bredcrumb

ಕಪ್ಪು ಬಣ್ಣದ ಕಾಸ್ಟ್ಯೂಮ್‌ನಲ್ಲಿ ಗ್ಲಾಮರ್ ಲುಕ್ ಕೊಟ್ಟ ಶ್ರದ್ಧಾ ಶ್ರೀನಾಥ್; ಹೇಗಿವೆ ಫೋಟೊಗಳು?

By Muralidhar S
| Published: Wednesday, November 20, 2024, 23:22 [IST]

ಶ್ರದ್ಧಾ ಶ್ರೀನಾಥ್ ಕನ್ನಡ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ. ಆದರೂ ಕನ್ನಡದ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಇವರ ಸಿನಿಮಾಗಳನ್ನು ಈಗಲೂ ಮೆಲುಕು ಹಾಕುತ್ತಲೇ ಇರುತ್ತಾರೆ. ಶ್ರದ್ಧಾ ಶ್ರೀನಾಥ್ ಕೂಡ ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಈ ಕಪ್ಪು ಕಾಸ್ಟ್ಯೂಮ್‌ನಲ್ಲಿ ಇವರು ಹಂಚಿಕೊಂಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. 

Shraddha Srinath glamorous look
1/6

ಶ್ರದ್ಧಾ ಶ್ರೀನಾಥ್ ಕನ್ನಡ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ. ಆದರೂ ಕನ್ನಡದ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಇವರ ಸಿನಿಮಾಗಳನ್ನು ಈಗಲೂ ಮೆಲುಕು ಹಾಕುತ್ತಲೇ ಇರುತ್ತಾರೆ. ಶ್ರದ್ಧಾ ಶ್ರೀನಾಥ್ ಕೂಡ ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಈ ಕಪ್ಪು ಕಾಸ್ಟ್ಯೂಮ್‌ನಲ್ಲಿ ಇವರು ಹಂಚಿಕೊಂಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.
Shraddha Srinath glamorous look
2/6

ಶ್ರದ್ಧಾ ಶ್ರೀನಾಥ್ ಪೋಟೊ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಆಗಾಗ ತಮ್ಮ ಟ್ರಾವೆಲ್, ಸಿನಿಮಾ, ಪ್ರಮೋಷನ್ಸ್, ಜಾಹೀರಾತಿಗೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಬ್ಲ್ಯಾಕ್ ಕಾಸ್ಟ್ಯೂಮ್‌ನಲ್ಲಿ ಗ್ಲಾಮರಸ್ ಲುಕ್ ಕೊಟ್ಟಿದ್ದಾರೆ. ಈ ಫೋಟೊಗಳು ಅವರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.
Shraddha Srinath glamorous look
3/6

ಅಂದ್ಹಾಗೆ ಶ್ರದ್ಧಾ ಶ್ರೀನಾಥ್ 2016ರಲ್ಲಿ ನಟಿಸಿದ 'ಯು ಟರ್ನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಅಲ್ಲಿಂದ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 'ಯು ಟರ್ನ್' ಕೊಟ್ಟ ಯಶಸ್ಸು ಕನ್ನಡ ಸಿನಿಮಾದಲ್ಲಿ ಸಿಗಲಿಲ್ಲ. ಹೀಗಾಗಿ ಪರಭಾಷೆಯ ಕಡೆ ಮುಖ ಮಾಡಿದ್ದರು. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
Shraddha Srinath glamorous look
4/6

ಶ್ರದ್ಧಾ ಶ್ರೀನಾಥ್‌ಗೆ ಪರಭಾಷೆಯಲ್ಲಿ ಸಕ್ಸಸ್ ಕೊಟ್ಟ ಸಿನಿಮಾ 'ವಿಕ್ರಂ ವೇದ'. ಆರ್.ಮಾಧವನ್‌ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದರು. 2017ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಇಲ್ಲಿಂದ ಶ್ರದ್ಧಾ ಶ್ರೀನಾಥ್ ತಮಿಳಿನ ಪ್ರೇಕ್ಷಕರಿಗೂ ಹೆಚ್ಚು ಇಷ್ಟ ಆಗಿದ್ದಾರೆ. ತಮಿಳಿನಲ್ಲಿಯೂ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
Shraddha Srinath glamorous look
5/6

ಶ್ರದ್ಧಾ ಶ್ರೀನಾಥ್‌ ವೃತ್ತಿ ಬದುಕಿಗೆ ಕಿಕ್ ಕೊಟ್ಟಿದ್ದು ಮಣಿರತ್ನಂ ನಿರ್ದೇಶಿಸಿದ ಸಿನಿಮಾ. 'ಕಾಟು ಉಯಡೈ' ಚಿತ್ರದಲ್ಲಿ ತಮಿಳು ನಟ ಕಾರ್ತಿ ಹಾಗೂ ಅದಿತಿ ರಾವ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ಶ್ರದ್ಧಾ ಶ್ರೀನಾಥ್‌ಗೆ ವೃತ್ತಿ ಬದುಕಿನಲ್ಲಿ ಮರೆಯಲಾರದ ಸಿನಿಮಾ ಎನ್ನಬಹುದು.
Shraddha Srinath glamorous look
6/6

ತಮಿಳಿನ ಜೊತೆಗೀಗ ಟಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ವಿಕ್ಟರಿ ವೆಂಕಟೇಶ್ ಸಿನಿಮಾ 'ಸೈಂಧವ್'ನಲ್ಲಿ ನಟಿಸಿ ನಟಿಸಿ ತೆಲುಗು ಮಂದಿಯ ಮನಗೆದ್ದಿದ್ದರು. ಆದರೆ, ನ್ಯಾಚುರಲ್ ಸ್ಟಾರ್ ನಾಣಿ ನಟನೆಯ 'ಜೆರ್ಸಿ' ಸಿನಿಮಾದಲ್ಲಿನ ನಟನೆಗೆ ಶ್ರದ್ಧಾ ಶ್ರೀನಾಥ್‌ಗೆ ಒಳ್ಳೆಯ ಹೆಸರು ಬಂದಿತ್ತು. ಈಗ ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಶ್ರದ್ಧಾ ಶ್ರೀನಾಥ್ ಬ್ಯುಸಿಯಾಗಿದ್ದಾರೆ.
X