bredcrumb

Diwali 2024: ಬೆಳಕಿನ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಅನುಪಮಾ ಗೌಡ; ಹೇಗಿದೆ ಫೋಟೋಶೂಟ್

By Muralidhar S
| Published: Monday, November 4, 2024, 23:14 [IST]

ಅನುಪಮಾ ಗೌಡ ಇತ್ತೀಚೆಗೆ ಕೆಲವು ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಳಕಿನ ಹಬ್ಬವನ್ನು ಸಂಭ್ರಮದಲ್ಲಿ ಮಿಂದೆದ್ದಿರುವ ಅನುಪಮಾ ಗೌಡ  ಸೀರೆಯುಟ್ಟು ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಹಬ್ಬದ ಮೂಡಿನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ದೀಪಾವಳಿ ಹಬ್ಬಕ್ಕಾಗಿಯೇ ಫೋಟೋಶೂಟ್ ಮಾಡಿಸಿದಂತೆ ಇದೆ.

Anupama Gowda Diwali Celebration Photos
1/6

ಸ್ಯಾಂಡಲ್‌ವುಡ್ ನಟಿ, ನಿರೂಪಕಿ ಹಾಗೂ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗೆ ನಿರೂಪಕಿಯಾಗಿ ಬ್ಯುಸಿಯಾಗಿರುವ ಅನುಪಮಾ ಗೌಡ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಾರೆ. ಇವರು ನಿರೂಪಣೆ ಮಾಡುವ ಶೈಲಿಗೆ ಅದೆಷ್ಟೋ ಮಂದಿ ಫ್ಯಾನ್ಸ್ ಇದ್ದಾರೆ. ಅನುಪಮಾ ಗೌಡ ನಿರೂಪಣೆ ಅಷ್ಟೇ ಅಲ್ಲ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ.
Anupama Gowda Diwali Celebration Photos
2/6

ಅನುಪಮಾ ಗೌಡ ಇತ್ತೀಚೆಗೆ ಕೆಲವು ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಳಕಿನ ಹಬ್ಬವನ್ನು ಸಂಭ್ರಮದಲ್ಲಿ ಮಿಂದೆದ್ದಿರುವ ಅನುಪಮಾ ಗೌಡ ಸೀರೆಯುಟ್ಟು ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಹಬ್ಬದ ಮೂಡಿನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ದೀಪಾವಳಿ ಹಬ್ಬಕ್ಕಾಗಿಯೇ ಫೋಟೋಶೂಟ್ ಮಾಡಿಸಿದಂತೆ ಇದೆ.
Anupama Gowda Diwali Celebration Photos
3/6

ಅನುಪಮಾ ಗೌಡ ಹೇರ್ ಸ್ಟೈಲ್.. ಟ್ರೆಡಿಷನಲ್ ಲುಕ್.. ಹಬ್ಬದ ಮೂಡ್‌ ಅನ್ನು ಸಾರಿ ಸಾರಿ ಹೇಳುವ ಕಾಸ್ಯೂಮ್, ಹೂವು ಹಿಡಿದು ಕ್ಯಾಮರಾಗೆ ಕೊಟ್ಟ ಆ ಪೋಸ್ ನೆಟ್ಟಿಗರಿಗೆ ಇಷ್ಟ ಆಗಿದೆ. ಅನುಪಮಾ ಅವರ ಈ ದೀಪಾವಳಿ ಸ್ಪೆಷಲ್ ಫೋಟೊಗಳಿಗೆ ಬಹುಪರಾಕ್ ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ.
Anupama Gowda Diwali Celebration Photos
4/6

ಅದರಲ್ಲೂ ಸ್ಯಾಂಡಲ್‌ವುಡ್ ನಟಿ ಚೈತ್ರಾ ಜಿ ಆಚಾರ್ ಕೂಡ ಕಾಮೆಂಟ್ ಮಾಡಿದ್ದಾರೆ. "ಓ.. ನನಗೆ ಈ ಸೀರಿಸ್ ಇಷ್ಟ ಆಯ್ತು. ನೀವು ಎಂದಿನಂತೆ ಇನ್ನೂ ಹೆಚ್ಚು ಸುಂದರವಾಗಿ ಕಾಣುತ್ತೀರ." ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾರ್ಟ ಎಮೋಜಿ ಕಳಿಸಿದ್ದಾರೆ. ಮತ್ತೆ ಕೆಲವರು ಸುಂದರವಾಗಿ ಕಾಣಿಸುತ್ತಿದ್ದೀರ ಎಂದು ಕಾಮೆಂಟ್ ಮಾಡಿದ್ದಾರೆ.
Anupama Gowda Diwali Celebration Photos
5/6

ಇನ್ನು ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಅನುಪಮಾ ಗೌಡ ಅಕ್ಕ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಅವರ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಅಂತ ಹೇಳಬಹುದು. ಈ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಬಳಿಕ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಬಳಿಕ ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಯಾಗಿದ್ದಾರೆ. ಸದ್ಯ ಹಲವು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ.
Anupama Gowda Diwali Celebration Photos
6/6

ಇತ್ತೀಚೆಗಷ್ಟೇ ಅನುಪಮಾ ಗೌಡ ಹೊಸ ಮನೆಯ ಗ್ರಹಪ್ರವೇಶ ಮಾಡಿದ್ದರು. ಆ ಮನೆಗೆ 'ನಮ್ಮನೆ' ಅಂತಾನೂ ಹೆಸರಿಟ್ಟಿದ್ದರು. ಇಷ್ಟು ದಿನ ಕಿರುತೆರೆಯಲ್ಲಿ ದುಡಿದು ತನ್ನದೇ ಸ್ವಂತ ಮನೆಯ ಮಾಡಿದ ಖುಷಿಯನ್ನು ಹಂಚಿಕೊಂಡಿದ್ದರು. ಈಗ ಬೆಳಕಿನ ಹಬ್ಬದ ಸಂಭ್ರಮದಲ್ಲಿ ಹೊಸ ಫೋಟೋಶೂಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
X