bredcrumb

ನಟಿ ಶ್ರೀಲೀಲಾ ಮದುವೆ ಯಾವಾಗ?

By Narayan
| Published: Saturday, September 21, 2024, 22:44 [IST]

ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಆಕೆ ನಟಿಸಿದ ಸಿನಿಮಾಗಳು ಸೋತಿವೆ. ಹಾಗಾಗಿ ಮದುವೆ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು.ಈ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದಾರೆ. 

Title: Actress Sreeleela opens up on her marriage plans and personal life
1/7

ಚಿತ್ರರಂಗದಲ್ಲಿ ಅದೃಷ್ಟ ಬಹಳ ಮುಖ್ಯ ಎನ್ನುವವರು ಇದ್ದಾರೆ. ಕೆಲವೊಮ್ಮೆ ಅವಕಾಶಗಳು ಸಿಕ್ಕರೂ ಸಕ್ಸಸ್ ಸುಲಭವಾಗಿ ಸಿಗಲ್ಲ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಟಾಲಿವುಡ್‌ ಅಂಗಳದಲ್ಲಿ ಮಿಂಚು ಹರಿಸಿದ್ದರು. ಆದರೆ ಆ ಸಂಭ್ರಮ ಬಹಳ ದಿನ ನಿಲ್ಲಲಿಲ್ಲ.
Title: Actress Sreeleela opens up on her marriage plans and personal life
2/7

ಶ್ರೀಲೀಲಾ ನಟಿಸಿದ ಒಂದಷ್ಟು ಸಿನಿಮಾಗಳು ನಿರೀಕ್ಷೆ ಹುಟ್ಟಾಕ್ಕಿದ್ದು ಸುಳ್ಳಲ್ಲ. ಆದರೆ ಸಕ್ಸಸ್ ಸಿಗಲಿಲ್ಲ. ರವಿತೇಜಾ, ಮಹೇಶ್‌ ಬಾಬು, ಬಾಲಯ್ಯರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು ಪ್ರಯೋಜನವಾಗಲಿಲ್ಲ.
Title: Actress Sreeleela opens up on her marriage plans and personal life
3/7

ಸಿನಿಮಾಗಳ ವಿಚಾರಕ್ಕೆ ಬಂದರೆ 'ರಾಬಿನ್ ಹುಡ್' ಎನ್ನುವ ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಜೊತೆ ನಟಿಸುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಸದ್ಯಕ್ಕೆ ನಿಂತುಹೋಗಿದೆ. ರವಿತೇಜಾ ಜೊತೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
Title: Actress Sreeleela opens up on her marriage plans and personal life
4/7

'ಕಿಸ್', 'ಭರಾಟೆ' ಹಾಗೂ 'ಬೈಟು ಲವ್' ಕನ್ನಡ ಸಿನಿಮಾಗಳಲ್ಲಿ ನಟಿಸಿದ ಶ್ರೀಲೀಲಾ ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. 'ಪೆಳ್ಳಿ ಸಂದಡಿ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಆದರೆ ಸಿನಿಮಾ ಗೆಲ್ಲಲಿಲ್ಲ. ಬಳಿಕ 'ಧಮಾಕ' ಚಿತ್ರದಲ್ಲಿ ರವಿತೇಜಾ ಜೊತೆ ನಟಿಸಿ ಗೆದ್ದರು.
Title: Actress Sreeleela opens up on her marriage plans and personal life
5/7

ಇತ್ತೀಚೆಗೆ ಶ್ರೀಲೀಲಾ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಮ್ಮಿ ಆಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ವಿದ್ಯಾಭ್ಯಾಸದ ನಡುವೆ ಚಿತ್ರರಂಗಕ್ಕೆ ಬಂದೆ. ಈಗ ಮತ್ತೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ್ದೇನೆ ಎಂದು 'ಕಿಸ್' ಬೆಡಗಿ ಹೇಳಿದ್ದಾರೆ.
Title: Actress Sreeleela opens up on her marriage plans and personal life
6/7

ವಿದ್ಯಾಭ್ಯಾಸ ಪೂರ್ಣಗೊಳಿಸಬೇಕು ಎನ್ನುವ ಕಾರಣಕ್ಕೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಸದ್ಯ ಓದು, ಸಿನಿಮಾ ಬಿಟ್ಟು ವೈಯಕ್ತಿಕ ಜೀವನದ ಬಗ್ಗೆಯೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ. ಲವ್, ಮದುವೆ ಎನ್ನುವುದೆಲ್ಲಾ ಬರೀ ಗಾಸಿಪ್ ಅಷ್ಟೇ ಎಂದಿದ್ದಾರೆ.
Title: Actress Sreeleela opens up on her marriage plans and personal life
7/7

ವೈಯಕ್ತಿಕ ಜೀವನದ ಬಗ್ಗೆ ಕೆಲ ವರ್ಷಗಳ ಬಳಿಕ ಗಮನ ಹರಿಸಬೇಕು. ಸದ್ಯಕ್ಕೆ ನನಗೆ ಅದಕ್ಕೆಲ್ಲಾ ಸಮಯ ಇಲ್ಲ. ಭವಿಷ್ಯದಲ್ಲಿ ನನ್ನ ವಿದ್ಯಾಭ್ಯಾಸ ಮುಗಿದ ಬಳಿಕ ವೈಯಕ್ತಿಕ ಜೀವನ ಬಗ್ಗೆ ಯೋಚಿಸುತ್ತೇನೆ ಎಂದು ಶ್ರೀಲೀಲಾ ವಿವರಿಸಿದ್ದಾರೆ.
X