By
Narayan
| Published: Tuesday, March 26, 2024, 18:56 [IST]
ನಟಿ ಅದಿತಿ ಪ್ರಭುದೇವ ಹಾಗೂ ಪತಿ ಯಶಸ್ ಮನೆಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಅದಿತಿ ತಾವು ತಾಯಿ ಆಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು. ಇದೀಗ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದಾರೆ.
1/7
ನನ್ನ ಆಸೆ ಈಡೇರಿತು ಎಂದ ಅದಿತಿ; ಬೇಬಿ ಬಂಪ್ ಫೋಟೋಶೂಟ್ ವೈರಲ್ | Aditi Prabhudeva Recreates Iconic Ravi Varma Paintings In Her Maternity Photoshoot - Filmibeat Kannada
/photos/aditi-prabhudeva-recreates-iconic-ravi-varma-paintings-in-her-maternity-photoshoot-fb93505.html
ತುಂಬು ಗರ್ಭಿಣಿ ಅದಿತಿ ಪ್ರಭುದೇವ ಹೊಸದಾಗಿ ಬೇಬಿ ಬಂಪ್ ಫೋಟೊಶೂಟ್ ವೈರಲ್ ಆಗುತ್ತಿದೆ. ಅಭಿಮಾನಿಗಳ ಆಕೆಯ ಫೋಟೊಗಳನ್ನು ನೋಡಿ ಮೆಚ್ಚಿ ಕೊಂಡಾಡುತ್ತಿದ್ದಾರೆ. ಸಾಮಾನ್ಯವಾಗಿ ಮೆಟರ್ನಿಟಿ ಫೋಟೊಶೂಟ್ ಅಂದ್ರೆ ಹೊಟ್ಟೆ ತೋರಿಸಿಕೊಂಡು ಪೋಸ್ ಕೊಡುತ್ತಾರೆ. ನಿಮ್ಮ ಫೋಟೊಶೂಟ್ ಸೂಪರ್ ಎನ್ನುತ್ತಿದ್ದಾರೆ.
2/7
ನನ್ನ ಆಸೆ ಈಡೇರಿತು ಎಂದ ಅದಿತಿ; ಬೇಬಿ ಬಂಪ್ ಫೋಟೋಶೂಟ್ ವೈರಲ್ | Aditi Prabhudeva Recreates Iconic Ravi Varma Paintings In Her Maternity Photoshoot - Filmibeat Kannada
/photos/aditi-prabhudeva-recreates-iconic-ravi-varma-paintings-in-her-maternity-photoshoot-fb93505.html#photos-1
ಬಹಳ ವಿಭಿನ್ನವಾಗಿ ಅದಿತಿ ಫೋಟೊಶೂಟ್ ಪ್ಲ್ಯಾನ್ ಮಾಡಿದ್ದಾರೆ. ಇದು ಮಾಮೂಲಿ ಫೋಟೊಶೂಟ್ ಕಂಡಿತ ಅಲ್ಲ. ರವಿವರ್ಮನ ಚಿತ್ರಗಳನ್ನು ತಮ್ಮ ಫೋಟೊಶೂಟ್‌ನಲ್ಲಿ ರೀ ಕ್ರಿಯೇಟ್ ಮಾಡಿದ್ದಾರೆ. ರವಿವರ್ಮನ ಕೆಲ ಖ್ಯಾತ ಚಿತ್ರಗಳ ರೀತಿ ಪೋಸ್ ನೀಡಿದ್ದಾರೆ.
3/7
ನನ್ನ ಆಸೆ ಈಡೇರಿತು ಎಂದ ಅದಿತಿ; ಬೇಬಿ ಬಂಪ್ ಫೋಟೋಶೂಟ್ ವೈರಲ್ | Aditi Prabhudeva Recreates Iconic Ravi Varma Paintings In Her Maternity Photoshoot - Filmibeat Kannada
/photos/aditi-prabhudeva-recreates-iconic-ravi-varma-paintings-in-her-maternity-photoshoot-fb93505.html#photos-2
ಹಸಿರು ಬಾರ್ಡರ್ ಇರುವ ಕೆಂಪು ಬಣ್ಣದ ಸೀರೆಯಲ್ಲಿ ಅದಿತಿ ಮಿಂಚಿದ್ದಾರೆ. ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆ ಉಟ್ಟು ಒಡವೆ ತೊಟ್ಟು ಕಂಗೊಳಿಸಿದ್ದಾರೆ. ಇನ್ನು ಹಣ್ಣುಗಳ ತಟ್ಟೆ ಹಿಡಿದು ಪೋಸ್ ನೀಡಿದ್ದಾರೆ. ಪತಿ ಯಶಸ್ ಕೂಡ ರಾಜನಂತೆ ಅದಿತಿ ಜೊತೆ ಕಾಣಿಸಿಕೊಂಡಿದ್ದಾರೆ.
4/7
ನನ್ನ ಆಸೆ ಈಡೇರಿತು ಎಂದ ಅದಿತಿ; ಬೇಬಿ ಬಂಪ್ ಫೋಟೋಶೂಟ್ ವೈರಲ್ | Aditi Prabhudeva Recreates Iconic Ravi Varma Paintings In Her Maternity Photoshoot - Filmibeat Kannada
/photos/aditi-prabhudeva-recreates-iconic-ravi-varma-paintings-in-her-maternity-photoshoot-fb93505.html#photos-3
ರಾಜರಾಣಿಯಂತೆ ರಾಜಕುಮಾರ ಅಥವಾ ರಾಜಕುಮಾರಿಯ ಕನವರಿಕೆಯಲ್ಲಿ ಇರುವಂತೆ ಫೋಟೊಶೂಟ್ ಮೂಡಿ ಬಂದಿದೆ. ಖ್ಯಾತ ಫೋಟೊಗ್ರಫರ್, ಮೇಕರ್ ಆರ್ಟಿಸ್ಟ್ ಈ ಫೋಟೊಶೂಟ್‌ಗೆ ಕೆಲಸ ಮಾಡಿದ್ದಾರೆ. ಒಟ್ನಲ್ಲಿ ಅದಿತಿ ಇಷ್ಟಪಟ್ಟಂತೆ ಫೋಟೊಶೂಟ್ ನಡೆದಿರುವುದು ಆಕೆಗೆ ಹೆಚ್ಚು ಖುಷಿ ತಂದಿದೆ.
5/7
ನನ್ನ ಆಸೆ ಈಡೇರಿತು ಎಂದ ಅದಿತಿ; ಬೇಬಿ ಬಂಪ್ ಫೋಟೋಶೂಟ್ ವೈರಲ್ | Aditi Prabhudeva Recreates Iconic Ravi Varma Paintings In Her Maternity Photoshoot - Filmibeat Kannada
/photos/aditi-prabhudeva-recreates-iconic-ravi-varma-paintings-in-her-maternity-photoshoot-fb93505.html#photos-4
ಚಿತ್ರರಂಗದಲ್ಲಿ ಬ್ಯುಸಿಯಾಗಿ ಇದ್ದಾಗಲೇ ಅದಿತಿ ಹಸೆಮಣೆ ಏರಿದ್ದರು. ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ 2022 ನವೆಂಬರ್ 28ರಂದು ಮದುವೆ ನಡೆಯಿತು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ವಿವಾಹ ಮಹೋತ್ಸವ ನೆರವೇರಿತ್ತು.
6/7
ನನ್ನ ಆಸೆ ಈಡೇರಿತು ಎಂದ ಅದಿತಿ; ಬೇಬಿ ಬಂಪ್ ಫೋಟೋಶೂಟ್ ವೈರಲ್ | Aditi Prabhudeva Recreates Iconic Ravi Varma Paintings In Her Maternity Photoshoot - Filmibeat Kannada
/photos/aditi-prabhudeva-recreates-iconic-ravi-varma-paintings-in-her-maternity-photoshoot-fb93505.html#photos-5
'ಬಜಾರ್', 'ಧೈರ್ಯಂ', 'ಬ್ರಹ್ಮಚಾರಿ', 'ಒಂಬತ್ತನೆ ದಿಕ್ಕು', 'ತೋತಾಪುರಿ', 'ತ್ರಿಬಲ್ ರೈಡಿಂಗ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಅದಿತಿ ಆಪ್ತರ ಒತ್ತಾಯದ ಮೇರೆಗೆ ಚಿತ್ರರಂಗಕ್ಕೆ ಬಂದವರು.
7/7
ನನ್ನ ಆಸೆ ಈಡೇರಿತು ಎಂದ ಅದಿತಿ; ಬೇಬಿ ಬಂಪ್ ಫೋಟೋಶೂಟ್ ವೈರಲ್ | Aditi Prabhudeva Recreates Iconic Ravi Varma Paintings In Her Maternity Photoshoot - Filmibeat Kannada
/photos/aditi-prabhudeva-recreates-iconic-ravi-varma-paintings-in-her-maternity-photoshoot-fb93505.html#photos-6
ಮದುವೆ ಬಳಿಕ ಕೂಡ ಅದಿತಿ ಪ್ರಭುದೇವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಮಾಫಿಯಾ', 'ದಿಲ್ಮಾರ್', 'ಅಂದೊಂದಿತ್ತು ಕಾಲ', 'ಮ್ಯಾಟ್ನಿ', 'ಛೂ ಮಂತರ್' ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಕೆಲ ಚಿತ್ರಗಳ ಚಿತ್ರೀಕರಣ ಮುಕ್ತಾಯವಾಗಿದೆ. 'ಮ್ಯಾಟ್ನಿ' ಸಿನಿಮಾ ಮುಂದಿನ ವಾರವೇ ತೆರೆಗೆ ಬರಲಿದೆ.