bredcrumb

ತೆಲುಗು ಮಂದಿಯ ಹೊಸ ಕ್ರಶ್ ಯಾರು ಗೊತ್ತೇ? ಈ ನಟಿಗೂ ಕರ್ನಾಟಕಕ್ಕೂ ಒಂದು ನಂಟಿದೆ

By Muralidhar S
| Published: Thursday, November 28, 2024, 23:33 [IST]

ಪ್ರಿಯಾಂಕಾ ಅರುಳ್ ಮೋಹನ್ ಕನ್ನಡ ಚಿತ್ರರಂಗದಿಂದಲೇ ಸಿನಿಮಾ ಜರ್ನಿ ಆರಂಭಿಸಿದ್ದರು. 2019ರಲ್ಲಿ ತೆರೆಕಂಡ ಸಿನಿಮಾ 'ಒಂದು ಕಥೆ ಹೇಳ್ಲಾ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ಒಂದೇ ಸಿನಿಮಾದಲ್ಲಿ ನಟಿಸಿದ್ದು ಈಗ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

Priyanka Arul Mohan Photos
1/6

ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ನಟಿಸಿದ 'ಸರಿಪೋದ ಶನಿವಾರಂ' ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ನಾನಿಗೆ ನಾಯಕಿಯಾಗಿ ನಟಿಸಿದ ಈ ಬ್ಯೂಟಿ ತೆಲುಗು ಮಂದಿಯ ಕ್ರಶ್ ಆಗಿಬಿಟ್ಟಿದ್ದಾರೆ. ಅವರ ಕ್ಯೂಟ್‌ನೆಸ್‌ಗೆ ಕಳೆದು ಹೋಗಿದ್ದಾರೆ. ಅಂದ್ಹಾಗೆ ಈ ನಟಿಯ ಹೆಸರು ಪ್ರಿಯಾಂಕಾ ಅರುಳ್ ಮೋಹನ್. ಈ ನಟಿಗೂ ಕರ್ನಾಟಕಕ್ಕೂ ಒಂದು ನಂಟು ಇದೆ.
Priyanka Arul Mohan Photos
2/6

ಪ್ರಿಯಾಂಕಾ ಅರುಳ್ ಮೋಹನ್ ಕನ್ನಡ ಚಿತ್ರರಂಗದಿಂದಲೇ ಸಿನಿಮಾ ಜರ್ನಿ ಆರಂಭಿಸಿದ್ದರು. 2019ರಲ್ಲಿ ತೆರೆಕಂಡ ಸಿನಿಮಾ 'ಒಂದು ಕಥೆ ಹೇಳ್ಲಾ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ಒಂದೇ ಸಿನಿಮಾದಲ್ಲಿ ನಟಿಸಿದ್ದು ಈಗ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Priyanka Arul Mohan Photos
3/6

ಪ್ರಿಯಾಂಕಾ ಅರುಳ್ ಮೋಹನ್ ಕನ್ನಡದ ನಂಟು ಇಲ್ಲಿಗೆ ಮುಗಿಯಲಿಲ್ಲ. ಈ ನಟಿ ಹುಟ್ಟಿದ್ದು ಹಾಗೂ ಶಿಕ್ಷಣ ಮುಗಿಸಿದ್ದು ಕರ್ನಾಟಕದಲ್ಲಿಯೇ. ಪ್ರಿಯಾಂಕಾ ಮೋಹನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯಲ್ಲಿರುವ ಆಳ್ವಾಸ್ ಸ್ಕೂಲ್‌ನಲ್ಲಿ ಮುಗಿಸಿದ್ದಾರೆ. ಹಾಗೇ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಬಯೋಲಾಜಿಕಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ.
Priyanka Arul Mohan Photos
4/6

ಎಂಜಿನಿಯರಿಂಗ್ ಶಿಕ್ಷಣ ಮುಗಿಯುತ್ತಿದ್ದಂತೆ ಪ್ರಿಯಾಂಕಾ ಮೋಹನ್ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. 2019ರಲ್ಲಿ ತೆರೆಕಂಡ 'ಒಂದು ಕಥೆ ಹೇಳ್ಲಾ' ಇವರ ಚೊಚ್ಚಲ ಸಿನಿಮಾ. ಬಳಿಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಅದೇ ವರ್ಷ 'ನಾನೀಸ್ ಗ್ಯಾಂಗ್‌ ಲೀಡರ್' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.
Priyanka Arul Mohan Photos
5/6

ತೆಲುಗಿನ ಎರಡು ಸಿನಿಮಾದಲ್ಲಿ ನಟಿಸಿದ ಬಳಿಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಶಿವಕಾರ್ತಿಕೇಯನ್ ನಟಿಸಿದ 'ಡಾಕ್ಟರ್' ಇವರು ನಟಿಸಿದ ಮೊದಲ ತಮಿಳು ಸಿನಿಮಾ. ಇಲ್ಲಿಂದ ಬ್ಯಾಕ್ ಟು ಬ್ಯಾಕ್ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ತೆಲುಗು ಮಂದಿಯ ಹೃದಯ ಕದ್ದಿದ್ದಾರೆ.
Priyanka Arul Mohan Photos
6/6

'ಸರಿಪೋದಾ ಶನಿವಾರಂ' ಸಿನಿಮಾದ ಗೆಲುವಿನ ಬಳಿಕ ಪ್ರಿಯಾಂಕಾ ಮೋಹನ್‌ ಕೈಯಲ್ಲಿ ಮತ್ತೊಂದು ಸಿನಿಮಾವಿದೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನಟಿಸುತ್ತಿರುವ 'ಓಜಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸಾಹೋ ಸಿನಿಮಾ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ.
X