By
Kannada Filmibeat Photos
| Published: Wednesday, December 18, 2024, 14:54 [IST]
ನಟ ಶಿವರಾಜ್‌ಕುಮಾರ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೀಘ್ರದಲ್ಲೇ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಇಂದು ರಾತ್ರಿಯೇ ಶಿವಣ್ಣ ಪತ್ನಿ ಹಾಗೂ ಮಗಳು ನಿವೇದಿತಾ ಜೊತೆ ವಿದೇಶದ ವಿಮಾನ ಏರುತ್ತಿದ್ದಾರೆ. ಶಿವಣ್ಣ ಆದಷ್ಟು ಬೇಗ ಚೇತರಿಸಿಕೊಳ್ಳಬೇಕು ಎಂದು ಅಭಿಮಾನಿಗಳು, ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಇಂದು ನಟರಾದ ವಿನೋದ್ ರಾಜ್, ಸುದೀಪ್ ನಾಗವಾರದ ಶಿವಣ್ಣ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ.
1/6
ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟ ಶಿವಣ್ಣ, ಆಪ್ತರ ಶುಭ ಹಾರೈಕೆ | Shivarajkumar To Head To US For Surgery; Sudeep And Many Celebs Wish The Actor A Speedy Recovery - Filmibeat Kannada
/photos/kannada-events/shivarajkumar-to-head-to-us-for-surgery-sudeep-and-many-celebs-wish-the-actor-a-speedy-recovery-fb99032.html
'ಭೈರತಿ ರಣಗಲ್' ಸಿನಿಮಾ ಪ್ರಚಾರದ ವೇಳೆ ನಟ ಶಿವರಾಜ್‌ಕುಮಾರ್ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ನಾಲ್ಕು ಹಂತಗಳಲ್ಲಿ ಶಿವಣ್ಣನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಸಮಯ ನಿಗದಿಯಾಗಿದೆ.
2/6
ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟ ಶಿವಣ್ಣ, ಆಪ್ತರ ಶುಭ ಹಾರೈಕೆ | Shivarajkumar To Head To US For Surgery; Sudeep And Many Celebs Wish The Actor A Speedy Recovery - Filmibeat Kannada
/photos/kannada-events/shivarajkumar-to-head-to-us-for-surgery-sudeep-and-many-celebs-wish-the-actor-a-speedy-recovery-fb99032.html#photos-1
ಇದೇ ತಿಂಗಳ 24ರಂದು ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಟ ಶಿವರಾಜ್‌ಕುಮಾರ್‌ಗೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ. ಆದಷ್ಟು ಬೇಗ ಶಿವಣ್ಣ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಇನ್ನು ವಾರಕ್ಕೂ ಮುನ್ನ ಸೆಂಚುರಿ ಸ್ಟಾರ್ ಬೆಂಹಗಳೂರಿನಿಂದ ಅಮೆರಿಕಾಗೆ ಹೊರಟು ನಿಂತಿದ್ದಾರೆ.
3/6
ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟ ಶಿವಣ್ಣ, ಆಪ್ತರ ಶುಭ ಹಾರೈಕೆ | Shivarajkumar To Head To US For Surgery; Sudeep And Many Celebs Wish The Actor A Speedy Recovery - Filmibeat Kannada
/photos/kannada-events/shivarajkumar-to-head-to-us-for-surgery-sudeep-and-many-celebs-wish-the-actor-a-speedy-recovery-fb99032.html#photos-2
ಶಸ್ತ್ರ ಚಿಕಿತ್ಸೆಗಾಗಿ ಇಂದು(ಡಿಸೆಂಬರ್ 18) ರಾತ್ರಿ 8. 30ಕ್ಕೆ ಶಿವಣ್ಣ ಅಮೆರಿಕಾಗೆ ಹೊರಡಲಿದ್ದಾರೆ. ಬಳಿಕ ಅಲ್ಲಿ ವಿವಿಧ ಆರೋಗ್ಯ ತಪಾಸಣೆಗಳು ನಡೆಯಲಿದೆ. ನಂತರ ಶಸ್ತ್ರ ಚಿಕಿತ್ಸೆ ಆಗಲಿದೆ. ಇನ್ನು ಶಿವಣ್ಣನ ಮನೆಗೆ ಇಂದು ನಟರಾದ ಕಿಚ್ಚ ಸುದೀಪ್, ವಿನೋದ್ ರಾಜ್ ಭೇಟಿ ನೀಡಿದ್ದಾರೆ.
4/6
ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟ ಶಿವಣ್ಣ, ಆಪ್ತರ ಶುಭ ಹಾರೈಕೆ | Shivarajkumar To Head To US For Surgery; Sudeep And Many Celebs Wish The Actor A Speedy Recovery - Filmibeat Kannada
/photos/kannada-events/shivarajkumar-to-head-to-us-for-surgery-sudeep-and-many-celebs-wish-the-actor-a-speedy-recovery-fb99032.html#photos-3
ಅಮೆರಿಕಾಗೆ ಹೊರಟಿರುವ ಶಿವಣ್ಣ ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದು ಸುದೀಪ್ ಶುಭ ಹಾರೈಸಿದ್ದಾರೆ. ಇಬ್ಬರ ಅಪ್ಪುಗೆಯ ಫೋಟೊ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಜೊತೆ ನಿರ್ಮಾಪಕ ಕಾರ್ತಿಕ್ ಗೌಡ ಕೂಡ ಶ್ರೀಮುತ್ತು ನಿವಾಸಕ್ಕೆ ಹೋಗಿರುವುದನ್ನು ನೋಡಬಹುದು.
5/6
ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟ ಶಿವಣ್ಣ, ಆಪ್ತರ ಶುಭ ಹಾರೈಕೆ | Shivarajkumar To Head To US For Surgery; Sudeep And Many Celebs Wish The Actor A Speedy Recovery - Filmibeat Kannada
/photos/kannada-events/shivarajkumar-to-head-to-us-for-surgery-sudeep-and-many-celebs-wish-the-actor-a-speedy-recovery-fb99032.html#photos-4
ಭಾವ ಶಿವರಾಜ್‌ಕುಮಾರ್‌ಗೆ ಮಧು ಬಂಗಾರಪ್ಪ ಜೊತೆಯಾಗಿ ನಿಂತಿದ್ದಾರೆ. ಇನ್ನು ಮಾಜಿ ಸಚಿವ ಬಿ. ಸಿ ಪಾಟೀಲ್ ಕೂಡ ಸೆಂಚುರಿ ಸ್ಟಾರ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
6/6
ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟ ಶಿವಣ್ಣ, ಆಪ್ತರ ಶುಭ ಹಾರೈಕೆ | Shivarajkumar To Head To US For Surgery; Sudeep And Many Celebs Wish The Actor A Speedy Recovery - Filmibeat Kannada
/photos/kannada-events/shivarajkumar-to-head-to-us-for-surgery-sudeep-and-many-celebs-wish-the-actor-a-speedy-recovery-fb99032.html#photos-5
ಶಿವಣ್ಣ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ 'ಭೈರತಿ ರಣಗಲ್' ಸಿನಿಮಾ ಮಾಡಿ ಗೆದ್ದಿದ್ದಾರೆ. ಮುಂದೆ '45' ಸಿನಿಮಾ ಬಿಡುಗಡೆ ಆಗಬೇಕಿದೆ. ಇತ್ತೀಚೆಗೆ ಡಬ್ಬಿಂಗ್ ಸಹ ಮುಗಿಸಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದಂತೆ 'A ಫಾರ್ ಆನಂದ್', 'ಉತ್ತರಕಾಂಡ', 'ಭೈರವನ ಕೊನೆ ಪಾಠ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.