bredcrumb

ಮದುವೆಯ ಸುಂದರವಾದ ಫೋಟೊಗಳನ್ನು ಹಂಚಿಕೊಂಡ ನಾಗಚೈತನ್ಯ ಪತ್ನಿ ಶೋಭಿತಾ..!

By Kannada Filmibeat Photos
| Published: Monday, December 9, 2024, 19:10 [IST]

ನಾಗಚೈತನ್ಯ ಜೊತೆ ಮದುವೆಯಾದ ಶೋಭಿತಾ ಮೊದಲಿಂದ ಆಧ್ಯಾತ್ಮಿಕ ಮನೋಭಾವದವರು. ಸಂಪ್ರದಾಯ-ಆಚರಣೆ-ಪದ್ದತಿಗಳಲ್ಲಿ ನಂಬಿಕೆಯನ್ನು ಹೊಂದಿರುವವರು. ತಮ್ಮ ಮದುವೆ ಸಾಂಪ್ರದಾಯಿಕವಾಗಿಯೇ ನಡೆಯಬೇಕು ಎನ್ನುವ ಕನಸನ್ನು ಮೊದಲಿಂದ ಕಂಡಿರುವ ಶೋಭಿತಾ ದೇವಾಲಯದ ಗಂಟೆ, ಹಿತ್ತಾಳೆ ದೀಪ, ಬಾಳೆ ಎಲೆ ಮತ್ತು ಹಸುವಿನ ಚಿತ್ರಣವನ್ನು ಹೊಂದಿರುವ ಸಾಂಪ್ರದಾಯಿಕ ಶೈಲಿಯ ನೀಲಿ ಬಣ್ಣದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದರು. ಎಲ್ಲ ತಾರೆಯರಂತೆ ಶೋಭಿತಾ ತಮ್ಮ ಮದುವೆಗೆ ಯಾವುದೇ ಡಿಸೈನರ್, ಸೈಲಿಸ್ಟ್‌ಗಳ ಮೊರೆ ಹೋಗದೇ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿರುವ ಜವಳಿ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಅಂಗಡಿಗಳಿಗೆ ತೆರಳಿ ಬಟ್ಟೆಗಳನ್ನು ಖರೀದಿ ಮಾಡಿದ್ದರು. ತಮ್ಮ ಸೀರೆ-ಮೇಕಪ್ ಮತ್ತು ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನ  ಸೆಳೆದರು. 

Sobhita Dhulipala Unveils Her Gorgeous Bridal Look Ahead of Wedding with Naga Chaitanya
1/5

ತಮ್ಮ ಎರಡನೇ ಮನದರಸಿ ಶೋಭಿತಾ ಜೊತೆ ಹೊಸ ಬದುಕಿಗೆ ನಾಗಚೈತನ್ಯ ಮುನ್ನುಡಿ ಬರೆದಿದ್ದಾರೆ. ಸಪ್ತಪದಿಯನ್ನು ತುಳಿದಿದ್ದಾರೆ. ಆದರೆ ಸಾಮಾನ್ಯ ಸಿನಿಮಾ ಪ್ರೇಮಿಗಳಿಗೆ ಇವರಿಬ್ಬರ ಅಭಿಮಾನಿಗಳಿಗೆ ಮದುವೆಯ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ.ಮದುವೆಯ ಫೋಟೊವನ್ನು ಇಬ್ಬರು ಹಂಚಿಕೊಂಡಿರಲಿಲ್ಲ. ಆದರೆ ಈಗ ಮದುವೆಯಾದ ಐದು ದಿನದ ನಂತರ ಶೋಭಿತಾ ತಮ್ಮ ಮದುವೆಯ ಭಾವ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅನೇಕರ ಕಣ್ಮನ ಸೆಳೆದಿದ್ದಾರೆ. ಮದುವೆಯಲ್ಲಿ ದೇಸಿ ಸಂಪ್ರದಾಯ ದೇಸಿ ಉಡುಗೆಗಳನ್ನು ಧರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಹುಬ್ಬೇರಿಸಿದ್ದಾರೆ.
Sobhita Dhulipala Unveils Her Gorgeous Bridal Look Ahead of Wedding with Naga Chaitanya
2/5

ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ಎಲ್ಲರೂ ಅದರಲ್ಲಿಯೂ ಚಿತ್ರರಂಗದ ತಾರೆಯರು ವ್ಯೆಯಕ್ತಿಕ ಫ್ಯಾಷನ್ ಡಿಸೈನರ್‌ಗಳಿಗೆ ಜವಾಬ್ದಾರಿಯನ್ನು ವಹಿಸುತ್ತಾರೆ. ತಾವು ಮದುವೆ ದಿನದಂದು ಹೀಗೆ ಕಾಣಿಸಬೇಕೆಂದು ಷರತ್ತನ್ನು ಹಾಕಿ ಅವರು ಕೇಳಿದಷ್ಟು ದುಡ್ಡನ್ನು ನೀಡಿ ಸುಮ್ಮನಾಗುತ್ತಾರೆ. ಆದರೆ ಇದಕ್ಕೆ ಶೋಭಿತಾ ತದ್ವಿರುದ್ದ. ಮದುವೆ ನಿಶ್ಚಯವಾದ ದಿನದಿಂದನೇ ತಮ್ಮ ಉಡುಗೆ ತೊಡುಗೆ ಸಂಪ್ರದಾಯ ಆಚಾರ ವಿಚಾರ ಕಡೆ ತಾವೇ ಖುದ್ದು ಗಮನ ಹರಿಸಿದ ಶೋಭಿತಾ ತಮ್ಮ ಮದುವೆಯಲ್ಲಿ ಗೋಲ್ಡನ್ ಕಾಂಜೀವರಂ ಸೀರೆಯಲ್ಲಿ
Sobhita Dhulipala Unveils Her Gorgeous Bridal Look Ahead of Wedding with Naga Chaitanya
3/5

ನಾಗಚೈತನ್ಯ ಜೊತೆ ಮದುವೆಯಾಗುತ್ತಿರುವ ಶೋಭಿತಾ ಮೊದಲಿಂದ ಆಧ್ಯಾತ್ಮಿಕ ಮನೋಭಾವದವರು. ಸಂಪ್ರದಾಯ-ಆಚರಣೆ-ಪದ್ದತಿಗಳಲ್ಲಿ ನಂಬಿಕೆಯನ್ನು ಹೊಂದಿರುವವರು. ತಮ್ಮ ಮದುವೆ ಸಾಂಪ್ರದಾಯಿಕವಾಗಿಯೇ ನಡೆಯಬೇಕು ಎನ್ನುವ ಕನಸನ್ನು ಮೊದಲಿಂದ ಕಂಡಿದ್ದ ಶೋಭಿತಾ ತಮ್ಮ ಮದುವೆಯಲ್ಲಿ ಕಾಂಚೀವರಂ ಸೀರೆಯನ್ನು ಧರಿಸಿದ್ದರು. ಸೀರೆಗೆ ಹೋಲುವಂತೆ ನೆಕ್ಲೇಸ್ ಮತ್ತು ಬಳೆ ಧರಿಸಿದ್ದರು. ಮೂಗ್ಬಟ್ಟು ಕೂಡ ಹಾಕಿಕೊಂಡಿದ್ದರು.
Sobhita Dhulipala Unveils Her Gorgeous Bridal Look Ahead of Wedding with Naga Chaitanya
4/5

ಅಂದ್ಹಾಗೇ ಶೋಭಿತಾ ತಮ್ಮ ಮದುವೆಯಲ್ಲಿ ತೆಲುಗು ಸಂಪ್ರದಾಯದಂತೆ ಎಲ್ಲ ಧಾರ್ಮಿಕ ವಿಧಿಗಳನ್ನು ಅನುಸರಿಸಿದರು, ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮದುವೆಯನ್ನು ಮಾಡಿಕೊಂಡರು. ಸಾಂಪ್ರದಾಯಿಕ ಶ್ರೀಮಂತಿಕೆ ಈ ಮದುವೆಯಲ್ಲಿ ಎದ್ದು ಕಾಣಿಸುತ್ತಿತ್ತು. ಅಭಿಮಾನಿಗಳ ಹೃದಯವನ್ನು ಕೂಡ ಈ ಮದುವೆಯ ಚಿತ್ರಣ ಗೆದ್ದಿತ್ತು
Sobhita Dhulipala Unveils Her Gorgeous Bridal Look Ahead of Wedding with Naga Chaitanya
5/5

ಇನ್ನುಳಿದಂತೆ ಡಿಸೆಂಬರ್ 04ರಂದು ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಇಬ್ಬರ ಮದುವೆ ನೆರವೇರಿದ್ದು,ಅನೇಕ ಗಣ್ಯರು ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ನವ ಜೋಡಿಗೆ ಶುಭ ಕೋರಿದರು.
X