bredcrumb

ಲೈವ್ ವೇಳೆ ನಟಿ ಸಮಂತಾ ಗರಂ

By Narayan
| Published: Tuesday, November 5, 2024, 21:35 [IST]

ಸಮಂತಾ ನಟನೆಯ 'ಸಿಟಾಡೆಲ್' ವೆಬ್ ಸೀರಿಸ್‌ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅದರ ಪ್ರಮೋಷನ್ ಕೆಲಸಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾ ಲೈವ್ ಬಂದು ಸ್ಯಾಮ್ ಮಾತನಾಡಿದ್ದಾರೆ. ಈ ವೇಳೆ ನೆಟ್ಟಿಗರ ಅದೊಂದು ಪ್ರಶ್ನೆಗೆ ಬೇಸರಗೊಂಡಿದ್ದಾರೆ. 

citadel actress Samantha opens up on gaining weight
1/7

ಡಿವೋರ್ಸ್, ಮಯೋಸೈಟಿಸ್ ಸಮಸ್ಯೆ ಅಂತೆಲ್ಲಾ ಬಹಳ ಕುಗ್ಗಿದ್ದ ನಟಿ ಸಮಂತಾ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಸ್ಯಾಮ್ ನಟನೆಯ 'ಸಿಟಾಡೆಲ್' ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರ್ತಿದೆ. ಇದೇ ವೇಳೆ ಅಭಿಮಾನಿಗಳ ಜೊತೆ ಚಿಟ್‌ಚಾಟ್ ನಡೆಸಿದ್ದಾರೆ.
citadel actress Samantha opens up on gaining weight
2/7

ಇನ್‌ಸ್ಟಾಗ್ರಾಮ್ ಲೈವ್ ಬಂದಿದ್ದ ಸ್ಯಾಮ್ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಕೆಲವರು ಮೇಡಂ ಯಾಕೆ ಸಣ್ಣ ಆಗಿಬಿಟ್ರಿ? ನಿಮ್ಮನ್ನು ನೋಡೋಕೆ ಆಗ್ತಿಲ್ಲ. ಕೊಂಚ ದಪ್ಪ ಆಗಿ ಎಂದಿದ್ದಾರೆ. ಇಂತಹ ಪ್ರಶ್ನೆಗಳಿಗೆ ಸ್ಯಾಮ್ ಬೇರಸ ವ್ಯಕ್ತಪಡಿಸಿದ್ದಾರೆ.
citadel actress Samantha opens up on gaining weight
3/7

ಪದೇ ಪದೆ ನನ್ನ ದೇಹದ ತೂಕದ ಬಗ್ಗೆ ಪ್ರಶ್ನೆ ಕೇಳ್ತಿದ್ದೀರಾ? ನನ್ನ ತೂಕದ ಬಗ್ಗೆ ನನಗೆ ಗೊತ್ತು. ಈಗ ನಾನು ಬಹಳ ಸ್ಟ್ರಿಕ್ಟ್ ಡಯೆಟ್ ಅಲ್ಲಿ ಇದ್ದೀನಿ. ಅದಕ್ಕೆ ತನ್ನ ತೂಕ ಕಮ್ಮಿ ಆಗಿದೆ ಎಂದಿದ್ದಾರೆ. ಮಯೋಸೈಟಿಸ್ ವಿರುದ್ಧ ಹೋರಾಡಲು ಸ್ಯಾಮ್ ಡಯೆಟ್ ಹಾಗೂ ವರ್ಕ್‌ಔಟ್ ಮೊರೆ ಹೋಗಿದ್ದರು.
citadel actress Samantha opens up on gaining weight
4/7

ನನ್ನ ಆರೋಗ್ಯ ಕಾರಣದಿಂದ ನಾನು ಹೀಗೆ ಇರಬೇಕು. ಮತ್ತೊಬ್ಬರನ್ನು ಜಡ್ಜ್ ಮಾಡುವುದು ಬಿಡಿ. ಅವರನ್ನು ಕಡ ಬದುಕಲು ಬಿಡಿ. ನಾವು 2024ರಲ್ಲಿ ಇದ್ದೀವಿ ಎಂದು ಕೊಂಚ ಖಾರವಾಗಿಯೇ ಸಮಂತಾ ಹೇಳಿರುವುದು ವೈರಲ್ ಆಗುತ್ತಿದೆ.
citadel actress Samantha opens up on gaining weight
5/7

ಸದ್ಯ ತಮ್ಮ ದೇಹದ ತೂಕದ ಬಗ್ಗೆ ಸಮಂತಾ ಆಡಿರುವ ಮಾತುಗಳು ವೈರಲ್ ಆಗುತ್ತಿದೆ. ಆಕೆ ಇನ್ನು ಮಯೋಸೈಟಿಸ್ ಸಮಸ್ಯೆಯಿಂದ ಚೇತರಿಸಿಕೊಂಡಿಲ್ಲ. ಅದರ ವಿರುದ್ಧ ಹೋರಾಟ ಮುಂದುವರೆಸಿದ್ದಾರೆ. ಅದಕ್ಕಾಗಿಯೇ ಡಯೆಟ್ ಪಾಲಿಸುತ್ತಿದ್ದಾರೆ ಎಂದು ಚರ್ಚೆ ನಡೀತಿದೆ.
citadel actress Samantha opens up on gaining weight
6/7

ರಾಜ್‌- ಡಿಕೆ ನಿರ್ದೇಶನದ 'ಸಿಟಾಡೆಲ್' ವೆಬ್‌ ಸೀರಿಸ್ ಭಾರೀ ನಿರೀಕ್ಷೆ ಮೂಡಿಸಿದೆ. ನವೆಂಬರ್ 7ಕ್ಕೆ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆ ಆಗ್ತಿದೆ. ಈ ಸ್ಪೈ ಆಕ್ಷನ್ ಸೀರಿಸ್‌ನಲ್ಲಿ ಸ್ಯಾಮ್ ಭರ್ಜರಿ ಆಕ್ಷನ್ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ.
citadel actress Samantha opens up on gaining weight
7/7

'ಸಿಟಾಡೆಲ್' ಸೀರಿಸ್‌ನಲ್ಲಿ ವರುಣ್ ಧವನ್ ಜೊತೆ ಸ್ಯಾಮ್ ಕೈ ಜೋಡಿಸಿದ್ದಾರೆ. ಏಜೆಂಡ ಬನ್ನಿ ಆಗಿ ವರುಣ್, ಏಜೆಂಟ್ ಹನಿ ಆಗಿ ಸ್ಯಾಮ್ ಮಿಂಚಿದ್ದಾರೆ. ಸರ್ಬಿಯಾ ಹಾಗೂ ಭಾರತದಲ್ಲಿ ಚಿತ್ರೀಕರಣ ನಡೆದಿದೆ. ಈ ವೆಬ್ ಸೀರಿಸ್ ರಿಲೀಸ್ ಬಳಿಕ ಸಮಂತಾ ಹೊಸ ಸಿನಿಮಾ ಒಪ್ಪಿಕೊಳ್ಳುವ ನಿರೀಕ್ಷೆಯಿದೆ.
X