bredcrumb

ಮದುವೆ ಮಿಸ್ ಮಾಡಿಕೊಂಡ್ರಿ.. ರೆಸೆಪ್ಷನ್‌ನಲ್ಲಿ ದೀಪಿಕಾ ದಾಸ್ ಹೇಗೆ ಕಾಣಿಸುತ್ತಾರೆ ನೋಡಿ

By Muralidhar S
| Published: Tuesday, March 12, 2024, 23:15 [IST]
ನಾಗಿಣಿ ಹಾಗೂ ರಿಯಾಲಿಟಿ ಶೋ ಬಿಗ್‌ಬಾಸ್ ಮೂಲಕ ಜನಪ್ರಿಯರಾಗಿರುವ ನಟಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಬಹುಕಾಲದ ಗೆಳೆಯ ದೀಪಕ್ ಜೊತೆ ಗೋವಾದಲ್ಲಿ ಮದುವೆ ಆಗಿದ್ದರು. ಕೇವಲ ಆಪ್ತರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಡೆಸ್ಟಿನೇಷನ್ ಮದುವೆ ಆಗಿದ್ದ ದೀಪಿಕಾ ದಾಸ್ ಇತ್ತೀಚೆಗೆ ಆರತಕ್ಷತೆ ಮಾಡಿಕೊಂಡಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Deepika Das Reception photos
1/8

ನಾಗಿಣಿ ಹಾಗೂ ರಿಯಾಲಿಟಿ ಶೋ ಬಿಗ್‌ಬಾಸ್ ಮೂಲಕ ಜನಪ್ರಿಯರಾಗಿರುವ ನಟಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಬಹುಕಾಲದ ಗೆಳೆಯ ದೀಪಕ್ ಜೊತೆ ಗೋವಾದಲ್ಲಿ ಮದುವೆ ಆಗಿದ್ದರು. ಕೇವಲ ಆಪ್ತರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಡೆಸ್ಟಿನೇಷನ್ ಮದುವೆ ಆಗಿದ್ದ ದೀಪಿಕಾ ದಾಸ್ ಇತ್ತೀಚೆಗೆ ಆರತಕ್ಷತೆ ಮಾಡಿಕೊಂಡಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Deepika Das Reception photos
2/8

ಇತ್ತೀಚೆಗೆ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ದೀಪಿಕಾ ದಾಸ್ ಹಾಗೂ ದೀಪಕ್ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ಬೀಗರೂಟ ಕೂಡ ಇತ್ತು. ಈ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಹಾಗೂ ಆತ್ಮೀಯರಿಗೆ ಆಹ್ವಾನ ನೀಡಲಾಗಿತ್ತು. ವಾಸುಕಿ ವೈಭವ್, ದಿವ್ಯಾ ಉರುಡಗ, ಅನುಪಮ ಗೌಡ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಕೋರಿದ್ರು.
Deepika Das Reception photos
3/8

ದೀಪಿಕಾ ದಾಸ್ ಹಾಗೂ ದೀಪಕ್‌ಗೆ ಹಲವು ವರ್ಷಗಳಿಂದ ಗೆಳೆತನವಿತ್ತು. ಆದರೆ, ಕಳೆದ ಒಂದು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ದೀಪಿಕಾ ಮೂಲತ: ಬೆಂಗಳೂರಿನವರು. ಉದ್ಯಮಿಯಾಗಿರೋ ದೀಪಕ್ ಚಿತ್ರರಂಗಕ್ಕೆ ಸಂಬಂಧ ಪಟ್ಟವರಲ್ಲ.
Deepika Das Reception photos
4/8

ಆರತಕ್ಷತೆ ವೇಳೆ ದೀಪಿಕಾ ದಾಸ್ ಮದುವೆ ಆಗಿರುವ ಸಂಭ್ರಮದಲ್ಲಿ ಇದ್ದರು. ಇದೇ ವೇಳೆ ದಿಢೀರನೇ ಮದುವೆ ಆಗಿಲ್ಲ. ಕೆಲವು ದಿನಗಳಿಂದ ತಯಾರಿ ನಡೆದಿತ್ತು ಎಂದು ಇದೇ ವೇಳೆ ರಿವೀಲ್ ಮಾಡಿದ್ದಾರೆ. ಇದರೊಂದಿಗೆ ದೀಪಿಕಾ ದಾಸ್ ಆಗಿ ಹೆಸರು ಮಾಡುವುದಕ್ಕೆ ಸಹಾಯ ಮಾಡಿದವರನ್ನು ಈ ವೇಳೆ ನೆನಪಿಸಿಕೊಂಡಿದ್ದಾರೆ.
Deepika Das Reception photos
5/8

ದೀಪಿಕಾ ದಾಸ್ ಹಾಗೂ ದೀಪಕ್ ಇಬ್ಬರೂ ನಾಲ್ಕೈದು ವರ್ಷಗಳಿಂದ ಪರಿಚಯವಿದ್ದರೂ ಮದುವೆ ಆಗಬೇಕು ಎಂದುಕೊಂಡಿರಲಿಲ್ಲ. ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಬಳಿಕ ಮದುವೆ ಬಗ್ಗೆ ಆಲೋಚನೆ ಮಾಡಿದ್ದರು. ಹೀಗಾಗಿ ಮೊದಲ ಡೇಟ್ ಮಾಡಿ ನಂತರ ಮದುವೆ ಆಗಿದ್ದಾರೆ.
Deepika Das Reception photos
6/8

ದೀಪಿಕಾ ದಾಸ್ ಮದುವೆ ಬಗ್ಗೆ ಬಹಳಷ್ಟು ಕನಸು ಕಟ್ಟಿಕೊಂಡಿದ್ದರು. ಡೆಸ್ಟಿನೇಷನ್ ಮದುವೆ ಆಗಬೇಕು ಅಂದುಕೊಂಡಿದ್ದರಿಂದ ಗೋವಾದಲ್ಲಿಯೇ ಮದುವೆ ಆಗಬೇಕು ಎಂದುಕೊಂಡಿದ್ದರು. ಹೀಗಾಗಿ ಎರಡು ಮೂರು ಸಾರಿ ಗೋವಾಗೆ ಹೋಗಿ ಮದುವೆಗೆ ತಯಾರಿ ಮಾಡಿಕೊಂಡಿದ್ದರು.
Deepika Das Reception photos
7/8

ಆರತಕ್ಷತೆ ವೇಳೆ ದೀಪಕ್ ಪರಿಚಯ ಮಾಡಿಕೊಟ್ಟ ದೀಪಿಕಾ ದಾಸ್ ತಮ್ಮ ಪತಿ ಚಿತ್ರರಂಗಕ್ಕೆ ಸೇರಿದವರಲ್ಲ. ಅವರು ಲೈಮ್‌ಲೈಟ್‌ನಿಂದ ದೂರು ಉಳಿದ್ದಾರೆ. ಅವರನ್ನು ಹೆದರಿಸಬೇಡಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.
Deepika Das Reception photos
8/8

ಅಂದ ಹಾಗೆ ದೀಪಕ್ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದಾರೆ. ಆದರೆ, ದುಬೈನ ಉದ್ಯಮಿ ಎಂದು ಸುದ್ದಿಯಾಗಿತ್ತು. ಆದರೆ, ದೀಪಿಕಾ ದಾಸ್ ಪತಿ ದೀಪಕ್ ಅಪ್ಪಟ ಬೆಂಗಳೂರಿನವರಾಗಿದ್ದು, ದುಬೈನಲ್ಲಿ ಸ್ಟಾರ್ಟಪ್ ಆರಂಭಿಸಿದ್ದಾರೆ.
X