bredcrumb

ಯಶ್ 'ಟಾಕ್ಸಿಕ್' ಅಖಾಡಕ್ಕೆ ಕೈರಾ ಎಂಟ್ರಿ

By Narayan
| Published: Wednesday, November 6, 2024, 17:11 [IST]

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮುಂಬೈನಲ್ಲಿ ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಶುರುವಾಗಿದೆ. ಕಿಯಾರಾ ಅದ್ವಾನಿ ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಅಲ್ಲಿಗೆ ಆಕೆ ನಾಯಕಿ ಎನ್ನುವುದು ಪಕ್ಕಾ ಆಗಿದೆ. 

bollywood actress Kiara Advani joins yash starrer Toxic film shoot
1/7

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್‌' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಬೆಂಗಳೂರಿನಲ್ಲಿ ಮೊದಲ ಶೆಡ್ಯೂಲ್ ಬಳಿಕ ಮುಂಬೈನಲ್ಲಿ ಹೊಸ ಶೆಡ್ಯೂಲ್ ಆರಂಭವಾಗಿದೆ. ಚಿತ್ರದಲ್ಲಿ ಕಿಯಾರಾ ಅದ್ವಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಆಕೆ ತಂಡ ಸೇರಿಕೊಂಡಿದ್ದಾರೆ.
bollywood actress Kiara Advani joins yash starrer Toxic film shoot
2/7

'ಟಾಕ್ಸಿಕ್' ಚಿತ್ರದ ಬಗ್ಗೆ ಚಿತ್ರತಂಡ ಯಾವುದೇ ಅಪ್‌ಡೇಟ್ ಕೊಡುತ್ತಿಲ್ಲ. ಬರೀ ಅಂತೆಕಂತೆ ಸಂತೆಯಾಗಿದೆ. ಕಿಯಾರಾ ಅದ್ವಾನಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಹಿಂದೆಯೇ ನಡೆದಿತ್ತು. ಆದರೆ ಅದನ್ನು ಚಿತ್ರತಂಡ ಖಚಿತಪಡಿಸಲಿಲ್ಲ. ಇದೀಗ ಆಕೆ ಚಿತ್ರೀಕರಣದಲ್ಲಿ ಭಾಗಿ ಆಗಿರುವ ಬಗ್ಗೆ ವರದಿಯಾಗಿದೆ.
bollywood actress Kiara Advani joins yash starrer Toxic film shoot
3/7

ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ 'ಟಾಕ್ಸಿಕ್' ಫಸ್ಟ್ ಶೆಡ್ಯೂಲ್ ಶೂಟಿಂಗ್ ನಡೆದಿತ್ತು. 25 ದಿನಗಳ ಕಾಲ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿತ್ತು. ನಯನತಾರ ಸಹ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇದೀಗ ಕಿಯಾರಾ ತಂಡವನ್ನು ಸೇರಿಕೊಂಡಿದ್ದಾರೆ.
bollywood actress Kiara Advani joins yash starrer Toxic film shoot
4/7

ನಟ ಯಶ್ ದೀಪಾವಳಿ ಆಚರಿಸಿ ಮುಂಬೈ ಕಡೆ ಪಯಣ ಬೆಳೆಸಿದ್ದರು. 25 ದಿನಗಳ ಕಾಲ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ. ಕಿಯಾರಾ ಮಾತ್ರವಲ್ಲದೇ ಬಾಲಿವುಡ್ ನಟಿ ತಾರಾ ಸುತಾರಿಯಾ ಕೂಡ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಕೆ ಬೆಂಗಳೂರು ಶೆಡ್ಯೂಲ್‌ನಲ್ಲಿ ಭಾಗಿ ಆಗಿದ್ದರು.
bollywood actress Kiara Advani joins yash starrer Toxic film shoot
5/7

ಇನ್ನು ಕಿಯಾರಾ ನಟನೆಯ 'ಗೇಮ್‌ ಚೇಂಜರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಂಕ್ರಾಂತಿಗೆ ಚಿತ್ರ ತೆರೆಗೆ ಬರ್ತಿದ್ದು ಈಗಾಗಲೇ ಪ್ರಮೋಷನ್ ಶುರುವಾಗಿದೆ. ರಾಮ್ ಚರಣ್ ಜೊತೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
bollywood actress Kiara Advani joins yash starrer Toxic film shoot
6/7

'ಟಾಕ್ಸಿಕ್' ಜೊತೆಗೆ ಹೃತಿಕ್ ರೋಷನ್ ನಟನೆಯ 'ವಾರ್-2' ಚಿತ್ರದಲ್ಲಿ ಕೂಡ ಕಿಯಾರಾ ಬಣ್ಣ ಹಚ್ಚಿದ್ದಾರೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ಕೂಡ ಬಣ್ಣ ಹಚ್ಚುವ ಸಾಧ್ಯತೆಯಿದೆ.
bollywood actress Kiara Advani joins yash starrer Toxic film shoot
7/7

ಸದ್ಯ 'ಟಾಕ್ಸಿಕ್' ಚಿತ್ರದ ಮೂಲಕ ಬಾಲಿವುಡ್ ಬ್ಯೂಟಿ ಸ್ಯಾಂಡಲ್‌ವುಡ್‌ಗೆ ಬಂದಂತಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
X