bredcrumb

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದ ರಾಜ್ ಕಪೂರ್ ಕುಟುಂಬ..!

By Kannada Filmibeat Photos
| Published: Thursday, December 12, 2024, 18:36 [IST]

ಭಾರತ ಚಿತ್ರರಂಗದ ಶೋ ಮ್ಯಾನ್ ಎಂದೇ ಕರೆಯಲ್ಪಡುವವರು ರಾಜ್ ಕಪೂರ್.  ಬದುಕಿದ್ದಷ್ಟೂ ದಿನ ಕಲೆಯನ್ನೇ ಉಸಿರಾಗಿಸಿಕೊಂಡು ಬದುಕಿದ ರಾಜ್ ಕಪೂರ್ ಆಗ್, ಆವಾರ, ಬರ್ಸಾತ್, ಶ್ರೀ 420, ಬಾಬಿ ಅಂತಹ ಶ್ರೇಷ್ಠ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದರು. ಮೇರಾ ನಾಮ್ ಜೋಕರ್ ಚಿತ್ರದ ಮೂಲಕ ಸೋಲನ್ನು ಕಂಡರು. ತಮ್ಮ ವೃತ್ತಿಬದುಕಿನಲ್ಲಿ ಗೆಲುವು ಸೋಲನ್ನು ಕಂಡು ಎರಡನ್ನೂ ಸಮಾನವಾಗಿ ಸ್ವೀಕರಿಸಿದ ರಾಜ್ ಕಪೂರ್ ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಕಪೂರ್ ಖಾನ್ದಾನ್ ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. ರಾಜ್ ಕಪೂರ್ ಜನ್ಮ ಶತಮಾನೋತ್ಸವಕ್ಕೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದೆ. 

Kapoor Family Meets PM Modi to Mark the Centenary of Late Raj Kapoor.
1/5

ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದ ಕಪೂರ್ ಕುಟುಂಬ, ನರೇಂದ್ರ ಮೋದಿಯವರ ಜೊತೆ ಇದೇ ವೇಳೆ ಸಂವಾದವನ್ನು ಕೂಡ ನಡೆಸಿದೆ. ರಣ್‌ಬೀರ್ ಕಪೂರ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ನೀತು ಕಪೂರ್, ರಿಧಿಮಾ ಕಪೂರ್, ಹೀಗೆ ಕಪೂರ್ ಮನೆತನದ ಅನೇಕರು ನರೇಂದ್ರ ಮೋದಿಯವರ ಜೊತೆ ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಕೆಲ ಹೊತ್ತು ನರೇಂದ್ರ ಮೋದಿಯವರ ಜೊತೆ ಹರಟೆಯನ್ನು ಹೊಡೆದಿದ್ದಾರೆ.
Kapoor Family Meets PM Modi to Mark the Centenary of Late Raj Kapoor.
2/5

ಕೇವಲ ಕಪೂರ್ ಕುಟುಂಬ ಮಾತ್ರ ಅಲ್ಲ ಕರೀನಾ ಕಪೂರ್ ಅವರ ಪತಿ ಸೈಫ್ ಅಲಿ ಖಾನ್ ಕೂಡ ಈ ಸಮಯದಲ್ಲಿ ನರೇಂದ್ರ ಮೋದಿಯವರ ಜೊತೆ ಕಾಲ ಕಳೆದಿದ್ದಾರೆ. ನಿಮ್ಮ ಆತ್ಮವಿಶ್ವಾಸ, ನಿಮ್ಮ ನಗು, ನೀವು ಕಣ್ಣಲ್ಲಿ ಕಣ್ಣೀಟ್ಟು ಮಾತನಾಡುವ ರೀತಿ ನನಗೆ ತುಂಬಾ ಇಷ್ಟವಾಯ್ತು ಎಂದಿದ್ದಾರೆ. ಇದೇ ಮೊದಲ ಬಾರಿ ಅಲ್ಲ ಈ ಹಿಂದೆ ಕೂಡ ನೀವು ನಮಗೆ ನಿಮ್ಮ ಅತ್ಯಮೂಲ್ಯವಾದ ಸಮಯವನ್ನು ನೀಡಿದ್ದೀರಿ ನಮ್ಮ ಕುಟುಂಬದ ಮೇಲೆ ನಿಮಗೆ ಇರುವ ಕಾಳಜಿಗೆ ಧನ್ಯವಾದ ಎಂದು ಕೂಡ ಸೈಫ್ ಅಲಿ ಖಾನ್ ಹೇಳಿದ್ದಾರೆ.
Kapoor Family Meets PM Modi to Mark the Centenary of Late Raj Kapoor.
3/5

ಸೈಫ್ ಅಲಿ ಖಾನ್ ಹೊರತು ಪಡಿಸಿದರೆ ಕಪೂರ್ ಮನೆಯನ್ನು ಸೊಸೆಯಾಗಿ ಬೆಳಗಿದ ಆಲಿಯಾ ಭಟ್ ಕೂಡ ಈ ಸಂವಾದದಲ್ಲಿ ಭಾಗಿಯಾಗಿದ್ದಾರೆ. ನರೇಂದ್ರ ಮೋದಿ ಅವರ ಕುರಿತು ಅಭಿಮಾನದ ಮಾತುಗಳನ್ನಾಡುವ ಮೂಲಕ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ.
Kapoor Family Meets PM Modi to Mark the Centenary of Late Raj Kapoor.
4/5

ಇನ್ನು ರಾಜ್ ಕಪೂರ್ ಅವರ 100ನೇ ಜಯಂತಿ ಪ್ರಯುಕ್ತ ರಾಜ್ ಕಪೂರ್ ಅವರ ಚಿತ್ರೋತ್ಸವವನ್ನು ಕಪೂರ್ ಕುಟುಂಬ ಆಯೋಜಿಸಿದೆ. ಮುಂಬೈ ಸೇರಿದಂತೆ ಭಾರತದ ಸುಮಾರು ನಲವತ್ತು ನಗರಗಳಲ್ಲಿ ರಾಜ್ ಕಪೂರ್ ಚಿತ್ರ ಉತ್ಸವನ್ನು ಹಮ್ಮಿಕೊಂಡಿದೆ.
Kapoor Family Meets PM Modi to Mark the Centenary of Late Raj Kapoor.
5/5

ಇನ್ನುಳಿದಂತೆ ಡಿಸೆಂಬರ್ 13ರಿಂದ 15ರವರೆಗೆ ರಾಜ್ ಕಪೂರ್ ಅವರ ಈ ಚಿತ್ರ ಉತ್ಸವ ನಡೆಯಲಿದೆ. 135 ಸ್ಕ್ರೀನ್‌ಗಳಲ್ಲಿ ರಾಜ್ ಕಪೂರ್ ಅವರ ಚಿತ್ರಗಳು ಪ್ರದರ್ಶನವಾಗಲಿದ್ದು ಆಸಕ್ತರು ತಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ರಾಜ್ ಕಪೂರ್ ಅವರ ಐಕಾನಿಕ್ ಚಿತ್ರಗಳನ್ನು ನೋಡಬಹುದು. ಈ ಮೂಲಕ ಭಾರತೀಯ ಚಿತ್ರರಂಗದ ಶೋ ಮ್ಯಾನ್ ರಾಜ್ ಕಪೂರ್ ಅವರನ್ನು ನೀವು ಸ್ಮರಿಸಬಹುದು
X