bredcrumb

Diwali 2024; ಬೆಳಕಿನ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಸುಂದರಿಯರ ಸುಂದರ ಫೋಟೊಗಳು ಇಲ್ಲಿವೆ

By Muralidhar S
| Published: Sunday, November 3, 2024, 22:49 [IST]

ಬಾಲಿವುಡ್‌ನಲ್ಲಿ ಬೆಳಕಿನ ಹಬ್ಬವನ್ನು ಜೋರಾಗಿ ಆಚರಣೆ ಮಾಡುತ್ತಾರೆ. ದೀಪಾವಳಿ ಹಬ್ಬ ನಟಿಯರಿಗಂತೂ ಸಿಕ್ಕಾಪಟ್ಟೆ ಸ್ಪೆಷಲ್. ತಮ್ಮ ಆಚರಣೆ ಯಾವುದೇ ಇದ್ದರೂ ಬೆಳಕಿನ ಹಬ್ಬವನ್ನು ಸಂಭ್ರಮಿಸಿದ್ದಾರೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ದೀಪಾವಳಿ ಹಬ್ಬವನ್ನು ಜೋರಾಗಿ ಆಚರಿಸಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಕತ್ರಿನಾ ಕೈಫ್ ಮಿಂಚಿದ್ದರೆ, ಕಪ್ಪು ಬಣ್ಣದ ಕಾಸ್ಟ್ಯೂಮ್‌ನಲ್ಲಿ ವಿಕ್ಕಿ ಕೌಶಲ್ ಮಿಂಚಿದ್ದಾರೆ. 

Bollywood Actress Diwali Celebration
1/6

2/6

ಬಾಲಿವುಡ್‌ನ ಮತ್ತೊಂದು ಸ್ಟಾರ್ ಜೋಡಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ. ಈ ಜೋಡಿ ಒಟ್ಟಿಗೆ ದೀಪಾವಳಿ ಹಬ್ಬವನ್ನು ಖುಷಿ ಖುಷಿಯಾಗಿ ಆಚರಣೆ ಮಾಡಿದೆ. ಹಳದಿ ಬಣ್ಣದ ಡಿಸೈನರ್ ಕಾಸ್ಟ್ಯೂಮ್‌ನಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡರೆ, ಕಪ್ಪು ಬಣ್ಣದ ಧಿರಿಸಿನಲ್ಲಿ ಸಿದ್ಧಾರ್ಥ್ ಮಿಂಚಿದ್ದಾರೆ.
Bollywood Actress Diwali Celebration
3/6

ಈ ವರ್ಷ ಮೆಗಾ ಸಕ್ಸಸ್‌ನ ಖುಷಿಯಲ್ಲಿ ತೇಲಾಗುತ್ತಿರುವ ನಟಿ ಶ್ರದ್ಧಾ ಕಪೂರ್. 'ಸ್ತ್ರೀ 2' ಸಿನಿಮಾ ಬಾಲಿವುಡ್‌ನಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಇದೇ ಖುಷಿಯಲ್ಲಿ ಶ್ರದ್ಧಾ ಕಪೂರ್ ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ. ತಂದೆ ಶಕ್ತಿ ಕಪೂರ್ ಹಾಗೂ ಕುಟುಂಬ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
Bollywood Actress Diwali Celebration
4/6

ಬಾಲಿವುಡ್‌ನ ಮತ್ತೊಬ್ಬ ನಟಿ ಕೃತಿ ಸನನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕೃತಿ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಇದೇ ಖುಷಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಕುಟುಂಬದೊಂದಿಗೆ ಫುಲ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Bollywood Actress Diwali Celebration
5/6

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಜೋಡಿ ಕೂಡ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದೆ. ಪುತ್ರಿಯೊಂದಿಗೆ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಹಬ್ಬ ಆಚರಿಸಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Bollywood Actress Diwali Celebration
6/6

ದೀಪಾವಳಿ ಹಬ್ಬದಲ್ಲಿ ಆಲಿಯಾ ಭಟ್ ಹಳದಿ ಬಣ್ಣದ ಡಿಸೈನರ್ ಸೀರೆಯುಟ್ಟು ಮಿಂಚಿದ್ದಾರೆ. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ನಟಿ ಆಲಿಯಾ ಭಟ್ ಮಿಂಚಿದ್ದಾರೆ. ಈ ಫೋಟೋಗಳಿಗೆ ಆಲಿಯಾ ಭಟ್ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
X