bredcrumb

ಯುಐ-ಮುಫಾಸಾ ಈ ವಾರ ನೀವು ನೋಡಬಹುದಾದ ಚಿತ್ರಗಳ ಪಟ್ಟಿ..!

By Kannada Filmibeat Photos
| Published: Friday, December 20, 2024, 22:34 [IST]

ಶುಕ್ರವಾರ ಬಂತು ಅಂದರೆ ಸಾಕು ಎಲ್ಲ ಭಾಷೆಯ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತೆ. ಅನೇಕರ ಅದೃಷ್ಟ ಬದಲಾಗುತ್ತೆ. ಇನ್ನೂ ಕೆಲವರ ನಸೀಬು ಕೂಡ ಕೈ ಕೊಡುತ್ತೆ. ಹಾಗಂಥ ಪ್ರಯತ್ನಗಳನ್ನು ಇಲ್ಲಿ ಯಾರು ನಿಲ್ಲಿಸುವುದಿಲ್ಲ. ಸೋತರೂ ಗೆದ್ದೇ ಗೆಲ್ಲುವ ಭರವಸೆಯೊಂದಿಗೆ ಅನೇಕರು ಮತ್ತೆ ಪ್ರಯತ್ನ ಮಾಡುತ್ತಾರೆ. ಗೆದ್ದವರು ಇನ್ನೊಮ್ಮೆ ಗೆಲ್ಲುವ ಆಸೆಯೊಂದಿಗೆ ಕಣಕ್ಕಿಳಿಯುತ್ತಾರೆ. ಹೀಗೆ ಈ ವಾರ ಕೂಡ ಅನೇಕರು ತಮ್ಮ ತಮ್ಮ ಲಕ್‌ನ ಪರೀಕ್ಷೆ ಮಾಡಿಕೊಂಡಿದ್ದಾರೆ. ನಮ್ಮದು ಉತ್ತಮ ಚಿತ್ರ ಎಂದು ಹೇಳುತ್ತಾನೇ ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ. ಆ ಪೈಕಿ ಹಾಲಿವುಡ್‌ದಿಂದ ಸ್ಯಾಂಡಲ್‌ವುಡ್‌ವರೆಗೆ ನಿರೀಕ್ಷೆಯನ್ನು ಮೂಡಿಸಿರುವ ಈ ವಾರದ ಚಿತ್ರಗಳ ಪಟ್ಟಿ ಇಲ್ಲಿದೆ. 

Mufasaಹಾಲಿವುಡ್‌ನ  ಬಹುನಿರೀಕ್ಷಿತ ಚಿತ್ರ ಮುಫಾಸಾ ; ದಿ ಲಯನ್ ಕಿಂಗ್ ಚಿತ್ರ ಈ ವಾರ ವಿಶ್ವದೆಲ್ಲೆಡೆ ತೆರೆಗೆ ಬಂದಿದೆ.
1/5

ಹಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಮುಫಾಸಾ ; ದಿ ಲಯನ್ ಕಿಂಗ್ ಚಿತ್ರ ಈ ವಾರ ವಿಶ್ವದೆಲ್ಲೆಡೆ ತೆರೆಗೆ ಬಂದಿದೆ. ಬ್ಯಾರಿ ಜೆಂಕಿನ್ಸ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಶಾರುಖ್ ಖಾನ್ ತಮ್ಮ ಕಂಠವನ್ನು ಕುಣಿಸಿದ್ದಾರೆ. ಮುಫಾಸಾಗೆ ಧ್ವನಿಯನ್ನು ನೀಡಿದ್ದಾರೆ. ವಿಶೇಷ ಅಂದರೆ ಶಾರುಖ್ ಖಾನ್ ಅವರ ಕಿರಿ ಮಗ ಅಬ್‌ರಾಮ್ ಕೂಡ ಈ ಚಿತ್ರಕ್ಕೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಈ ಮೂಲಕ ತಂದೆಯ ನೆರಳನ್ನು ಹಿಂಬಾಲಿಸುತ್ತಾ ಚಿತ್ರರಂಗದ ಬಾಗಿಲನ್ನು ಚಿಕ್ಕ ವಯಸ್ಸಿನಲ್ಲಿಯೇ ಬಡೆದಿದ್ದಾರೆ. ಇನ್ನು, ಮುಫಾಸಾ ದಿ ಲಯನ್ ಕಿಂಗ್ ಪಾತ್ರ ನನ್ನ ಜೀವನಕ್ಕೆ ಕೈಗನ್ನಡಿ ಹಿಡಿದಂತೆ ಇದೆ ಎಂದು ಖುದ್ದು ಶಾರುಖ್ ಖಾನ್ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಂಧ್ರದಲ್ಲಿ ಈ ವಾರ ಬಚ್ಚಲ ಮಲ್ಲಿ ಅಖಾಡಕ್ಕಿಳಿದಿದ್ದಾನೆ. ಅಲ್ಲರಿ ನರೇಶ್ ಈ ಚಿತ್ರದ ಕಥಾನಾಯಕ.
2/5

ಆಂಧ್ರದಲ್ಲಿ ಈ ವಾರ ಬಚ್ಚಲ ಮಲ್ಲಿ ಅಖಾಡಕ್ಕಿಳಿದಿದ್ದಾನೆ. ಅಲ್ಲರಿ ನರೇಶ್ ಈ ಚಿತ್ರದ ಕಥಾನಾಯಕ. ಇನ್ನು ಅಮೃತಾ ಅಯ್ಯರ್ ನಾಯಕಿ. ಹರಿತೇಜಾ ಮತ್ತು ಸಾಯಿಕುಮಾರ್ ಕೂಡ ಈ ಚಿತ್ರದಲ್ಲಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಕಥೆಯಲ್ಲಿ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳಿವೆ ಎನ್ನುವುದನ್ನು ಚಿತ್ರತಂಡ ಹಿಂದಿನಿಂದ ಹೇಳುತ್ತಾನೇ ಬಂದಿದೆ. ತೆಲುಗು ಚಿತ್ರರಂಗಕ್ಕೆ ತಮ್ಮ ಈ ಬಚ್ಚಲ ಮಲ್ಲಿ ಚಿತ್ರದ ಮೇಲೆ ಭರವಸೆ ಇದ್ದು ಫಲಿತಾಂಶ ವಾರಾಂತ್ಯ ಮುಕ್ತಾಯವಾಗುವುದರೊಳಗೆ ಸ್ಪಷ್ಟವಾಗಿ ಗೊತ್ತಾಗಲಿದೆ.
ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಮತ್ತು ಖ್ಯಾತ ನಿರ್ದೇಶಕ ವೆಟ್ರಿಮಾರನ್ ಕಾಂಬಿನೇಶನ್‌ನಲ್ಲಿ ಈ ಹಿಂದೆ ಬಂದ ವಿಡುತಲೈ ವ್ಯಾಪಕ ಸದ್ದನ್ನು ಮಾಡಿತ್ತು.
3/5

ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಮತ್ತು ಖ್ಯಾತ ನಿರ್ದೇಶಕ ವೆಟ್ರಿಮಾರನ್ ಕಾಂಬಿನೇಶನ್‌ನಲ್ಲಿ ಈ ಹಿಂದೆ ಬಂದ ವಿಡುತಲೈ ವ್ಯಾಪಕ ಸದ್ದನ್ನು ಮಾಡಿತ್ತು. ಪ್ರೇಕ್ಷಕರ ಜೊತೆ ವಿಮರ್ಷಕರ ಹೃದಯವನ್ನು ಗೆದ್ದಿತ್ತು. ಈ ಕಾರಣಕ್ಕೆ ವಿಡುತಲೈ 2 ಮೇಲೆ ನಿರೀಕ್ಷೆಗಳಿದ್ದವು. ಈ ನಿರೀಕ್ಷೆಯ ಪರೀಕ್ಷೆಯಲ್ಲಿ ಈ ಬಾರಿ ವೆಟ್ರಿ ಮಾರನ್ ಮತ್ತು ವಿಜಯ್ ಸೇತುಪತಿ ಎಷ್ಟು ಅಂಕಗಳೊಂದಿಗೆ ಪಾಸಾಗಲಿದ್ದಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಇನ್ನು. ಈ ಚಿತ್ರದಲ್ಲಿ ಕನ್ನಡದ ನಟ ಸರ್ದಾರ್ ಸತ್ಯ ಕೂಡ ಇರುವುದು ವಿಶೇಷ. ತಮಿಳು ಹಾಸ್ಯ ನಟ ಸೂರಿ ಕೂಡ ವಿಜಯ್ ಸೇತುಪತಿ ಜೊತೆ ಪ್ರಮುಖ ಪಾತ್ರ ನಿರ್ವಹಿಸಿದ್ಧಾರೆ.
ಉಪೇಂದ್ರ ನಿರ್ದೇಶಿಸಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಯುಐ ಕೂಡ ಇಂದು ತೆರೆಗೆ ಬಂದಿದೆ.
4/5

ಉಪೇಂದ್ರ ನಿರ್ದೇಶಿಸಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಯುಐ ಕೂಡ ಇಂದು ತೆರೆಗೆ ಬಂದಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಕೂಡ ಚಿತ್ರ ತೆರೆಗೆ ಬಂದಿದೆ. ಇನ್ನು ಮೊದಲ ದಿನ ಚಿತ್ರಕ್ಕೆ ಕನ್ನಡಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಕನ್ನಡಿಗರು ಮಾತ್ರವಲ್ಲದೇ ತೆಲುಗು ಪ್ರೇಕ್ಷಕರು ಕೂಡ ಉಪೇಂದ್ರ ಅವರ ಬುದ್ದಿವಂತಿಕೆ ಕಂಡು ಬೆರಗಾಗಿದ್ಧಾರೆ. ತಮಿಳು ಮತ್ತು ಹಿಂದಿಯಲ್ಲಿ ಚಿತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಕ್ರೀನ್‌ಗಳು ಸಿಗದಿದ್ದರೂ ಮುಂಬರುವ ವಾರದಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಉಪೇಂದ್ರ ಅವರ ಜೊತೆ ರೀಶ್ಮಾ ನಾಣಯ್ಯ, ಸಾಧು ಕೋಕಿಲಾ, ಮಠ ಗುರುಪ್ರಸಾದ್, ನಿಧಿ ಸುಬ್ಬಯ್ಯ ಇದ್ದಾರೆ.
ಮಲಯಾಳಂನಲ್ಲಿ ಉನ್ನಿ ಮುಕುಂದನ್ ನಟನೆಯ ಆಕ್ಷನ್ ಥ್ರಿಲ್ಲರ್ 'ಮಾರ್ಕೊ' ಕೂಡ ಇಂದು ಬಿಡುಗಡೆಯಾಗಿದೆ.
5/5

ಮಲಯಾಳಂನಲ್ಲಿ ಉನ್ನಿ ಮುಕುಂದನ್ ನಟನೆಯ ಆಕ್ಷನ್ ಥ್ರಿಲ್ಲರ್ 'ಮಾರ್ಕೊ' ಕೂಡ ಇಂದು ಬಿಡುಗಡೆಯಾಗಿದೆ. ಮೂವತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಅನೀಫ್ ಅದೇನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಸ್ಪೆನ್ಸ್ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.
X