bredcrumb

ಸಿದ್ದು, ಬಿಎಸ್‌ವೈಗೆ ಡಾಲಿ ಮದುವೆ ಆಮಂತ್ರಣ

By Kannada Filmibeat Photos
| Published: Monday, December 16, 2024, 13:43 [IST]

ಕನ್ನಡ ನಟ ಧನಂಜಯ್ ಮದುವೆ ನಿಶ್ಚಯವಾಗಿದೆ. ಗೆಳತಿ ಧನ್ಯತಾ ಜೊತೆ ಡಾಲಿ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಧನು-ಧನ್ಯಾ ಮದುವೆ ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ. ಸರಳ ಸುಂದರವಾದ ಇನ್ವಿಟೇಷನ್ ಕಾರ್ಡ್ ಅನ್ನು ಧನಂಜಯ್ ಇತ್ತೀಚೆಗೆ ಹಂಚಿಕೊಂಡಿದ್ದರು. ಇದೀಗ ಪತ್ರಿಕೆ ನೀಡಿ ಅತಿಥಿಗಳನ್ನು ಜೋಡಿ ತಮ್ಮ ಮದುವೆಗೆ ಆಹ್ವಾನಿಸುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಧನು-ಧನ್ಯಾ ಮದುವೆಗೆ ಕರೆದಿದ್ದಾರೆ.

Actor Dhananjay invites cm Siddaramaiah and Ex Cm yediyurappa for his wedding
1/6

ಫೆಬ್ರವರಿ 15 ಹಾಗೂ 16ರಂದು ನಟ ಧನಂಜಯ್ ಹಾಗೂ ಧನ್ಯತಾ ಮದುವೆ ನಡೆಯಲಿದೆ. ಮೈಸೂರಿನಲ್ಲಿ ಮದುವೆ ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿದ್ದಾರೆ. ಅದ್ಧೂರಿಯಾಗಿ ಮದುವೆ ನಡೆಯಲಿದ್ದು ಈಗಾಗಲೇ ತಯಾರಿ ಆರಂಭವಾಗಿದೆ. ಮದುವೆ ಆಮಂತ್ರಣ ಪ್ರತಿಕೆ ಕೂಡ ಸಿದ್ಧವಾಗಿದೆ.
Actor Dhananjay invites cm Siddaramaiah and Ex Cm yediyurappa for his wedding
2/6

ನಟ ಧನಂಜಯ್ ಎರಡು ತಿಂಗಳ ಮುನ್ನ ತಮ್ಮ ಮದುವೆಗೆ ಅತಿಥಿಗಳಿಗೆ ಆಮಂತ್ರಣ ನೀಡಲು ಆರಂಭಿಸಿದ್ದಾರೆ. ನಿನ್ನೆ(ಡಿಸೆಂಬರ್ 16) ಭಾನುವಾರ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮದುವೆ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ.
Actor Dhananjay invites cm Siddaramaiah and Ex Cm yediyurappa for his wedding
3/6

ಅಂಚೆ ಪತ್ರದಂತೆ ಬಂತು ಡಾಲಿ ಮದುವೆ ಇನ್ವಿಟೇಷನ್‌ ಕಾರ್ಡ್‌ ಸಿದ್ಧವಾಗಿದೆ. ಬಂಡೆ ಮಹಾಕಾಳಿ ದೇವಿಯ ಆಶೀರ್ವಾದ ಪಡೆದು ಧನು ಹಾಗೂ ಧನ್ಯತಾ ಮದುವೆ ಕಾರ್ಡ್ ಹಂಚಲು ಆರಂಭಿಸಿದ್ದಾರೆ. ಮೊದಲ ಪತ್ರಿಕೆಯನ್ನು ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರಿಗೆ ಕೊಟ್ಟಿದ್ದಾರೆ.
Actor Dhananjay invites cm Siddaramaiah and Ex Cm yediyurappa for his wedding
4/6

ಆಮಂತ್ರಣ ಪತ್ರಿಕೆ ಸಿದ್ಧವಾಗುತ್ತಿದ್ದಂತೆ ಪೂಜೆ ಮಾಡಿ ದೇವರ ಆಶೀರ್ವಾದ ಪಡೆದು ಹಂಚಲು ಶುರು ಮಾಡಿದ್ದಾರೆ. ಶೀಘ್ರದಲ್ಲೇ ಹೆಚ್‌ಡಿಡಿ ಮನೆಗೂ ಭೇಟಿ ನೋಡಿ ಮದುವೆ ಆಮಂತ್ರಣ ನೀಡಲು ಧನಂಜಯ್ ತೀರ್ಮಾನಿಸಿದ್ದಾರೆ.
Actor Dhananjay invites cm Siddaramaiah and Ex Cm yediyurappa for his wedding
5/6

ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಧನಂಜಯ್- ಧನ್ಯತಾ ಮದುವೆ ನಡೆಯಲಿದೆ. ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರು ಈ ಸಂಭ್ರಮದಲ್ಲಿ ಭಾಗಿ ಆಗಲಿದ್ದಾರೆ. ಫೆಬ್ರವರಿ 15ರಂದು ಆರತಕ್ಷತೆ, 16ರಂದು ಮಾಂಗಲ್ಯಧಾರಣೆ ನೆರವೇರಲಿದೆ.
Actor Dhananjay invites cm Siddaramaiah and Ex Cm yediyurappa for his wedding
6/6

ಧನಂಜಯ್ ಕೈ ಹಿಡಿಯಲಿರುವ ಧನ್ಯತಾ ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಧನಂಜಯ್ ಹಾಗೂ ಧನ್ಯತಾ ಇಬ್ಬರೂ ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದ್ದರು. ಅದೇ ಸಮಯದಲ್ಲಿ ಆಗಿದ್ದ ಪರಿಚಯ, ಬಳಿಕ ಸ್ನೇಹಕ್ಕೆ ತಿರುಗಿತ್ತು. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ಮದುವೆ ಆಗುತ್ತಿದ್ದಾರೆ.
X