bredcrumb

ಸಾಯಿ ಪಲ್ಲವಿಗೆ ಇದಕ್ಕಿಂತ ಪ್ರಶಸ್ತಿ ಬೇಕಾ?

By Narayana M
| Published: Monday, November 11, 2024, 22:24 [IST]

ಸಾಯಿ ಪಲ್ಲವಿ ನಟನೆಯ ತಮಿಳಿನ 'ಅಮರನ್' ಸಿನಿಮಾ ಬಿಡುಗಡೆಯಾಗಿದೆ. ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಸಾಯಿ ಪಲ್ಲವಿ ನಟನೆಗ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗ್ತಿದೆ. ಈ ಚಿತ್ರದ ಆಡಿಯೋ ಲಾಂಚ್ ವೇಳೆ ನಿರ್ದೇಶಕ ಮಣಿರತ್ನಂ ಹೇಳಿದ ಮಾತು ವೈರಲ್ ಆಗುತ್ತಿದೆ. 

director Mani Ratnam stated that he is a big fan of actress Sai pallavi
1/7

ತಮಿಳು ನಟಿ ಸಾಯಿ ಪಲ್ಲವಿ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ. 'ರಾಮಾಯಣ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ತನ್ನ ಸ್ನಿಗ್ಧ ಸೌಂದರ್ಯ ಹಾಗೂ ನಟನೆಯಿಂದ ಚೆಲುವೆ ಸಿನಿರಸಿಕರ ಮನಗೆದ್ದಿದ್ದಾರೆ.
director Mani Ratnam stated that he is a big fan of actress Sai pallavi
2/7

ಮುಕುಂದ್ ವರದರಾಜನ್ ಬಯೋಪಿಕ್ 'ಅಮರನ್' ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ವರದರಾಜನ್ ಆಗಿ ಶಿವಕಾರ್ತಿಕೇಯನ್ ನಟಿಸಿದ್ದು ಅವರ ಮಡದಿ ಇಂಧು ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
director Mani Ratnam stated that he is a big fan of actress Sai pallavi
3/7

ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನದ 'ಅಮರನ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ 200 ಕೋಟಿ ರೂ. ಗಳಿಕೆ ಕಂಡಿದೆ. ಸಾಯಿ ಪಲ್ಲವಿ ನಟನೆ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
director Mani Ratnam stated that he is a big fan of actress Sai pallavi
4/7

ಯಾವುದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡಿ ಸಾಯಿ ಪಲ್ಲವಿ ನಟಿಸುತ್ತಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಆಕೆ ಪಾತ್ರವೇ ತಾನಾಗಿ ಬಿಡುತ್ತಾರೆ. ಸಾಯಿ ಪಲ್ಲವಿ ನಟನೆಯನ್ನು ಇತ್ತೀಚೆಗೆ ಮಣಿರತ್ನಂ ಕೊಂಡಾಡಿದ್ದರು.
director Mani Ratnam stated that he is a big fan of actress Sai pallavi
5/7

'ಅಮರನ್' ಚಿತ್ರದ ಆಡಿಯೋ ಲಾಂಚ್ ವೇದಿಕೆಗೆ ಖ್ಯಾತ ನಿರ್ದೇಶಕ ಮಣಿರತ್ನಂ ಬಂದಿದ್ದರು. ವೇದಿಕೆಯಲ್ಲಿ ಮಾತನಾಡುತ್ತಾ ನಾನು ಸಾಯಿ ಪಲ್ಲವಿ ನಟನೆಗೆ ದೊಡ್ಡ ಅಭಿಮಾನಿ ಎಂದಿದ್ದರು. ಈ ಮಾತು ಕೇಳಿ ವೇದಿಕೆ ಮುಂಭಾಗದಲ್ಲಿ ಸಾಯಿ ಪಲ್ಲವಿ ಅಚ್ಚರಿಗೊಂಡಿದ್ದರು.
director Mani Ratnam stated that he is a big fan of actress Sai pallavi
6/7

ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಮಣಿರತ್ನಂ. ಖ್ಯಾತ ನಟ- ನಟಿಯರೆಲ್ಲಾ ಅವರ ನಿರ್ದೇಶನದಲ್ಲಿ ನಟಿಸುವುದು ನಮ್ಮ ಪುಣ್ಯ ಎಂದು ಭಾವಿಸುತ್ತಾರೆ. ಅಂತಹ ನಿರ್ದೇಶಕರೇ ಸಾಯಿ ಪಲ್ಲವಿ ನಟನೆ ಮೆಚ್ಚಿದ್ದಾರೆ. ಆಕೆ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ ಅಂದ್ರೆ ತಮಾಷೆಯ ಮಾತಲ್ಲ.
director Mani Ratnam stated that he is a big fan of actress Sai pallavi
7/7

ಮುಂದೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಹಾಗೂ ರಾವಣನಾಗಿ ಯಶ್ ಈ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ವಿಶೇಷ.
X