bredcrumb

ತಮ್ಮ ಆಪ್ತ ಸ್ನೇಹಿತೆ ಮೌನಿ ರಾಯ್ ಜೊತೆ ತುಂಡೈಕ್ಳ ನಶೆ ಏರಿಸಿದ ದಿಶಾ ಪಠಾಣಿ...!

By Syed Ameenuddin
| Updated: Friday, December 20, 2024, 07:00 [IST]

ಹೆಸರು, ಕೀರ್ತಿಯನ್ನು ಗಳಿಸಿದ ಯಾರೇ ಆದರೂ ಆಗಾಗ ರಿಫ್ರೆಶ್ ಆಗುತ್ತಿರಬೇಕು. ಬಾಲಿವುಡ್‌ನಲ್ಲಿ ಅನೇಕರು ಅದರಲ್ಲಿಯೂ ನಾಯಕಿಯರು ಈ ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುತ್ತಿರುತ್ತಾರೆ. ಚೂರು ಬಿಡುವು ಸಿಕ್ಕರೂ ಸಾಕು ತಮ್ಮ ಇಷ್ಟದ ಗೆಳೆಯ-ಗೆಳತಿಯರನ್ನು  ಕರೆದುಕೊಂಡು ವಿಮಾವನ್ನೇರುತ್ತಾರೆ. ಅಲ್ಲಿನ ರಮಣೀಯ ಸ್ಥಳಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಇನ್ನೂ ಬೀಚ್ ಕಣ್ಣಿಗೆ ಬಿದ್ದರಂತೂ ಮುಗೀತು. ಬಿಕಿನಿಯನ್ನು ಧರಿಸಿ ಬೀಚ್‌ನಲ್ಲಿ ಹೊರಳಾಡುತ್ತಾರೆ. ಬಗೆ ಬಗೆಯ ಭಾವ ಚಿತ್ರಗಳನ್ನು ಕ್ಲಿಕಿಸಿಕೊಂಡು ಒಂದು ಸೆಕೆಂಡ್ ಕೂಡ ವ್ಯರ್ಥ ಮಾಡದೇ ಅಲ್ಲಿಂದನೇ ತಮ್ಮ ಅಭಿಮಾನಿಗಳಿಗಾಗಿ ಫೋಟೊ ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ದೇಹಸಿರಿಯನ್ನು ಪ್ರದರ್ಶಿಸುತ್ತಾರೆ. ಪಡ್ಡೆ ಹುಡುಗರ ನಿದ್ದೆಗೆ ಕೊಳ್ಳಿಯನ್ನು ಇಡುತ್ತಾರೆ. ಇದಕ್ಕೆ ದಿಶಾ ಪಠಾಣಿ ಮತ್ತು ಮೌನಿ ರಾಯ್ ಸದ್ಯದ ಉದಾಹರಣೆ. 

Disha Patani and Mouni Roy's Beach Vacation Pics
1/6

ಬಾಲಿವುಡ್‌ನ ಬೆಡಗಿಯರಾದ ದಿಶಾ ಪಠಾಣಿ ಮತ್ತು ಮೌನಿ ರಾಯ್ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಬಿಕಿನಿಯಲ್ಲಿ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಈ ಮೂಲಕ ಇಂಟರ್‌ನೆಟ್‌ಗೆ ಈ ಇಬ್ಬರು ಚೆಲುವೆಯರು ಕಿಚ್ಚು ಹಚ್ಚಿದ್ದಾರೆ. ಪಡ್ಡೆ ಹುಡುಗರ ಕಣ್ಣರಳಿಸಿದ್ದಾರೆ.
Disha Patani and Mouni Roy's Beach Vacation Pics
2/6

ಸಿಂಪಲ್ ಮೇಕಪ್‌ನಲ್ಲಿ ಮಿರ ಮಿರ ಮಿಂಚ್ತಿರುವ ಈ ಇಬ್ಬರು ಸುಂದರಿಯರನ್ನು ಕಣ್ತುಂಬಿಕೊಂಡ ಇವರ ಅಭಿಮಾನಿಗಳು ಸದ್ಯ ತಮ್ಮ ತಮ್ಮ ಮನದ ಮಾತುಗಳನ್ನು ಸೋಶಿಯಲ್ ಮೀಡಿಯಾದ ಸಹಾಯದಿಂದ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ.
Disha Patani and Mouni Roy's Beach Vacation Pics
3/6

ಸಮುದ್ರದ ತೀರದಲ್ಲಿ ನಗುತ್ತಾ ಮೋಜು ಮಸ್ತಿಯನ್ನು ಮಾಡಿರುವ ಇಬ್ಬರು ನೀರಿನಲ್ಲಿ ಮಿಂದೆದ್ದಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಸವಿದು ತಮ್ಮ ಅಭಿಮಾನಿಗಳ ನಶೆಯನ್ನು ದಿಶಾ ಪಠಾಣಿ ಏರಿಸಿದ್ದಾರೆ.
Disha Patani and Mouni Roy's Beach Vacation Pics
4/6

ಇನ್ನು 2023ರಲ್ಲಿ ನಡೆದ ದಿ ಎಂಟರ್‌ಟೈನರ್ಸ್ ಟೂರ್ ಸಮಯದಲ್ಲಿ ದಿಶಾ ಪಠಾಣಿ ಮತ್ತು ಮೌನಿ ರಾಯ್ ನಡುವೆ ಸ್ನೇಹ ಅರಳಿತ್ತು. ಅಲ್ಲಿಂದ ಗಳಸ್ಯ ಕಂಠಸ್ಯ ಸ್ನೇಹಿತರಾದ ಇಬ್ಬರು ಅನೇಕ ಕಡೆ ಜೊತೆಯಾಗಿಯೇ ಪ್ರವಾಸಕ್ಕೆ ತೆರಳಿದ್ಧಾರೆ. ಸಭೆ ಸಮಾರಂಭಗಳಲ್ಲಿ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ಧಾರೆ.
Disha Patani and Mouni Roy's Beach Vacation Pics
5/6

ಇನ್ನುಳಿದಂತೆ ಕಂಗುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದಿಶಾ ಪಠಾಣಿ ಸದ್ಯ ಅಕ್ಷಯ್ ಕುಮಾರ್ ನಾಯಕತ್ವದಲ್ಲಿ ಸಿದ್ಧವಾಗುತ್ತಿರುವ ವೆಲ್ ಕಂ ದಿ ಜಂಗಲ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಹೊರತು ಪಡಿಸಿದರೆ ದಿಶಾ ಕೈಯಲ್ಲಿ ಸದ್ಯಕ್ಕೆ ಹೇಳಿಕೊಳ್ಳುವ ಅವಕಾಶಗಳಿಲ್ಲ.
Disha Patani and Mouni Roy's Beach Vacation Pics
6/6

ಇನ್ನು 2022ರಲ್ಲಿ ಸೂರಜ್ ನಂಬಿಯಾರ್ ಜೊತೆ ಮದುವೆಯಾದ ಮೌನಿ ರಾಯ್ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಅಲ್ಲೊಂದು-ಇಲ್ಲೊಂದು ಹಾಡುಗಳಿಗೆ ಹೆಜ್ಜೆಯನ್ನು ಹಾಕುತ್ತಿದ್ದಾರೆ.
X