bredcrumb

ವಿಂಟೇಜ್ ಸೀರೆಯುಟ್ಟು ಮಿಂಚಿದ 'ಕಾಂತಾರ' ಬ್ಯೂಟಿ ಸಪ್ತಮಿ ಗೌಡ

By Muralidhar S
| Updated: Wednesday, November 20, 2024, 14:28 [IST]

ಸಪ್ತಮಿಗೌಡ ಸಿನಿಮಾದ ಜೊತೆಗೆ ಸೋಶಿಯಲ್ ಮೀಡಿಯದಲ್ಲೂ ಆಕ್ಟಿವ್ ಆಗಿದ್ದಾರೆ. ಸಿನಿಮಾದಲ್ಲಿ ಬ್ಯುಸಿಯಾಗಿದೇ ಇರುವ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಅಪ್ಪಟ ರೇಷಿಮೆ ಸೀರೆಯುಟ್ಟು ಫೋಟೊಗಳು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದು ವೈರಲ್ ಆಗುತ್ತಿದೆ.

Sapthami Gowda Vintage Saree Photoshoot
1/6

'ಕಾಂತಾರ' ಸಿನಿಮಾದ ಬಳಿಕ ಸಪ್ತಮಿಗೌಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಅಲ್ಲಿಂದ ಸಪ್ತಮಿ ಗೌಡ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಇದೀಗ ಡಾಲಿ ಧನಂಜಯ್ ನಟಿಸುತ್ತಿರುವ ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಹೊಸ ಪ್ರಾಜೆಕ್ಟ್‌ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
Sapthami Gowda Vintage Saree Photoshoot
2/6

ಸಪ್ತಮಿಗೌಡ ಸಿನಿಮಾದ ಜೊತೆಗೆ ಸೋಶಿಯಲ್ ಮೀಡಿಯದಲ್ಲೂ ಆಕ್ಟಿವ್ ಆಗಿದ್ದಾರೆ. ಸಿನಿಮಾದಲ್ಲಿ ಬ್ಯುಸಿಯಾಗಿದೇ ಇರುವ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಅಪ್ಪಟ ರೇಷಿಮೆ ಸೀರೆಯುಟ್ಟು ಫೋಟೊಗಳು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದು ವೈರಲ್ ಆಗುತ್ತಿದೆ.
Sapthami Gowda Vintage Saree Photoshoot
3/6

ವಿಂಟೇಜ್ ಸೀರೆಯುಟ್ಟು ಸಪ್ತಮಿ ಗೌಡ ವಿಭಿನ್ನ ಭಂಗಿಯಲ್ಲಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ರೇಷ್ಮೆ ಸೀರೆಗೆ ಹಸಿರು ಬಾರ್ಡರ್ ಇದ್ದು, ಕಡು ನೀಲಿ ಬಣ್ಣದ ಬ್ಲೌಸ್ ತೊಟ್ಟಿದ್ದಾರೆ. ಈ ಮೂಲಕ ಸಪ್ತಮಿ ಗೌಡ ಪಕ್ಕಾ ವಿಂಟೇಜ್ ಲುಕ್ ಕೊಟ್ಟಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.
Sapthami Gowda Vintage Saree Photoshoot
4/6

ಸಪ್ತಮಿ ಗೌಡ ಕೇವಲ ವಿಂಟೇಜ್ ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿಲ್ಲ. ಈ ಫೋಟೊಶೂಟ್ ವಿಂಟೇಜ್ ಕಾರುಗಳನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿ ಸಪ್ತಮಿ ಗೌಡ ಕೂತು ಫೋಟೊಗಳನ್ನು ಕ್ಲಿಕ್ ಮಾಡಿಸಿಕೊಂಡಿದ್ದಾರೆ. ಈ ಪೋಟೊಗಳಿಗೆ ನೆಟ್ಟಿಗರು ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ.
Sapthami Gowda Vintage Saree Photoshoot
5/6

ಸಪ್ತಮಿ ಗೌಡ ಫೋಟೊಗಳಿಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. "ದೃಷ್ಟಿ ಆಗತ್ತೆ ಸ್ವಲ್ಪ ದೃಷ್ಟಿ ತೆಗೆಸಿಕೊಳ್ಳಿ", "ಸೂಪರ್ ಅಕ್ಕ", "ಸಂಸ್ಕೃತಿಯನ್ನು ಪ್ರತಿ ನಿಧಿಸುತ್ತಿದ್ದೀರ" ಎಂದು ಸಪ್ತಮಿ ಗೌಡಗೆ ಮೆಚ್ಚುಗೆ ಮಾತುಗಳನ್ನು ಹೇಳುತ್ತಿದ್ದಾರೆ. ವಿಂಟೇಜ್ ಸೀರೆಯುಟ್ಟು ಪೋಸ್ ಕೊಟ್ಟ ಸಪ್ತಮಿ ಗೌಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Sapthami Gowda Vintage Saree Photoshoot
6/6

ಇನ್ನು ಸಪ್ತಮಿಗೌಡ ಸಿನಿಮಾ ವಿಚಾರಕ್ಕೆ ಬರುವುದಾರೆ, 'ಯುವ' ಬಳಿಕ ಹೊಸ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದಾರೆ. ಡಾಲಿ ಧನಂಜಯ್ ಹೊಚ್ಚ ಸಿನಿಮಾಗೆ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದು, ಪಾತ್ರ ಹೇಗಿರುತ್ತೋ ಅನ್ನೋದನ್ನು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.
X