bredcrumb

ಅಬ್ಬಬ್ಬ.. "ನಿಮ್ಮ ಬೆಂಗಳೂರು ಹುಡುಗಿ" ಎಂದ ಶ್ರೀಲೀಲಾ; ಹಿಂಗಂದರೂ ಕೆಲವರಿಗೆ ಸಮಾಧಾನ ಆಗ್ಲಿಲ್ಲ

By Muralidhar S
| Published: Thursday, November 7, 2024, 23:21 [IST]

ಟಾಲಿವುಡ್‌ನ ಈ ಸ್ಟಾರ್ ಹೀರೋಯಿನ್ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗಳು ಟ್ರೆಂಡಿಂಗ್‌ನಲ್ಲಿವೆ. ಅದಕ್ಕಿಂತ ಹೆಚ್ಚಾಗಿ ಶ್ರೀಲೀಲಾ ಬರೆದ ಸಾಲುಗಳು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡು "ನಿಮ್ಮ ಬೆಂಗಳೂರು ಹುಡುಗಿ" ಎಂದು ಬರೆದುಕೊಂಡಿದ್ದಾರೆ.

Sreeleela green saree photoshoot
1/6

ಕನ್ನಡದ ಬೆಡಗಿ ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಸ್ಟಾರ್ ನಟಿ. ಕನ್ನಡ ಚಿತ್ರರಂಗದಲ್ಲಿ ಸಿಗದ ಯಶಸ್ಸು ತೆಲುಗು ಚಿತ್ರರಂಗದಲ್ಲಿ ಸಿಕ್ಕಿದೆ. ಹೀಗಾಗಿ ಹೆಚ್ಚಾಗಿ ಹೈದರಾಬಾದ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತೆಲುಗು ತಾರೆಯರೊಂದಿಗೆ ಹೆಚ್ಚಾಗಿ ಪ್ರತ್ಯಕ್ಷ ಆಗುತ್ತಾರೆ. ಅಲ್ಲದೆ ಟಾಲಿವುಡ್‌ಗೆ ಹೋದ ಮೇಲೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿಲ್ಲ. ಹೀಗಾಗಿ ಕೆಲ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದೂ ಇದೆ. ಆದ್ರೀಗ ಮತ್ತೆ ಬೆಂಗಳೂರನ್ನು ನೆನಪಿಸಿಕೊಂಡಿದ್ದಾರೆ.
Sreeleela green saree photoshoot
2/6

ಟಾಲಿವುಡ್‌ನ ಈ ಸ್ಟಾರ್ ಹೀರೋಯಿನ್ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗಳು ಟ್ರೆಂಡಿಂಗ್‌ನಲ್ಲಿವೆ. ಅದಕ್ಕಿಂತ ಹೆಚ್ಚಾಗಿ ಶ್ರೀಲೀಲಾ ಬರೆದ ಸಾಲುಗಳು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡು "ನಿಮ್ಮ ಬೆಂಗಳೂರು ಹುಡುಗಿ" ಎಂದು ಬರೆದುಕೊಂಡಿದ್ದಾರೆ.
Sreeleela green saree photoshoot
3/6

ಶ್ರೀಲೀಲಾ ಕನ್ನಡ ಚಿತ್ರರಂಗದಿಂದಲೇ ನಟನಾ ವೃತ್ತಿಯನ್ನು ಆರಂಭಿಸಿದ್ದರು. ಕನ್ನಡದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಬಳಿಕ ಟಾಲಿವುಡ್‌ಗೆ ಹಾರಿದ್ದರು. ಅಲ್ಲಿನ ಸ್ಟಾರ್‌ಗಳೊಂದಿಗೆ ಶ್ರೀಲೀಲಾಗೆ ನಟಿಸುವ ಅವಕಾಶ ಸಿಕ್ಕಿತ್ತು. ಹೀಗಾಗಿ ಟಾಲಿವುಡ್‌ನ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ. ಸದ್ಯ ಶ್ರೀಲೀಲಾ ದಕ್ಷಿಣ ಭಾರತದ ಸ್ಟಾರ ನಟಿಯರ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾರೆ.
Sreeleela green saree photoshoot
4/6

ಶ್ರೀಲೀಲಾ ಹಸಿರು ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೊಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೊಗಳಿಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಶ್ರೀಲೀಲಾ ಫೋಟೊಗಳನ್ನು ನೋಡಿ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ಮತ್ತೆ ಕೆಲವರು ಕನ್ನಡವನ್ನು ಮರೆತುಬಿಟ್ಟಿದ್ದಿರ ಅಂತ ಅಸಮಧಾನಗೊಂಡಿದ್ದಾರೆ.
Sreeleela green saree photoshoot
5/6

ಕಳೆದ ವರ್ಷ ಶ್ರೀಲೀಲಾ ನಟಿಸಿದ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಸದ್ಯ ಈಗ ಅವರ ಕೈನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾವಿದೆ. ಹರೀಶ್ ಶಂಕರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ, ಆಂಧ್ರ ಪ್ರದೇಶದ ಉಪಮುಖ್ಯ ಮಂತ್ರಿಯಾಗಿರುವ ಪವನ್ ಕಲ್ಯಾಣ್ ಈ ಸಿನಿಮಾವನ್ನು ಮುಗಿಸುತ್ತಾರಾ? ಅನ್ನುವ ಗೊಂದಲವಿದೆ.
Sreeleela green saree photoshoot
6/6

ಇನ್ನು ಶ್ರೀಲೀಲಾ ಕೆಲವು ದಿನಗಳು ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಬಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಕಡೆ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇವೆಲ್ಲವುಗಳ ಮಧ್ಯೆ ಕನ್ನಡ ಸಿನಿಮಾದಲ್ಲಿ ಯಾವಾಗ ನಟಿಸುತ್ತಾರೆಂದು ಕನ್ನಡಿಗರು ಕುತೂಹಲದಿಂದ ಕಾಯುತ್ತಿದ್ದಾರೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+