bredcrumb

ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್; ಫ್ಯಾಮಿಲಿ ಭೇಟಿ ಚಿತ್ರಗಳು

By Kannada Filmibeat Photos
| Published: Sunday, December 15, 2024, 11:48 [IST]

 ಕ್ರಿಮಿನಲ್ ಪ್ರಕರಣದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಬಂಧನವಾಗಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಜಾಮೀನು ಸಿಕ್ಕರೂ ಜೈಲಿನಿಂದ ಬಿಡುಗಡೆಗೆ ಬೇಕಾರ ಪ್ರಕ್ರಿಯೆ ತಡವಾಯಿತು. ಹಾಗಾಗಿ ಒಂದು ರಾತ್ರಿ ಚಂಚಲಗೂಡ್ ಜೈಲಿನಲ್ಲಿ 'ಪುಷ್ಪ-2' ನಟ ಇರುವಂತಾಯಿತು. ಇಂದು ಬೆಳಗ್ಗೆ ಅಲ್ಲು ಅರ್ಜುನ್ ಜೈಲಿನಿಂದ ಹೊರ ಬಂದಿದ್ದಾರೆ. ಬಳಿಕ ಮನೆಗೆ ಮರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಭಾವುಕರಾಗಿ ಆಪ್ತರನ್ನು ತಬ್ಬಿಕೊಂಡಿದ್ದಾರೆ. ಪತ್ನಿ ಸ್ನೇಹಾ ಸೇರಿದಂತೆ ಕುಟುಂಬ ಸದಸ್ಯರು ಭಾವೋದ್ವೇಗದಿಂದ ಕಣ್ಣೀರಾಗಿದ್ದಾರೆ. 

Allu Arjun is back home, reunited with his loved ones, see pics
1/6

ತೆಲಂಗಾಣ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ನಟ ಅಲ್ಲು ಅರ್ಜುನ್ ಬೆಳಗ್ಗೆ ಜೈಲಿನಿಂದ ಬಿಡುಗಡೆ ಆದರು. ಡಿಸೆಂಬರ್ 4ರಂದು ನಡೆದ 'ಪುಷ್ಪ-2' ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ನಡೆದಿತ್ತು. ಈ ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.
Allu Arjun is back home, reunited with his loved ones, see pics
2/6

ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದ ಬಳಿಕ ತಂದೆ ಅಲ್ಲು ಅರವಿಂದ್ ಹಾಗೂ ಮಾವ ಚಂಚರ್ಲ ಚಂದ್ರಶೇಖರ್ ರೆಡ್ಡಿ ಬರಮಾಡಿಕೊಂಡಿದ್ದರು.
Allu Arjun is back home, reunited with his loved ones, see pics
3/6

ಇನ್ನು ಮನೆಗೆ ಬಂದ ಕೂಡಲೇ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಹಾಗೂ ಮಕ್ಕಳನ್ನು ನೋಡಿ ತಬ್ಬಿಕೊಂಡರು. ಅದಕ್ಕೂ ಮುನ್ನ ಸಹೋದರ ಅಲ್ಲು ಶಿರೀಶ್ ಅಣ್ಣನನ್ನು ಅಪ್ಪಿ ಸಂತೈಸಿದರು.
Allu Arjun is back home, reunited with his loved ones, see pics
4/6

ಮನೆಗೆ ಬಂದ ಬಳಿಕ ನಟ ಅಲ್ಲು ಅರ್ಜುನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಡಿಸೆಂಬರ್ 4ರಂದು ನಡೆದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಜೊತೆ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ.
Allu Arjun is back home, reunited with his loved ones, see pics
5/6

ಎಲ್ಲಾ ಜಾಮೀನು ಷರತ್ತುಗಳನ್ನು ಪೂರೈಸಿದ ಬಳಿಕ ನಟ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆ ಆಗಿ ಹೊರಬಂದರು. ನಿನ್ನೆ ರಾತ್ರಿಯೇ ಷರತ್ತುಗಳನ್ನು ಪೂರೈಸಿದರೂ ಕೂಡ ತಡವಾಗಿದ್ದರಿಂದ ಜೈಲು ನಿಯಮದಂತೆ ರಾತ್ರಿ ಜೈಲಿನಲ್ಲಿ ಉಳಿಯಬೇಕಾಯಿತು.
Allu Arjun is back home, reunited with his loved ones, see pics
6/6

ಅಂದು ಸಂಧ್ಯಾ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಲು ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ರೇವತಿ ಎಂಬ ಮಹಿಳೆ ಮಕ್ಕಳ ಜೊತೆ ಸಿನಿಮಾ ನೋಡಲು ಬಂದಿದ್ದರು. ಅಭಿಮಾನಿಗಳು ಅಲ್ಲು ನೋಡಲು ಮುಗಿಬೀಳುತ್ತಿದ್ದಂತೆ ಕಾಲ್ತುಳಿತ ಉಂಟಾಗಿ ರೇವತಿ ಸಾವನ್ನಪ್ಪಿದರು. ಆಕೆಯ ಮಗ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
X