bredcrumb

ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!

By Shiddalingesh S
| Published: Friday, September 9, 2022, 16:38 [IST]
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
1/9

ಸಾಕ್ಷಾತ್ ಪರಮಾತ್ಮನಂತೆ ಅವರನ್ನು ಇಂದಿಗೂ ಆರಾಧಿಸುತ್ತಲೇ ಬಂದಿದ್ದಾರೆ. ಇದೀಗ ಅದೇ ಪರಮಾತ್ಮನ ದರ್ಶನವಾಗಿದೆ. ಅದೂ 'ಲಕ್ಕಿ ಮ್ಯಾನ್' ಸಿನಿಮಾ ಮೂಲಕ ಅಪ್ಪು ಅಭಿಮಾನಿಗಳ ಮುಂದೆ ಬಂದಿದ್ದಾರೆ.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
2/9

ಕಥೆ ವೇರಿ ಸಿಂಪಲ್. ನಾವು ಏನೇ ತಪ್ಪು ಮಾಡಿದ್ರೂ ಕೊನೆಗೆ ದೂರೋದು ದೇವರನ್ನೇ.. ನೀನೇ ಇದಕ್ಕೆಲ್ಲಾ ಕಾರಣ ಅಂತಾ ಹೇಳಿ ಬಿಡುತ್ತೇವೆ. ಆದರೆ, ಅದೇ ದೇವರು ನಿಮ್ಮ ಲೈಫ್‌ನಲ್ಲಿ ಮತ್ತೆ ಸೆಕೆಂಡ್ ಚಾನ್ಸ್ ಕೊಟ್ರೆ ಏನ್ ಮಾಡ್ತೀರಾ..? ಅನ್ನೋದೆ ಈ ಸಿನಿಮಾದ ಒನ್‌ ಲೈನ್ ಸ್ಟೋರಿ.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
3/9

ಪ್ರೀತಿ, ಪ್ರೇಮ, ಸ್ನೇಹ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಇಂದಿನ ಯುವಕರ ಒದ್ದಾಟ, ಪೀಕಲಾಟ, ತೊಳಲಾಟ, ಎಲ್ಲವನ್ನೂ ನಿರ್ದೇಶಕ ನಾಗೇಂದ್ರ ಪ್ರಸಾದ್ ಬ್ಯೂಟಿಫುಲ್ ಆಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
4/9

ಅರ್ಜುನ್ ನಾಗಪ್ಪ ಆಗಿ ಕೃಷ್ಣ ಅದ್ಭುತವಾಗಿ ನಟಿಸಿದ್ದಾರೆ. ತುಂಟ, ಉಡಾಫೆ ಹುಡುಗನಾಗಿ, ಪ್ರೀತಿಗಾಗಿ ಒದ್ದಾಡುವ ಪ್ರೇಮಿಯಾಗಿ  ಕೃಷ್ಣ ಅಭಿಮಾನಿಗಳ ಮನಸ್ಸು ಕದಿಯುತ್ತಾರೆ.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
5/9

ಇಷ್ಟೆಲ್ಲಾ ಪ್ಲಸ್ ಪಾಯಿಂಟ್ ಇದ್ದರೂ, ಚಿತ್ರದಲ್ಲಿ ನ್ಯೂನತೆಗಳು  ಇಲ್ವಾ ಅನ್ನೋ ಹಾಗಿಲ್ಲಾ. ಈ ಚಿತ್ರದಲ್ಲಿ ಒಂದಷ್ಟು ಪಾತ್ರಗಳ ಆಯ್ಕೆಯಲ್ಲಿ ನಿರ್ದೇಶಕರು ಇನ್ನೂ ಜಾಣ್ಮೆಯನ್ನು ತೊರಬಹುದಿತ್ತು. ಅನು ಮದುವೆ ಆಗಲು ಬರುವ ಮ್ಯಾಥೀವ್ ಪಾತ್ರಕ್ಕೆ ಒಳ್ಳೆಯ ನಟನನ್ನು ಆಯ್ಕೆ ಮಾಡಿಕೊಳ್ಬಹುದಿತ್ತು.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
6/9

ನಾಯಕ ಅರ್ಜುನ್, ಕೊಂಚ ಉಡಾಫೆ ಹುಡುಗ. ತನ್ನ ಬಾಲ್ಯದ ಗೆಳತಿ ಅನು ಮದುವೆಯಾಗ್ತೀಯಾ ಅಂತಾ ಕೇಳಿದಕ್ಕೆ ಹಿಂದೆ ಮುಂದೆ ನೋಡದೆ ಮದುವೆಗೆ ಒಪ್ಪಿ ಮದುವೆ ಆಗ್ತಾನೆ.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
7/9

ಪರಮಾತ್ಮನಿಂದ ನಾಯಕ ತನ್ನ ಲೈಫ್ ಅನ್ನ ಸರಿ ಪಡಿಸಿಕೊಳ್ಳಲು ಎರಡನೇ ಚಾಲ್ಸ್ ಸಿಗುತ್ತೆ. ಆ ಎರಡನೇ ಛಾನ್ಸ್‌ನಲ್ಲಿ ನಾಯಕ ತನ್ನ ಬದುಕನ್ನು ಸರಿ ಪಡಿಸಿಕೊಳ್ತಾನಾ..? ಅರ್ಜುನ್ ಹಾಗೂ ಅನು ಒಂದಾಗ್ತಾರಾ ? ಇಲ್ಲಾ ಅರ್ಜುನ್ ಮೀರಾ ಜೊತೆ ಹೋಗ್ತಾನಾ ? ಅನ್ನೋದು ಥಿಯೇಟರ್‌ನಲ್ಲಿಯೇ ನೋಡಬೇಕು.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
8/9

'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅಪ್ಪುನ ನೋಡ್ತಾ ನೋಡ್ತಾನೆ ಕಣ್ಣ ಹನಿಗಳು ಕೆನ್ನೆಯೊಂದಿಗೆ ಮಾತಿಗಿಳಿದು ಬಿಡ್ತಾವೆ. ಆ ಕ್ರೂರ ವಿಧಿ ಮೇಲೆ ಹಿಡಿ ಶಾಪ ಹಾಕದೆ ಇರಲು ಸಾಧ್ಯವೇ ಇಲ್ಲ.
ನಗಿಸಿ, ಕಣ್ಣೀರು ಹಾಕಿಸಿದ 'ಲಕ್ಕಿ ಮ್ಯಾನ್': ಪರಮಾತ್ಮನ ನೋಡಿ ಪ್ಯಾನ್ಸ್ ಪರವಶ!
9/9

ಅಣ್ಣಾವ್ರ ಮುದ್ದಿನ ಮಗ.. ದೊಡ್ಮನೆಯ ರಾಜಕುಮಾರ.. ಪುನೀತ್ ರಾಜ್ಕುಮಾರ್ ಇನ್ನಿಲ್ಲ ಅನ್ನೋ ಮಾತನ್ನು ಇಂದಿಗೂ ಅರಗಿಸಿಕೊಳ್ಳುದು ಕಷ್ಟ. ಆದರೆ ಅವರಿಲ್ಲ ಅನ್ನೋ ಕೊರಗನ್ನು ಅಭಿಮಾನಿ ದೇವರುಗಳು ಎಂದಿಗೂ ತೋರಿಸಿಕೊಂಡಿಲ್ಲ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+