bredcrumb

ಯಂಗ್ ಹೀರೊ ಜೊತೆ ನಿಹಾರಿಕಾ 2ನೇ ಮದುವೆ?

By Narayan
| Published: Friday, December 6, 2024, 23:12 [IST]

ತೆಲುಗು ನಿಹಾರಿಕಾ ಕೋನಿದೇಲ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ಎನ್ನುವ ಕಾರಣಕ್ಕೆ ಆಗಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಈಗಾಗಲೇ ಆಕೆ ಒಂದು ಮದುವೆ ಆಗಿ ಡಿವೋರ್ಸ್ ಪಡೆದಿದ್ದಾರೆ. ಇದೀಗ ಆಕೆ 2ನೇ ಮದುವೆ ಆಗ್ತಾರೆ ಎನ್ನಲಾಗ್ತಿದೆ. 

Is telugu actress Niharika Konidela's second marriage on cards
1/7

ಸಿನಿಮಾ ತಾರೆಯರ ಮದುವೆ, ಡಿವೋರ್ಸ್ ಸುದ್ದಿ ಪದೇ ಪದೇ ಸದ್ದು ಮಾಡುತ್ತದೆ. ಇನ್ನು 2ನೇ ಮದುವೆ ವಿಚಾರಗಳು ಗಮನ ಸೆಳೆಯುತ್ತದೆ. ಇತ್ತೀಚೆಗೆ ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ಎರಡನೇ ಮದುವೆ ಆಗ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.
Is telugu actress Niharika Konidela's second marriage on cards
2/7

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಮಗಳು ನಿಹಾರಿಕಾ. ಚೈತನ್ನಾ ಜೊನ್ನಲಗಡ್ಡ ಜೊತೆ ಆಕೆಯ ಮದುವೆ ಅದ್ಧೂರಿಯಾಗಿ ನಡೆದಿತ್ತು. ಉದಯ್‌ಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ರಂಗೇರಿತ್ತು.
Is telugu actress Niharika Konidela's second marriage on cards
3/7

ನಾಲ್ಕು ವರ್ಷಗಳ ಹಿಂದೆ ನಿಹಾರಿಕಾ - ಚೈತನ್ಯಾ ಹೊಸ ಬಾಳಿಗೆ ಕಾಲಿಟ್ಟಿದ್ದರು. ಕಳೆದ ವರ್ಷ ಜುಲೈನಲ್ಲಿ ಜೋಡಿ ದೂರಾಗುವ ನಿರ್ಧಾರಕ್ಕೆ ಬಂದಿತ್ತು. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು.
Is telugu actress Niharika Konidela's second marriage on cards
4/7

ಕೆಲ ಸಂದರ್ಶನದಲ್ಲಿ ನಿಹಾರಿಕಾಗೆ 2ನೇ ಮದುವೆ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆಗ ಖಂಡಿತ ಮದುವೆ ಆಗುತ್ತೇನೆ, ನನಗೆ ಏನು ಮಹಾ ವಯಸ್ಸಾಗಿದೆ. ನನ್ನ ಕರಿಯರ್ ಸಹ ಮುಖ್ಯ. ನನಗೆ ಇಷ್ಟವಾದ ವ್ಯಕ್ತಿ ಸಿಕ್ಕರೆ ಖಂಡಿತ ಮದುವೆ ಆಗ್ತೀನಿ ಎಂದಿದ್ದರು.
Is telugu actress Niharika Konidela's second marriage on cards
5/7

ಯಾರಾದರೂ ಇಷ್ಟ ಆದರೆ ಪ್ರೀತಿಸಿ ಮದುವೆ ಆಗುತ್ತೇನೆ ಎಂದು ನಿಹಾರಿಕಾ ವಿವರಿಸಿದ್ದರು. ಸದ್ಯ ನಿಹಾರಿಕಾ ತೆಲುಗಿನ ಯುವ ನಟನ ಜೊತೆ ಹಸೆಮಣೆ ಏರುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
Is telugu actress Niharika Konidela's second marriage on cards
6/7

'ಒಕ ಮನಸು' ಚಿತ್ರದ ಮೂಲಕ ನಿಹಾರಿಕಾ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಹ್ಯಾಪಿ ವೆಡ್ಡಿಂಗ್' ಹಾಗೂ 'ಸೂರ್ಯಕಾಂತಂ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ ದೊಡ್ಡದಾಗಿ ಯಶಸ್ಸು ಸಿಗದ ಕಾರಣ ಸೈಲೆಂಟ್ ಆಗಿಬಿಟ್ಟರು.
Is telugu actress Niharika Konidela's second marriage on cards
7/7

ಪಿಂಕ್ ಎಲಿಪ್ಯಾಂಟ್ ಪಿಕ್ಚರ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ನಿಹಾರಿಕಾ ತೆರೆದಿದ್ದಾರೆ. ಅದೇ ಬ್ಯಾನರ್‌ನಲ್ಲಿ 'ಕಮಿಟಿ ಕುರೋಲ್ಲು' ಎಂಬ ಸಿನಿಮಾ ನಿರ್ಮಿಸಿದ್ದರು. ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದರು.
X