bredcrumb

ಲೇಡಿ ಬಾಸ್ ಲುಕ್ ಕೊಟ್ಟ ಬಾಲಿವುಡ್‌ನ ಕಪೂರ್ ಕುಟುಂಬದ ಸೊಸೆ ಆಲಿಯಾ ಭಟ್

By Muralidhar S
| Published: Tuesday, November 5, 2024, 23:34 [IST]

ಆಲಿಯಾ ಭಟ್ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಈಕೆ ನಟಿಸುವ ಸಿನಿಮಾಗಳು ಬಾಕ್ಸಾಫೀಸ್‌ ಜೋರಾಗಿಯೇ ಸದ್ದು ಮಾಡುತ್ತವೆ. ಇತ್ತೀಚೆಗೆ ತೆರೆಕಂಡ ಸಿನಿಮಾಗಳನ್ನು ಹೊರತು ಪಡಿಸಿ. ಆದರೆ, ಆಲಿಯಾ ಕೇವಲ ಸಿನಿಮಾದಿಂದ ಅಷ್ಟೇ ಗಮನ ಸೆಳೆಯುವುದಿಲ್ಲ. ಬದಲಾಗಿ, ಅವರ ಫ್ಯಾಷನ್ ಸೆನ್ಸ್‌ಗೂ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಲೇಡಿ ಬಾಸ್ ಲುಕ್ ಫೋಟೊಗಳು ವೈರಲ್ ಆಗುತ್ತಿವೆ.

Alia Bhatt new photos went viral
1/6

ಆಲಿಯಾ ಭಟ್ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಈಕೆ ನಟಿಸುವ ಸಿನಿಮಾಗಳು ಬಾಕ್ಸಾಫೀಸ್‌ ಜೋರಾಗಿಯೇ ಸದ್ದು ಮಾಡುತ್ತವೆ. ಇತ್ತೀಚೆಗೆ ತೆರೆಕಂಡ ಸಿನಿಮಾಗಳನ್ನು ಹೊರತು ಪಡಿಸಿ. ಆದರೆ, ಆಲಿಯಾ ಕೇವಲ ಸಿನಿಮಾದಿಂದ ಅಷ್ಟೇ ಗಮನ ಸೆಳೆಯುವುದಿಲ್ಲ. ಬದಲಾಗಿ, ಅವರ ಫ್ಯಾಷನ್ ಸೆನ್ಸ್‌ಗೂ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಲೇಡಿ ಬಾಸ್ ಲುಕ್ ಫೋಟೊಗಳು ವೈರಲ್ ಆಗುತ್ತಿವೆ.
Alia Bhatt new photos went viral
2/6

ಆಲಿಯಾ ಭಟ್ ತಮ್ಮ ಫ್ಯಾಷನ್ ಸೆನ್ಸ್‌ನಿಂದ ಅಭಿಮಾನಿಗಳನ್ನು ಯಾವಾಗಲೂ ಇಂಪ್ರೆಸ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಕೂಡ ಕ್ಲಾಸಿಕ್ ವೈಟ್ ಶರ್ಟ್ ಧರಿಸಿ, ಡೆನಿಮ್ ಲುಕ್ ಕೊಟ್ಟಿದ್ದಾರೆ. ಕೂಲಿಂಗ್ ಕ್ಲಾಸ್‌ ಹಾಕೊಂಡು ಕಾರಿಂದ ಇಳಿಯುತ್ತಿದ್ದಾರೆ. ಈ ಫೋಟೊಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
Alia Bhatt new photos went viral
3/6

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಲಿಯಾ ಭಟ್ ಈ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳನ್ನು ನೋಡಿ ನೆಟ್ಟಿಗರ ಕಣ್ಣನ್ನೇ ಮುಚ್ಚಿದಂತೆ ಇಲ್ಲ. ಒಂದು ಆಲಿಯಾ ಭಟ್ ಗತ್ತಿಗೆ ಫಿದಾ ಆಗಿದ್ದರೆ, ಹೆಣ್ಣು ಮಕ್ಕಳ ಕಣ್ಣು ಆಕೆಯ ಕೈಯಲ್ಲಿ ಇದ್ದ ಎರಡೂವರೆ ಲಕ್ಷ ರೂಪಾಯಿಯ ಬ್ಯಾಗ್ ಮೇಲೆ ಇತ್ತು. ಅದನ್ನು ನೋಡಿ ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ.
Alia Bhatt new photos went viral
4/6

ಇತ್ತೀಚೆಗೆ ಆಲಿಯಾ ಭಟ್ 'ಜಿಗ್ರಾ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇವರೊಂದಿಗೆ ಹೊಸ ಪ್ರತಿಭೆ ವೆದಾಂಗ್ ರೈನಾ ಕೂಡ ನಟಿಸಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಈ ಸಿನಿಮಾ ಬಗ್ಗೆ ಆಲಿಯಾ ಭಟ್ ಸಿಕ್ಕಾಪಟ್ಟೆ ನಿರೀಕ್ಷೆಯಲ್ಲಿ ಇದ್ದರು.
Alia Bhatt new photos went viral
5/6

ಆಲಿಯಾ ನಟಿಸಿದ 'ಜಿಗ್ರಾ' ಸಿನಿಮಾ ಕಟು ಟೀಕೆಗೆ ಗುರಿಯಾಗಿತ್ತು. ಆಲಿಯಾ ಭಟ್ ಸಿನಿಮಾ ವಿರುದ್ಧ ಬಾಲಿವುಡ್ ಮಂದಿನೇ ನೆಗೆಟಿವ್ ಆಗಿ ಮಾತಾಡುವುದಕ್ಕೆ ಶುರು ಮಾಡಿದ್ದರು. ಅದರಲ್ಲಿ ಬಾಲಿವುಡ್ ನಟಿ ದಿವ್ಯಾ ಖೋಸ್ಲಾ ಕುಮಾರ್ ಕೂಡ ಇಬ್ಬರು. ಜಿಗ್ರಾ ಸಿನಿಮಾದ ಬಾಕ್ಸಾಫೀಸ್ ನಂಬರ್ ಅನ್ನು ತಿರುಚಲಾಗಿದೆ ಎಂದು ಟೀಕೆಯನ್ನು ಮಾಡಿದ್ದರು.
Alia Bhatt new photos went viral
6/6

ಒಂದು ಸಿನಿಮಾ ಸೋತರೆ ಏನಂತೆ. ಆಲಿಯಾ ಭಟ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಪ್ರೆಗ್ನೆನ್ಸಿ ಮುಗಿಸಿ ಮತ್ತೆ ಸಿನಿಮಾಗೆ ಮರಳಿರುವ ಆಲಿಯಾ ಭಟ್‌ಗೆ ಸೋಲಿನ ರುಚಿ ಸಿಕ್ಕಿದೆ. ಹೀಗಾಗಿ ಮುಂದಿನ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸಲಿದ್ದಾರೆ. ಯಾಕಂದ್ರೆ ಆಲಿಯಾ ಭಟ್‌ಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ.
X