bredcrumb

ಹೊಸ ಪೋಟೋಶೂಟ್‌ನಲ್ಲಿ ಮಿರಮಿರ ಮಿಂಚಿದ ಜಾಹ್ನವಿ ಕಪೂರ್...!

By Kannada Filmibeat Photos
| Updated: Tuesday, December 10, 2024, 17:08 [IST]

ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅಕಾಲಿಕ ಮರಣಕ್ಕೀಡಾದ ಮೇಲೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು ಅವರ ಪುತ್ರಿ ಜಾಹ್ನವಿ ಕಪೂರ್. ಮೊದಲ ಸಿನಿಮಾದಲ್ಲಿಯೇ ಅನೇಕರನ್ನು ಆಯಸ್ಕಾಂತದಂತೆ ಸೆಳೆದು, ಒಂದಾದ ಮೇಲೊಂದು ಸಿನಿಮಾಗಳನ್ನು ಮಾಡುತ್ತಾನೇ ಬರುತ್ತಿರುವ ಜಾಹ್ನವಿ ಕಪೂರ್ ತಮ್ಮ ಉಡುಗೆ ತೊಡುಗೆಯಿಂದ ಕೂಡ ಆಗಾಗ ಗಮನ ಸೆಳೆಯುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ  ಜಾಹ್ನವಿ ಕಪೂರ್ ಅವರ ಹೊಸ ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಧಡಕ್ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶಿಸಿದ ಜಾಹ್ನವಿ ಕಪೂರ್ ಸದ್ಯ ತಮ್ಮ ಅಭಿಮಾನಿಗಳಿಗೆ ಕೆಲ ಫೋಟೊ ಹಂಚಿಕೊಂಡಿದ್ದಾರೆ.
1/5

ಧಡಕ್ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶಿಸಿದ ಜಾಹ್ನವಿ ಕಪೂರ್ ಸದ್ಯ ತಮ್ಮ ಅಭಿಮಾನಿಗಳಿಗೆ ಕೆಲ ಫೋಟೊ ಹಂಚಿಕೊಂಡಿದ್ದಾರೆ. ತಮ್ಮ ಸೌಂದರ್ಯದಿಂದ ಪಡ್ಡೆ ಹುಡುಗರನ್ನು ಕೆಣಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜಾಹ್ನವಿ ಕಪೂರ್ ಅವರ ಈ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಧಡಕ್ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶಿಸಿದ ಜಾಹ್ನವಿ ಕಪೂರ್ ಸದ್ಯ ತಮ್ಮ ಅಭಿಮಾನಿಗಳಿಗೆ ಕೆಲ ಫೋಟೊ ಹಂಚಿಕೊಂಡಿದ್ದಾರೆ.
2/5

ವೈರಲ್ ಆದ ಈ ಫೋಟೊಗಳಲ್ಲಿ ಜಾಹ್ನವಿ ಕಪೂರ್ ಸಿಲ್ವರ್ ಕಾರ್ ಸೆಟ್ ಡ್ರೆಸ್ ನಲ್ಲಿ ಮಿರಮಿರ ಮಿಂಚಿದ್ದಾರೆ. ಬಟ್ಟೆಗೆ ಹೊಂದಿಕೊಂಡ ಬೆಲ್ಟ್ ಧರಿಸಿ ಸ್ಟೈಲಿಶ್ ಪೋಸ್ ನೀಡಿದ್ದಾರೆ. ತಮ್ಮ ಉಡುಪುಗಳಿಗೆ ತಕ್ಕದಾಗಿ ಹೊಂದುವಂತಹ ವಾಚ್ ಮತ್ತು ಉಂಗುರವನ್ನು ಧರಿಸಿದ್ದಾರೆ. ನಗೆ ಬೀರಿದ್ದಾರೆ.
ಧಡಕ್ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶಿಸಿದ ಜಾಹ್ನವಿ ಕಪೂರ್ ಸದ್ಯ ತಮ್ಮ ಅಭಿಮಾನಿಗಳಿಗೆ ಕೆಲ ಫೋಟೊ ಹಂಚಿಕೊಂಡಿದ್ದಾರೆ.
3/5

ಅಂದ್ಹಾಗೇ ಜಾಹ್ನವಿ ಕಪೂರ್ ಈಗ ಕೇವಲ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ತಮ್ಮ ತಾಯಿ ಶ್ರೀದೇವಿಯಂತೆ ಜಾಹ್ನವಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ದೇವರ ಚಿತ್ರದಲ್ಲಿ ಜ್ಯೂ ಎನ್ ಟಿ ಆರ್ ಎದುರು ಮಿಂಚಿದ್ದ ಜಾಹ್ನವಿ ಕಪೂರ್ ಸದ್ಯ ದಕ್ಷಿಣದಲ್ಲಿ ಹೆಚ್ಚೆಚ್ಚು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.
ಧಡಕ್ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶಿಸಿದ ಜಾಹ್ನವಿ ಕಪೂರ್ ಸದ್ಯ ತಮ್ಮ ಅಭಿಮಾನಿಗಳಿಗೆ ಕೆಲ ಫೋಟೊ ಹಂಚಿಕೊಂಡಿದ್ದಾರೆ.
4/5

ಇನ್ನುಳಿದಂತೆ ಸನ್ನಿ ಸಂಸ್ಕಾರಿ ಕೀ ಚಿತ್ರದಲ್ಲಿ ಜಾಹ್ನವಿ ಕಪೂರ್ ಸದ್ಯ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಹೊರತು ಪಡಿಸಿದರೆ ಜಾಹ್ನವಿ ಕೈಯಲ್ಲಿ ಪರಮ ಸುಂದರಿ ಎಂಬ ಚಿತ್ರ ಇದೆ. ಇನ್ನು ದೇವರ ಚಿತ್ರದ ಮೊದಲ ಭಾಗ ಮಾತ್ರ ಬಂದಿದೆ. ಒಂದು ವೇಳೆ ಎರಡನೇ ಭಾಗದ ಕುರಿತು ಜ್ಯೂ,ಎನ್.ಟಿ.ಆರ್ ಗಂಭೀರವಾದ ಆಲೋಚನೆ ಮಾಡಿದರೆ ಈ ಚಿತ್ರದಲ್ಲಿ ಕೂಡ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಧಡಕ್ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶಿಸಿದ ಜಾಹ್ನವಿ ಕಪೂರ್ ಸದ್ಯ ತಮ್ಮ ಅಭಿಮಾನಿಗಳಿಗೆ ಕೆಲ ಫೋಟೊ ಹಂಚಿಕೊಂಡಿದ್ದಾರೆ.
5/5

ಸದ್ಯ ಜಾಹ್ನವಿ ಕಪೂರ್ ಅವರ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳ ಕಣ್ಮನವನ್ನು ಸೆಳೆಯುತ್ತಿವೆ. ಕೆಲವರು ಜಾಹ್ನವಿ ಕಪೂರ್ ಅವರನ್ನು ದೇವತೆಯೆಂದು ಕರೆದರೆ ಇನ್ನೂ ಹಲವರು ನೀವು ಸೀರೆಯಲ್ಲಿಯೇ ತುಂಬಾ ಚೆನ್ನಾಗಿ ಕಾಣುತ್ತೀರಾ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿ ಎಂದು ಇನ್ನು ಕೆಲವರು ಜಾಹ್ನವಿ ಕಪೂರ್ ಅವರಿಗೆ ಸಲಹೆಯನ್ನು ಕೂಡ ನೀಡುತ್ತಿದ್ದಾರೆ.
X