By
Kannada Filmibeat Photos
| Published: Thursday, December 12, 2024, 22:41 [IST]
ಇನ್ನೇನು 2024ಕ್ಕೆ ಶುಭಂ ಹಾಡಿ 2025ಕ್ಕೆ ಸ್ವಾಗರ ಕೋರುವ ಸಮಯ ಬರುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚಿನವರಲ್ಲಿ 2024ರಲ್ಲಿ ಏನೆಲ್ಲ ಆಯಿತು ಎನ್ನುವ ಕುತೂಹಲ ಇರುತ್ತೆ. ಗೂಗಲ್‌ಗೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ವರ್ಷಾನುವರ್ಷ ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ ಈ ವರ್ಷ ಕೂಡ ಗೂಗಲ್ ಕೆಲ ಆಸಕ್ತಿಕರ ಪಟ್ಟಿಯನ್ನು ಮುಂದಿಟ್ಟಿದೆ. ಈ ವರ್ಷ ಜನ ಅತಿ ಹೆಚ್ಚು ಹುಡುಕಾಡಿದ ಚಿತ್ರಗಳು, ವೆಬ್ ಸರಣಿಗಳ ಲಿಸ್ಟ್ ಮಾಡಿ ಹಂಚಿಕೊಂಡಿದೆ. ಕೇವಲ ಇಷ್ಟೇ ಅಲ್ಲ ಈ ವರ್ಷ ಜನ ಯಾರನ್ನೆಲ್ಲ ಹೆಚ್ಚು ಹುಡುಕಿದ್ದಾರೆ ಎನ್ನುವ ಮಾಹಿತಿಯನ್ನು ಕೂಡ ಹಂಚಿಕೊಂಡಿದೆ.
1/7
ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು..? | Top Celebrities Who Are Most Searched On Google In 2024: Personalities Making Headlines - Filmibeat Kannada
/photos/feature/top-celebrities-who-are-most-searched-on-google-in-2024-personalities-making-headlines-fb98871.html
ಈ ವರ್ಷ ವಿಚ್ಛೇನದನದ ಕಾರಣದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಭಾರತ ತಂಡದ ಕ್ರಿಕೆಟ್ ಪ್ಲೇಯರ್ ಮತ್ತು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಈ ವರ್ಷ ತುಂಬಾ ಜನ ಗೂಗಲ್‌ನಲ್ಲಿ ಹುಡುಕಿದ್ದಾರೆ. ನತಾಶಾ ಸ್ಟಾಂಕೋವಿಕ್ ಅವರಿಂದ ದೂರವಾಗುತ್ತಿರುವ ವಿಚಾರದಿಂದ ಈ ವರ್ಷ ಹಾರ್ದಿಕ್ ಪಾಂಡ್ಯ ಭಾರತದೆಲ್ಲೆಡೆ ಚರ್ಚೆಗೀಡಾಗಿದ್ದರು ಎನ್ನುವುದಕ್ಕೆ ಕೂಡ ಇದು ಈ ಗೂಗಲ್ ರಿಸಲ್ಟ್ ಸಾಕ್ಷಿಯೆಂಬಂತೆ ಸದ್ಯಕ್ಕೆ ಕಂಡು ಬರುತ್ತಿದೆ.
2/7
ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು..? | Top Celebrities Who Are Most Searched On Google In 2024: Personalities Making Headlines - Filmibeat Kannada
/photos/feature/top-celebrities-who-are-most-searched-on-google-in-2024-personalities-making-headlines-fb98871.html#photos-1
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಿಂತ ಅನೇಕರು ಪವನ್ ಕಲ್ಯಾಣ್ ಅವರ ಜಾತಕವನ್ನು ಹುಡುಕಿದ್ದಾರೆ. ಆಂಧ್ರದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಪವನ್ ಕಲ್ಯಾಣ್ ಈ ವರ್ಷದ ಹತ್ತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಪವನ್ ಕಲ್ಯಾಣ್ ಅವರ ಜನಪ್ರಿಯತೆ ಈ ವರ್ಷ ದಿನದಿಂದ ದಿನಕ್ಕೆ ಏರಿದೆ ಎನ್ನುವುದಕ್ಕೆ ಇದೊಂದು ಪುರಾವೆ.
3/7
ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು..? | Top Celebrities Who Are Most Searched On Google In 2024: Personalities Making Headlines - Filmibeat Kannada
/photos/feature/top-celebrities-who-are-most-searched-on-google-in-2024-personalities-making-headlines-fb98871.html#photos-2
ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರಾದ, ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳವನ್ನಾಗಿ ಮಾಡಿಕೊಂಡ ಪೂನಂ ಪಾಂಡೆ ಕೂಡ ಈ ಟಾಪ್ ಟೆನ್ ನಲ್ಲಿ ಸ್ಥಾನವನ್ನು ಪಡೆದಿರುವುದು ಈ ವರ್ಷದ ಅಚ್ಚರಿಗಳಲ್ಲೊಂದು. ಭಾರತದ ಅನೇಕ ನಾಯಕಿಯರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿರುವ ಪೂನಂ ಈ ವರ್ಷದ ಈ ಲಿಸ್ಟ್‌ನಲ್ಲಿ 07ನೇ ಸ್ಥಾನವನ್ನು ಪಡೆದಿದ್ದಾರೆ.
4/7
ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು..? | Top Celebrities Who Are Most Searched On Google In 2024: Personalities Making Headlines - Filmibeat Kannada
/photos/feature/top-celebrities-who-are-most-searched-on-google-in-2024-personalities-making-headlines-fb98871.html#photos-3
ಒಂದ್ಕಾಲದಲ್ಲಿ ಬಾಲಿವುಡ್‌ನಲ್ಲಿ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡು ಸೋತ ಬಿಹಾರದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರನ್ನು ಕೂಡ ಜನ ಕುತೂಹಲದ ಕಂಗಳಿಂದ ಈ ವರ್ಷ ನೋಡಿದ್ದಾರೆ. ಹಾಜಿಪುರ ಲೋಕಸಭಾ ಕ್ಷೇತ್ರದಿಂದ 6.14 ಲಕ್ಷ ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ಚಿರಾಗ್ ಪಾಸ್ವಾನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
5/7
ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು..? | Top Celebrities Who Are Most Searched On Google In 2024: Personalities Making Headlines - Filmibeat Kannada
/photos/feature/top-celebrities-who-are-most-searched-on-google-in-2024-personalities-making-headlines-fb98871.html#photos-4
ಭಾರತದ ಆಗರ್ಭ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ಜೊತೆ ಈ ವರ್ಷ ಅದ್ಧೂರಿಯಾಗಿ ಮದುವೆಯಾದ ರಾಧಿಕಾ ಮರ್ಚೆಂಟ್ ಕೂಡ ಗೂಗಲ್‌ನ ಪ್ರಮುಖ ಹತ್ತರಲ್ಲಿದ್ದಾರೆ. ಉದ್ಯಮಿ ಎನ್ಕೋರ್ ಹೆಲ್ತ್‌ಕೇರ್‌ನ ಸಂಸ್ಥಾಪಕರು ಮತ್ತು ಮಾಲೀಕರಾಗಿರುವ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್ ಈ ಪಟ್ಟಿಯಲ್ಲಿ ಪೂನಂ ಪಾಂಡೆ ನಂತರದ ಎಂಟನೇ ಸ್ಥಾನವನ್ನು ಅಲಂಕರಿಸಿದ್ದಾರೆ
6/7
ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು..? | Top Celebrities Who Are Most Searched On Google In 2024: Personalities Making Headlines - Filmibeat Kannada
/photos/feature/top-celebrities-who-are-most-searched-on-google-in-2024-personalities-making-headlines-fb98871.html#photos-5
ಯುಕೆಯ ರಾಣಿಯಾಗಲು ಹವಣಿಸುತ್ತಿರುವಂತೆ ಕಾಣಿಸುವ ಪ್ರಿನ್ಸ್ ವಿಲಿಯಂ ಅವರ ಪತ್ನಿ ಕೇಟ್ ಮಿಡಲ್ಟನ್ ಅವರನ್ನು ಕೂಡ ಅನೇಕರು ಗೂಗಲ್‌ನಲ್ಲಿ ಹುಡುಕಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಕೇಟ್ ಮಿಡಲ್ಟನ್ ಮೊದಲ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ
7/7
ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು..? | Top Celebrities Who Are Most Searched On Google In 2024: Personalities Making Headlines - Filmibeat Kannada
/photos/feature/top-celebrities-who-are-most-searched-on-google-in-2024-personalities-making-headlines-fb98871.html#photos-6
ಅಮೆರಿಕಾದ ಖ್ಯಾತ ಗಾಯಕಿ ಮತ್ತು ಡಿಸ್ನಿ ಲೆಜೆಂಡ್ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಮಿಲೀ ಸೈರಸ್ ಕೂಡ ಗೂಗಲ್‌ನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಪ್ ಪ್ರಪಂಚದಲ್ಲಿ ತಮ್ಮ ಛಾಪು ಮೂಡಿಸಿರುವ ಮಿಲಿ ಇಲ್ಲಿಯವರೆಗೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ವಿಶ್ವದೆಲ್ಲೆಡೆ ಪ್ರದರ್ಶನವನ್ನು ನೀಡಿದ್ದಾರೆ