By
Narayan
| Published: Sunday, March 31, 2024, 16:10 [IST]
ಉಪೇಂದ್ರ ಕಥೆ, ಚಿತ್ರಕಥೆ ಬರೆದು ನಟಿಸಿದ್ದ H2O ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಆದರೆ ಇದು ನಿಜಕ್ಕೂ ಅದ್ಭುತ ಪ್ರಯತ್ನ ಎನ್ನಬಹುದು. ಕರ್ನಾಟಕ, ತಮಿಳುನಾಡು ಕಾವೇರಿ ನೀರಿನ ಸಮಸ್ಯೆ ಸುತ್ತಾ ಚಿತ್ರದಲ್ಲಿ ಚರ್ಚಿಸಲಾಗಿತ್ತು. ಆ ಚಿತ್ರಕ್ಕೆ 22 ವರ್ಷ ತುಂಬಿದೆ.
1/7
22 ವರ್ಷ ಪೂರೈಸಿದ H2O; ಹಳೇ ಚಿತ್ರಗಳನ್ನು ಹಂಚಿಕೊಂಡ ಪ್ರಿಯಾಂಕ | H2O Movie Completes 22 Years, Priyanka Upendra Recalls Her Association With Movie - Filmibeat Kannada
/photos/h2o-movie-completes-22-years-priyanka-upendra-recalls-her-association-with-movie-fb93561.html
ಲೋಕನಾಥ್ ಹಾಗೂ ರಾಜಾರಾಮ್ ನಿರ್ದೇಶನದ H2O ಸಿನಿಮಾ ಉತ್ತಮ ಪ್ರಯತ್ನವಾಗಿತ್ತು. ಚಿತ್ರದಲ್ಲಿ ಉದಯ್ ಶಂಕರ್ ಆಗಿ ಉಪೇಂದ್ರ, ವೈರಮುತ್ತು ಆಗಿ ಪ್ರಭುದೇವ ನಟಿಸಿದ್ದರು. ನಾಯಕಿ ಕಾವೇರಿ ಆಗಿ ಪ್ರಿಯಾಂಕ ಮಿಂಚಿದ್ದರು. 8 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.
2/7
22 ವರ್ಷ ಪೂರೈಸಿದ H2O; ಹಳೇ ಚಿತ್ರಗಳನ್ನು ಹಂಚಿಕೊಂಡ ಪ್ರಿಯಾಂಕ | H2O Movie Completes 22 Years, Priyanka Upendra Recalls Her Association With Movie - Filmibeat Kannada
/photos/h2o-movie-completes-22-years-priyanka-upendra-recalls-her-association-with-movie-fb93561.html#photos-1
ಅದಾಗಲೇ ತೆಲುಗಿನ 'ರಾ' ಚಿತ್ರದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ನಟಿಸಿದ್ದರು. H2O ಅವರಿಬ್ಬರು ಒಟ್ಟಿಗೆ ನಟಿಸಿದ್ದ 2ನೇ ಸಿನಿಮಾ ಆಗಿತ್ತು. ಈ ಸಿನಿಮಾ ಬಳಿಕ ಇಬ್ಬರೂ ಮದುವೆ ಆದರು. ಚಿತ್ರದಲ್ಲಿ ಇಬ್ಬರು ನಾಯಕರ ನಡುವೆ ಪ್ರಿಯಾಂಕ ನಾಯಕಿಯಾಗಿ ಮಿಂಚಿದ್ದರು. ತೆಲುಗು ಹಾಗೂ ಹಿಂದಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು.
3/7
22 ವರ್ಷ ಪೂರೈಸಿದ H2O; ಹಳೇ ಚಿತ್ರಗಳನ್ನು ಹಂಚಿಕೊಂಡ ಪ್ರಿಯಾಂಕ | H2O Movie Completes 22 Years, Priyanka Upendra Recalls Her Association With Movie - Filmibeat Kannada
/photos/h2o-movie-completes-22-years-priyanka-upendra-recalls-her-association-with-movie-fb93561.html#photos-2
H2O ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಅದರಲ್ಲೂ 'ಹೂವೆ ಹೂವೆ' ಪ್ರಿಯಾಂಕ ಉಪೇಂದ್ರಗೆ ಹೆಚ್ಚು ಫೇವರಿಟ್ ಎನಿಸಿಕೊಂಡಿದೆ. ಈಗಲೂ 'ಹೂವೆ ಹೂವೆ' ಪ್ರಿಯಾಂಕ ಎಂದೇ ಕೆಲವರು ಕರೆಯುತ್ತಾರೆ. ಸಾಧು ಕೋಕಿಲ ಸಂಗೀತದ ಹಾಡಿಗೆ ಸ್ವತಃ ಉಪೇಂದ್ರ ಸಾಹಿತ್ಯ ಬರೆದಿದ್ದರು.
4/7
22 ವರ್ಷ ಪೂರೈಸಿದ H2O; ಹಳೇ ಚಿತ್ರಗಳನ್ನು ಹಂಚಿಕೊಂಡ ಪ್ರಿಯಾಂಕ | H2O Movie Completes 22 Years, Priyanka Upendra Recalls Her Association With Movie - Filmibeat Kannada
/photos/h2o-movie-completes-22-years-priyanka-upendra-recalls-her-association-with-movie-fb93561.html#photos-3
ಸದ್ಯ H2O ಸಿನಿಮಾ ತೆರೆಕಂಡು 22 ವರ್ಷ ಕಳೆದಿದೆ. 2002 ಮಾರ್ಚ್ 29ರಂದು ಸಿನಿಮಾ ತೆರೆಗೆ ಬಂದಿತ್ತು. ನಟಿ ಪ್ರಿಯಾಂಕ ಉಪೇಂದ್ರ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. H2O ಚಿತ್ರದ ನೆನಪುಗಳು ಎಂದು ಬರೆದು ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
5/7
22 ವರ್ಷ ಪೂರೈಸಿದ H2O; ಹಳೇ ಚಿತ್ರಗಳನ್ನು ಹಂಚಿಕೊಂಡ ಪ್ರಿಯಾಂಕ | H2O Movie Completes 22 Years, Priyanka Upendra Recalls Her Association With Movie - Filmibeat Kannada
/photos/h2o-movie-completes-22-years-priyanka-upendra-recalls-her-association-with-movie-fb93561.html#photos-4
ಮದುವೆ ಬಳಿಕ ಕೂಡ ಪ್ರಿಯಾಂಕ ಉಪೇಂದ್ರ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ಮನೆಯಲ್ಲಿ ಆಪ್ತರ ಜೊತೆ ಅದ್ಧೂರಿಯಾಗಿ ಹೋಳಿ ಹಬ್ಬ ಆಚರಿಸಿದ್ದರು. ಆ ಫೋಟೊಗಳನ್ನು ಕೂಡ ಶೇರ್ ಮಾಡಿದ್ದರು.
6/7
22 ವರ್ಷ ಪೂರೈಸಿದ H2O; ಹಳೇ ಚಿತ್ರಗಳನ್ನು ಹಂಚಿಕೊಂಡ ಪ್ರಿಯಾಂಕ | H2O Movie Completes 22 Years, Priyanka Upendra Recalls Her Association With Movie - Filmibeat Kannada
/photos/h2o-movie-completes-22-years-priyanka-upendra-recalls-her-association-with-movie-fb93561.html#photos-5
ಇತ್ತೀಚೆಗೆ ಪ್ರಿಯಾಂಕ ಮಹಿಳಾ ಪ್ರಧಾನ ಸಿನಿಮಾಗಳಲ್ಲೆ ಹೆಚ್ಚು ನಟಿಸುತ್ತಿದ್ದಾರೆ. 'ಡಿಟೆಕ್ಟಿವ್ ತೀಷ್ಣ' ಆಕೆ ನಟಿಸಿದ ಕೊನೆಯ ಸಿನಿಮಾ. ಇನ್ನು ಕೊಲ್ಕತ್ತಾದಲ್ಲಿ ಹುಟ್ಟಿ ಬೆಳೆದ ಪ್ರಿಯಾಂಕ ಬೆಂಗಾಲಿ ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಪರಿಚಿತರಾಗಿದ್ದರು.
7/7
22 ವರ್ಷ ಪೂರೈಸಿದ H2O; ಹಳೇ ಚಿತ್ರಗಳನ್ನು ಹಂಚಿಕೊಂಡ ಪ್ರಿಯಾಂಕ | H2O Movie Completes 22 Years, Priyanka Upendra Recalls Her Association With Movie - Filmibeat Kannada
/photos/h2o-movie-completes-22-years-priyanka-upendra-recalls-her-association-with-movie-fb93561.html#photos-6
'ಕೋಟಿಗೊಬ್ಬ', 'ಕಾದಲ್ ಸಡುಗುಡು', 'ರಾಜಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಿದ್ದಾರೆ. 2016ರಲ್ಲಿ ಬಂದ 'ಮಮ್ಮಿ' ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿತ್ತು. 'ಸೆಕೆಂಡ್ ಹಾಫ್' ಚಿತ್ರದಲ್ಲಿ ಪೊಲೀಸ್ ಕಾನ್ಸ್‌ಸ್ಟೆಬಲ್ ಪಾತ್ರದಲ್ಲಿ ಕೂಡ ಮಿಂಚಿದ್ದರು.