bredcrumb

ಡಿಕೆ ಬ್ರದರ್ಸ್‌ಗೆ ಧನು ಮದುವೆ ಕರೆಯೋಲೆ

By Kannada Filmibeat Photos
| Published: Sunday, December 22, 2024, 14:31 [IST]

ನಟ ಧನಂಜಯ್ ಮದುವೆ ತಯಾರಿ ಜೋರಾಗಿದೆ. ಜೊತೆ ಜೊತೆಗೆ ಮದುವೆಗೆ ಅತಿಥಿಗಳನ್ನು ಆಹ್ವಾನಿಸುವ ಕೆಲಸ ಶುರು ಮಾಡಿದ್ದಾರೆ. ಭಾವಿ ಪತ್ನಿ ಧನ್ಯತಾ ಸಮೇತ ರಾಜಕೀಯ ನಾಯಕರು ಹಾಗೂ ಸಿನಿಮಾ ತಾರೆಯರ ಮನೆಗೆ ಭೇಟಿ ನೀಡಿ ಆಮಂತ್ರಣ ನೀಡುತ್ತಿದ್ದಾರೆ. ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಡಾಲಿ-ಧನು ಮದುವೆ ನಡೆಯಲಿದೆ.

Actor Dhananjay Now Invites Dcm Dk shivakumar and dk suresh to his Wedding
1/5

ಬಹಳ ಸಿಂಪಲ್ ಆಗಿ ಧನಂಜಯ್ ತಮ್ಮ ಮದುವೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಮೊದಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದ್ದರು. ಇದೀಗ ಡಿಕೆ ಬ್ರದರ್ಸ್‌ ಮನೆಗೆ ಭೇಟಿ ನೀಡಿದ್ದಾರೆ.
Actor Dhananjay Now Invites Dcm Dk shivakumar and dk suresh to his Wedding
2/5

3/5

ನಟ ಶಿವರಾಜ್‌ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಅವರು ವಿದೇಶಕ್ಕೆ ತೆರಳುವ ಮುನ್ನ ಮನೆಗೆ ಭೇಟಿ ನೀಡಿ ಧನು ಮದುವೆಗೆ ಕರೆದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ಇತ್ತೀಚೆಗೆ ತರಳಬಾಳು ಮಠಕ್ಕೆ ಭೇಟಿ ನೀಡಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೂ ಆಮಂತ್ರಣ ನೀಡಿದ್ದರು.
Actor Dhananjay Now Invites Dcm Dk shivakumar and dk suresh to his Wedding
4/5

ವೃತ್ತಿಯಲ್ಲಿ ವೈದ್ಯೆ ಆಗಿರುವ ಧನ್ಯತಾ ಜೊತೆ ಧನಂಜಯ್ ಹಸೆಮಣೆ ಏರುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ದೀಪಾವಳಿ ಹಬ್ಬ ಸಂಭ್ರಮದಲ್ಲಿ ಡಾಲಿ ತಮ್ಮ ಪ್ರೀತಿ ಹಾಗೂ ಮದುವೆ ವಿಚಾರ ಬಹಿರಂಗಪಡಿಸಿದ್ದರು.
Actor Dhananjay Now Invites Dcm Dk shivakumar and dk suresh to his Wedding
5/5

ಅರಮನೆ ನಗರಿಯ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಧನು-ಧನ್ಯಾ ಮದುವೆ ನಡೆಯಲಿದೆ. ಈಗಾಗಲೇ ಅದಕ್ಕಾಗಿ ಸಿದ್ಧತೆ ನಡೀಯಿದೆ. ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರು ಈ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ.
X