bredcrumb

ಅನುರಾಗ್ ಕಶ್ಯಪ್ ಮಗಳು ಆಲಿಯಾ ಮದುವೆ ಸಮಾರಂಭ, ಹೇಗಿತ್ತು ಅರಿಶಿನ ಶಾಸ್ತ್ರ...?

By Kannada Filmibeat Photos
| Published: Monday, December 9, 2024, 19:23 [IST]

ಅನುರಾಗ್ ಕಶ್ಯಪ್, ಬಾಲಿವುಡ್ ನ ಕ್ರಿಯೇಟಿವ್ ಡೈರೆಕ್ಟರ್. ಬಣ್ಣದ ಬದುಕಿನಾಚೆ, ರಾಜಕೀಯ ಪ್ರಪಂಚದಲ್ಲಿ ಕೆಲ ಕಾಲ ಸದ್ದು ಮಾಡಿ.. ಸುದ್ದಿಯಾಗಿ.. ಆ ನಂತರ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದ ಅನುರಾಗ್ ಕಶ್ಯಪ್ ಸದ್ಯಕ್ಕೆ ಪೊಲಿಟಿಕಲ್ ಮ್ಯಾಚ್ ನಲ್ಲಿ ರಿಟೈರ್ಡ್ ಹರ್ಟ್ ಆಗಿದ್ದಾರೆ. ಬಾಲಿವುಡ್ ಗೆ ಮರಳಿದ್ದಾರೆ. ಇಂಥ ಅನುರಾಗ್ ಕಶ್ಯಪ್  ಅವರ ಮಗಳು ಆಲಿಯಾ ಕಶ್ಯಪ್ ಮದುವೆಯ ಸಂಭ್ರಮದಲ್ಲಿದ್ದಾರೆ. ತಮ್ಮ ಬಹುಕಾಲದ ಸ್ನೇಹಿತನ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. 

Aaliyah Kashyap Starts Pre-Wedding Celebrations with a Yellow-Themed Haldi Ceremony.
1/5

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮಗಳು ಆಲಿಯಾ ತಮ್ಮ ಬದುಕಿನ ಹೊಸ ಕಥೆಗೆ ಮುನ್ನುಡಿ ಬರೆದಿದ್ದಾರೆ. ಸದ್ದು ಗದ್ದಲ ಇಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಆದರೆ, ಇದು ಬಣ್ಣದ ಲೋಕ. ವಿಷಯವನ್ನು ಎಷ್ಟೇ ಮುಚ್ಚಿಡುವ ಪ್ರಯತ್ನ ಮಾಡಿದರು ಕೂಡ ಹೇಗೋ ಎಲ್ಲವೂ ಬಹಿರಂಗವಾಗುತ್ತೆ. ವ್ಯೆಯಕ್ತಿಕ ವಿಚಾರ ಸುದ್ದಿಯಾಗುತ್ತೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಅನುರಾಗ್ ಕಶ್ಯಪ್ ಅವರ ಮಗಳ ಅರಿಣಿಣ ಶಾಸ್ತ್ರದ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಅನುರಾಗ್ ಕಶ್ಯಪ್ ಮತ್ತು ಮದುವೆಯ ಬಂಧನಕ್ಕೊಳಗಾಗುತ್ತಿರುವ ಅವರ ಮಗಳಿಗೆ ಶುಭಾಶಯದ ಮಹಾಪೂರ ಕೂಡ ಹರಿದು ಬರುತ್ತಿದೆ.
Aaliyah Kashyap Starts Pre-Wedding Celebrations with a Yellow-Themed Haldi Ceremony.
2/5

ತಮ್ಮ ಬಹುಕಾಲದ ಗೆಳೆಯ ಶೇನ್ ಗ್ರೆಗೊಯಿರ್ ಜೊತೆ ಆಲಿಯಾ ಕಶ್ಯಪ್ ಹೊಸ ಜೀವನವನ್ನು ಶುರು ಮಾಡಿದ್ದು, ತಮ್ಮ ಅರಿಷಿಣ ಶಾಸ್ತ್ರದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅರಿಣಿಣ ಶಾಸ್ತ್ರದಲ್ಲಿ ಚಿನ್ನದ ಲೇಪನ ಹೊಂದಿರುವ ಸೀರೆಯಲ್ಲಿ ಮಿರ ಮಿರ ಮಿಂಚಿದ್ದಾರೆ. ಇನ್ನು ಆಲಿಯಾ ಕೈ ಹಿಡಿದ ಹುಡುಗ ಶೇನ್ ಗ್ರೆಗೊಯಿರ್ ಕೂಡ ಹಳದಿ ಬಣ್ಣದ ಕಾಸ್ಟೂಮ್‌ ಧರಿಸಿದ್ದಾರೆ
Aaliyah Kashyap Starts Pre-Wedding Celebrations with a Yellow-Themed Haldi Ceremony.
3/5

ಇನ್ನೂ ಅನುರಾಗ್ ಕಶ್ಯಪ್ ಮೊದಲಿಂದ ಸಭೆ ಸಮಾರಂಭಗಳಿಂದ ದೂರ ಇರುವ ವ್ಯಕ್ತಿ. ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಚಿತ್ರರಂಗದಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳುವ ಅನುರಾಗ್ ಕಶ್ಯಪ್ ತಮ್ಮ ಮಗಳ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗುವಂತೆ ಕೆಲವೇ ಕೆಲವರನ್ನು ಆಹ್ವಾನಿಸಿದ್ದರು. ಆ ಪೈಕಿ ಬಹುತೇಕರು ಆಲಿಯಾ ಅವರ ಸ್ನೇಹಿತ ಮತ್ತು ಸ್ನೇಹಿತೆಯರೇ ಆಗಿದ್ದರು. ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕಪೂರ್, ಇಮ್ತಿಯಾಜ್ ಅಲಿಯ ಪುತ್ರಿ ಇದಾ ಅಲಿ ನವ ಜೋಡಿಗೆ ಶುಭ ಕೋರಲು ಆಗಮಿಸಿದ್ದರು
Aaliyah Kashyap Starts Pre-Wedding Celebrations with a Yellow-Themed Haldi Ceremony.
4/5

ಇನ್ನುಳಿದಂತೆ ಮದುವೆ ಸಮಾರಂಭ ಶುರುವಾಗುವ ಮುನ್ನ ಅನುರಾಗ್ ಕಶ್ಯಪ್ ತಮ್ಮ ಮಗಳು ಆಲಿಯಾ ಜೊತೆ ಶೂಜಿತ್ ಸಿರ್ಕಾರ್ ನಿರ್ದೇಶನದ, ಅಭಿಷೇಕ್ ಬಚ್ಚನ್ ಅಭಿನಯದ ಐ ವಾಂಟ್ ಟು ಟಾಕ್ ಚಿತ್ರವನ್ನು ನೋಡಲು ತೆರಳಿದ್ದರು. ಇನ್ನೇನು ನನ್ನ ಮಗಳು ಇನ್ನೊಂದೆರಡು ವಾರದಲ್ಲಿ ಮದುವೆಯಾಗಲಿದ್ದಾಳೆ. ಆಕೆಯನ್ನು ಬೀಳ್ಕೊಡುವ ಮೊದಲು ಈ ಚಿತ್ರವನ್ನು ನೋಡಿದೆ ಎಂದು ಬರೆದುಕೊಂಡಿದ್ದರು. ಭಾವುಕರಾಗಿದ್ದರು
Aaliyah Kashyap Starts Pre-Wedding Celebrations with a Yellow-Themed Haldi Ceremony.
5/5

ಅಂದ್ಹಾಗೇ ಆಲಿಯಾ ಮತ್ತು ಶೇನ್ ಕಳೆದ ವರ್ಷ ಮೇನಲ್ಲಿ ಮುಂಬೈನ್ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಒಂದೂವರೆ ವರ್ಷದ ನಂತರ ಇಬ್ಬರು ಪರಸ್ಪರ ಅರ್ಥವನ್ನು ಮಾಡಿಕೊಂಡು ಹೊಸ ಬದುಕಿಗೆ ಕಾಲಿಡುತ್ತಿರುವುದು ವಿಶೇಷ. ಇನ್ನುಳಿದಂತೆ ಆಲಿಯಾ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಅನೇಕರು ಶುಭಾಶಯವನ್ನು ಕೋರುತ್ತಿದ್ದು ಅನುರಾಗ್ ಕಶ್ಯಪ್ ಎಲ್ಲರಿಗೆ ಧನ್ಯವಾದವನ್ನು ಹೇಳುತ್ತಿದ್ದಾರೆ.
X