bredcrumb

'ಯುಐ' ರಿಲೀಸ್ ಹಿಂದೇನೆ ಉಪ್ಪಿ-ರಮ್ಯಾ 17 ವರ್ಷಗಳ ಹಿಂದೆ ನಟಿಸಿದ ಈ ಸಿನಿಮಾ ರಿಲೀಸ್ ಗೆ ರೆಡಿ.

By Kannada Filmibeat Photos
| Published: Friday, December 20, 2024, 18:42 [IST]

ಹಣ ಕಾಸಿನ ಸಮಸ್ಯೆಯಿಂದಾಗ  'ರಕ್ತ ಕಾಶ್ಮೀರ' ಸಿನಿಮಾ 17 ವರ್ಷಗಳ ಹಿಂದೆ ನಿಂತು ಹೋಗಿತ್ತು. ಆಗ ಉಪೇಂದ್ರ ಹಾಗೂ ರಮ್ಯಾ ಇಬ್ಬರೂ ತಮ್ಮ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದರು. ಈ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಆಗ ವೇಳೆ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಅಂತ ಟೈಟಲ್ ಇಟ್ಟು ಸಿನಿಮಾ ಶುರು ಮಾಡಿದ್ದರು. ಆದರೆ, ಹಣಕಾಸಿನ ಸಮಸ್ಯೆಯಿಂದಾಗಿ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಈಗ 'ಯುಐ' ರಿಲೀಸ್ ವೇಳೆ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದೆ.   

Upendra Ramya movie Raktha Kashmira Stills
1/4

ಉಪೇಂದ್ರ ನಟಿಸುತ್ತಿರುವ 'ಯುಐ' ಸಿನಿಮಾ ಹವಾ ಎಬ್ಬಿಸುತ್ತಿರುವ ವೇಳೆನೇ ಮತ್ತೊಂದು ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದುವೇ 'ರಕ್ತ ಕಾಶ್ಮೀರ'. ಸುಮಾರು 17 ವರ್ಷಗಳ ಹಿಂದೆ ಇದೇ ಸಿನಿಮಾ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಹೆಸರಿನಲ್ಲಿ ಸೆಟ್ಟೇರಿತ್ತು. ಅದೇ ಸಿನಿಮಾವೀಗ 'ರಕ್ತ ಕಾಶ್ಮೀರ' ಅಂತ ಟೈಟಲ್ ಬದಲಾಯಿಸಿಕೊಂಡು ರಿಲೀಸ್‌ಗೆ ರೆಡಿಯಾಗಿದೆ.
Upendra Ramya movie Raktha Kashmira Stills
2/4

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮೋಹಕತಾರೆ ರಮ್ಯಾ 'ರಕ್ತ ಕಾಶ್ಮೀರ' ಸಿನಿಮಾದಲ್ಲಿ ನಟಿಸಿದ್ದಾರೆ. ಸುಮಾರು 17 ವರ್ಷಗಳ ಹಿಂದೆ ಈ ಜೋಡಿ ಹೇಗಿದ್ದರು ಅನ್ನೋದನ್ನು ಶೀಘ್ರದಲ್ಲಿಯೇ ಬೆಳ್ಳಿ ಪರೆದೆ ಮೇಲೆ ಕಣ್ತುಂಬಿಕೊಳ್ಳಬಹುದು. ಅಂದ್ಹಾಗೆ ಈ ಸಿನಿಮಾ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾ ಹಂದರವನ್ನು ಹೊಂದಿದೆ.
Upendra Ramya movie Raktha Kashmira Stills
3/4

ಉಗ್ರಗಾಮಿಗಳು ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಬೆಂಗಳೂರಿನಲ್ಲೂ ದಾಳಿ ಮಾಡಿ ಸಾವಿರಾರು ಜನರನ್ನು ಹತ್ತೆ ಮಾಡಿರುವುದನ್ನು ಸಿನಿಮಾ ನಾಯಕ ಹಾಗೂ ನಾಯಕಿ ಖಂಡಿಸುತ್ತಾರೆ. ಹೀಗಾಗಿ ಈ ಕೃತ್ಯದಿಂದ ನೊಂದು ಸಿನಿಮಾ ನಾಯಕ ಹಾಗೂ ನಾಯಕಿ ಬೆಂಗಳೂರಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗುತ್ತಾರೆ. ಅಲ್ಲಿ ಉಗ್ರರನ್ನು ಮಟ್ಟಹಾಕುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Upendra Ramya movie Raktha Kashmira Stills
4/4

ರಕ್ತ ಕಾಶ್ಮೀರ ಸಿನಿಮಾ ತಂಡ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದಾಗಿ ಪದೇ ಪದೆ ಹೇಳುತ್ತಿದೆ. ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರೇ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹಾಗೇ ಸಂಭಾಷಣೆಯನ್ನು ಎಂ.ಎಸ್ ರಮೇಶ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ.
X