bredcrumb

ತಾಯಿಯಾದ ಬಳಿಕ ಹರ್ಷಿಕಾ ಹೊಸ ಫೋಟೊಶೂಟ್

By Umesh M
| Updated: Friday, December 20, 2024, 19:04 [IST]

ಕನ್ನಡ ನಟಿ ಹರ್ಷಿಕಾ ಪೂಣಚ್ಚ ಒಂದೂವರೆ ತಿಂಗಳ ಹಿಂದೆ ಹೆಣ್ಣು ಮಗುವಿನ ಜನ್ಮ ನೀಡಿದ್ದರು. ಸದ್ಯ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣ, ಪ್ರಮೋಷನ್ ಎಲ್ಲದ್ದಕ್ಕೂ ಬ್ರೇಕ್ ಹಾಕಿದ್ದಾರೆ. ಹೊರಗಡೆ ಕೂಡ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ಹೊಸ ಫೋಟೊಶೂಟ್ ಮಾಡಿ ಫೋಟೊಗಳನ್ನು ಶೇರ್ ಮಾಡಿದ್ದಾರೆ. ನೀಲಿ ಬಣ್ಣದ ಉಡುಗೆಯಲ್ಲಿ ಹರ್ಷಿಕಾ ಮಿಂಚಿದ್ದಾರೆ. 

Harshika Poonacha shines in her postpartum shoot
1/5

ನೀಲಿ ಬಣ್ಣದ ಟ್ರೆಡಿಷನಲ್ ಉಡುಗೆಯಲ್ಲಿ ಹರ್ಷಿಕಾ ಕ್ಯಾಮರಾ ಮುಂದೆ ನಿಂತಿದ್ದಾರೆ. ಇನ್ನು ಆಕೆಯ ಕುತ್ತಿಗೆಯಲ್ಲಿರುವ ನೆಕ್‌ಲೆಸ್ ಮಿರಿಮಿರಿ ಮಿಂಚುತ್ತಿದೆ.
Harshika Poonacha shines in her postpartum shoot
2/5

ಅತ್ತ ಇತ್ತ ನೋಡುತ್ತಾ ಭಿನ್ನ ವಿಭಿನ್ನ ಕೋನಗಳಲ್ಲಿ ಹರ್ಷಿಕಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಡೆಲಿವರಿ ಬಳಿಕ ಇದು ನನ್ನ ಮೊದಲ ಫೋಟೊಶೂಟ್ ಎಂದು ಬರೆದು ಫೋಟೊ ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.
Harshika Poonacha shines in her postpartum shoot
3/5

ಹರ್ಷಿಕಾ ಹೊಸ ಫೋಟೊಗಳಿಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಫೋಟೊಗ್ರಫರ್ ಗೀತಾಂಜಲಿ ಎಂಬುವವರು ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಆಕೆಗೂ ಹರ್ಷಿಕಾ ಧನ್ಯವಾದ ತಿಳಿಸಿದ್ದಾರೆ.
Harshika Poonacha shines in her postpartum shoot
4/5

ಸಾಮಾನ್ಯವಾಗಿ ಹೆರಿಗೆ ಬಳಿಕ ನಟಿಯರು ದೇಹದ ತೂಕ ಇಳಿಸಿ, ತೆಳ್ಳಗಾಗಿ ಫೋಟೊಶೂಟ್ ಮಾಡಿಸುತ್ತಾರೆ. ತನ್ನ ಬಳಕುವ ಬಳ್ಳಿಯಂತ ದೇಹವನ್ನು ಪ್ರದರ್ಶಿಸುತ್ತಾರೆ. ಆದರೆ ಹರ್ಷಿಕಾ ಸಿಂಪಲ್ ಆಗಿ ಟ್ರೆಡಿಷನಲ್ ಡ್ರೆಸ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ.
Harshika Poonacha shines in her postpartum shoot
5/5

ಕಳೆದ ವರ್ಷವಷ್ಟೆ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಮದುವೆ ನಡೆದಿತ್ತು. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು.
X