bredcrumb

ತೆಲುಗಿನ ಮಹಿಳಾ ಪ್ರಧಾನ ಚಿತ್ರದಲ್ಲಿ ಆಲಿಯಾ

By Narayan
| Published: Sunday, November 10, 2024, 21:27 [IST]

ನಟಿ ಆಲಿಯಾ ಭಟ್ ಮತ್ತೊಮ್ಮೆ ಸೌತ್ ಸಿನಿಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. 'RRR' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಆಲಿಯಾ ಈ ಬಾರಿ ಪೂರ್ಣ ಪ್ರಮಾಣದ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸ್ತಾರೆ ಎನ್ನಲಾಗ್ತಿದೆ. 

Alia Bhatt Team up with Director Nag Ashwin for women centric film
1/7

ಬಾಲಿವುಡ್ ನಟಿ ಆಲಿಯಾ ಭಟ್ ಬಣ್ಣದ ಲೋಕದಿಂದ ಕೊಂಚ ವಿರಾಮ ಪಡೆದಿದ್ದಾರೆ. ಮಗಳ ಪೋಷಣೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದರೂ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ.
Alia Bhatt Team up with Director Nag Ashwin for women centric film
2/7

ಶೀಘ್ರದಲ್ಲೇ ತೆಲುಗಿನ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ಆಲಿಯಾ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ. 'ಮಹಾನಟಿ' ಹಾಗೂ 'ಕಲ್ಕಿ 2898AD' ಚಿತ್ರಗಳ ಖ್ಯಾತಿಯ ನಾಗ್ ಅಶ್ವಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರಂತೆ. ಈ ಬಗ್ಗೆ ನಿರ್ದೇಶಕರು ಚರ್ಚೆ ನಡೆಸುತ್ತಿದ್ದಾರಂತೆ.
Alia Bhatt Team up with Director Nag Ashwin for women centric film
3/7

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಾಗ್ ಅಶ್ವಿನ್ ನಿರ್ದೇಶನದ 2 ಚಿತ್ರಗಳು ಹಿಟ್ ಆಗಿದೆ. ಅದರಲ್ಲೂ ನಟಿ ಸಾವಿತ್ರಿ ಜೀವನಾಧರಿತ 'ಮಹಾನಟಿ' ಸಿನಿಮಾ ದಾಖಲೆ ಬರೆದಿತ್ತು. ಕೀರ್ತಿ ಸುರೇಶ್ ನಾಯಕಿಯಾಗಿ ಗೆದ್ದಿದ್ದಾರೆ. ಆಲಿಯಾ ಜೊತೆ ಅಂಥದ್ದೆ ಚಿತ್ರಕ್ಕೆ ನಾಗ್ ಪ್ಲ್ಯಾನ್ ಮಾಡ್ತಿದ್ದಾರೆ.
Alia Bhatt Team up with Director Nag Ashwin for women centric film
4/7

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲೇ ಈ ಸಿನಿಮಾ ಕೂಡ ಮೂಡಿ ಬರಲಿದೆ. ಸದ್ಯ ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಂದ ಮೊದಲ ಆಯ್ಕೆ ಆಲಿಯಾ ಎನ್ನುವಂತಾಗಿದೆ. ಇಂತಿಪ್ಪ ಆಲಿಯಾ ಜೊತೆ ನಾಗ್ ಯಾವ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ ಎನ್ನುವ ಕುತೂಹಲ ಮೂಡಿದೆ.
Alia Bhatt Team up with Director Nag Ashwin for women centric film
5/7

ಕಳೆದ ತಿಂಗಳ ಆಲಿಯಾ ಭಟ್ ನಟನೆಯ 'ಜಿಗ್ರಾ' ಸಿನಿಮಾ ತೆರೆಗೆ ಬಂದಿತ್ತು. ಆದರೆ ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ 'ಆಲ್ಪಾ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
Alia Bhatt Team up with Director Nag Ashwin for women centric film
6/7

ಅತ್ತ 'ಕಲ್ಕಿ 2898AD' ಸಿನಿಮಾ ಬಳಿಕ ನಾಗ್ ಅಶ್ವಿನ್ ಹೊಸ ಪ್ರಾಜೆಕ್ಟ್ ಆರಂಭಿಸಿಲ್ಲ. ಈ ಚಿತ್ರದ ಸೀಕ್ವೆಲ್ ತೆರೆಗೆ ತರ್ತಾರೆ ಎನ್ನಲಾಗಿತ್ತು. ಆದರೆ ಅದಕ್ಕೂ ಮುನ್ನ ಒಂದು ಮಹಿಳಾ ಪ್ರಧಾನ ಚಿತ್ರಕ್ಕೆ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಆಲಿಯಾ ಚಿತ್ರಕ್ಕೆ ನಾಯಕಿ ಆಗ್ತಾರಾ? ಕಾದು ನೋಡಬೇಕು.
Alia Bhatt Team up with Director Nag Ashwin for women centric film
7/7

ಖ್ಯಾತ ಫಿಲ್ಮ್ ಮೇಕರ್ ಮಹೇಶ್ ಭಟ್ ಮಗಳು ಆಲಿಯಾ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಆದರೆ ನೆಪೊ ಕಿಡ್ ಹಣೆಪಟ್ಟಿ ತೆಗೆದು ತಮ್ಮ ಅದ್ಭುತ ನಟನೆ ಮೂಲಕ ಮೋಡಿ ಮಾಡುತ್ತಿದ್ದಾರೆ. ಮತ್ತಷ್ಟು ಒಳ್ಳೆ ಪಾತ್ರಗಳಲ್ಲಿ ನಟಿಸಿ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.
X