜಾಯ್ ಮಾಡಿದ್ದಾರೆ. 

Actor Dhananjay goes scuba diving in netrani with friends
1/7

ನಟ ಧನಂಜಯ್ ಬಹಳ ಬ್ಯುಸಿಯಾಗಿದ್ದಾರೆ. ಕಳೆದ ವಾರ 'ಜೀಬ್ರಾ' ಸಿನಿಮಾ ತೆರೆಗೆ ಬಂತು. ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅದರ ನಡುವೆಯೇ ಮದುವೆ ಎಂಗೇಜ್‌ಮೆಂಟ್ ನಡೆದಿತ್ತು. ಈಗ ಸ್ನೇಹಿತರ ಜೊತೆ ಪ್ರವಾಸದಲ್ಲಿದ್ದಾರೆ.
Actor Dhananjay goes scuba diving in netrani with friends
2/7

ನೇತ್ರಾಣಿಯಲ್ಲಿ ಮೈಸೂರು ಸ್ನೇಹಿತರ ಜೊತೆ ಸ್ಕೂಬಾ ಡೈವಿಂಗ್ ಮಾಡಿ ಡಾಲಿ ಖುಷಿಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿವೆ. 'ಜೀಬ್ರಾ' ಸಿನಿಮಾ ಸಕ್ಸಸ್ ಅಲೆಯಲ್ಲಿ ಸ್ನೇಹಿತರ ಜೊತೆ ಜಾಲಿ ಟ್ರಿಪ್ ಹೋಗಿದ್ದಾರೆ.
Actor Dhananjay goes scuba diving in netrani with friends
3/7

ಸುಮಾರು 45 ನಿಮಿಷಗಳ ಕಾಲ ಸ್ಕೂಬ ಡೈವ್ ಮಾಡಿದ ಧನಂಜಯ್ ಸಾಗರ ತಳದ ಜೀವರಾಶಿಯನ್ನು ಕಣ್ತುಂಬಿಕೊಂಡಿದ್ದಾರೆ. ನೀರಿನ ಆಳದಲ್ಲಿ ಮುಳುಗಿ ಮತ್ಸಲೋಕದ ದರ್ಶನ ಮಾಡಿದ್ದಾರೆ. ಸ್ಕೂಬಾ ಡೈವಿಂಗ್ ಅನ್ನು ಬಹಳ ಎಂಜಾಯ್ ಮಾಡಿದ್ದಾರೆ.
Actor Dhananjay goes scuba diving in netrani with friends
4/7

ಚಿತ್ರದುರ್ಗ ಮೂಲದ ಧನ್ಯತಾ ಎಂಬುವವರ ಜೊತೆ ನಟ ಧನಂಜಯ್ ಮದುವೆ ನಡೆಯಲಿದೆ. ಮುಂದಿನ ವರ್ಷ ಫೆಬ್ರವರಿ 16ಕ್ಕೆ ಮೈಸೂರಿನಲ್ಲೇ ಮದುವೆ ನಿಶ್ಚಯವಾಗಿದೆ. ಇತ್ತೀಚೆಗೆ ಹಾಸನದ ತಮ್ಮ ಮನೆಯಲ್ಲಿ ಡಾಲಿ- ಧನ್ಯಾ ಉಂಗುರ ಬದಲಿಸಿಕೊಂಡಿದ್ದರು.
Actor Dhananjay goes scuba diving in netrani with friends
5/7

ವೃತ್ತಿಯಲ್ಲಿ ವೈದ್ಯೆ ಆಗಿರುವ ಧನ್ಯತಾ ಹಾಗೂ ಧನಂಜಯ್ ಅವರದ್ದು ಬಹಳ ಹಳೆಯ ಪರಿಚಯ. ಮೈಸೂರಿನಲ್ಲಿ ಓದುವಾಗ ಸ್ನೇಹಿತರ ಮೂಲಕ ಶುರುವಾದ ಸ್ನೇಹ ಇದೀಗ ಮದುವೆ ಹಂತಕ್ಕೆ ಬಂದು ನಿಂತಿದೆ. ಸಿನಿಮಾ ಕೆಲಸಗಳ ಜೊತೆ ಜೊತೆಗೆ ಧನು ಮದುವೆ ತಯಾರಿ ಕೂಡ ಜೋರಾಗಿದೆ.
Actor Dhananjay goes scuba diving in netrani with friends
6/7

ಧನಂಜಯ್ ನಟನೆಯ 'ಉತ್ತರಕಾಂಡ' ಸಿನಿಮಾ ಚಿತ್ರೀಕರಣ ಕಾರಣಾಂತರಗಳಿಂದ ನಿಂತಿದೆ. 'ಜಿಂಗೋ' ಎಂಬ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಬೇಕಿದೆ. 'ಅಣ್ಣ ಫ್ರಂ ಮೆಕ್ಸಿಕೋ' ಎನ್ನುವ ಮತ್ತೊಂದು ಸಿನಿಮಾದಲ್ಲಿ ಕೂಡ ಧನಂಜಯ್ ನಟಿಸುತ್ತಿದ್ದಾರೆ.
Actor Dhananjay goes scuba diving in netrani with friends
7/7

ನಟನೆಯ ಜೊತೆ ಜೊತೆಗೆ ಸಿನಿಮಾ ನಿರ್ಮಾಣ ಸಹ ಧನಂಜಯ್ ಮಾಡುತ್ತಿದ್ದಾರೆ. ಚಿತ್ರಗಳನ್ನು ಹಾಡುಗಳನ್ನು ಬರೆಯುತ್ತಾರೆ. ಇತ್ತೀಚೆಗೆ 'ಭೈರತಿ ರಣಗಲ್' ಚಿತ್ರ ನೋಡಿ ಎಂಜಾಯ್ ಮಾಡಿದ್ದರು. ಶಿವಣ್ಣನ ಅಭಿಮಾನಿಯಾಗಿ ಬ್ಲಾಕ್ ಅಂಡ್ ಬ್ಲಾಕ್ ಲುಕ್‌ನಲ್ಲಿ ಮಿಂಚಿದ್ದರು.
X