bredcrumb

ಧ್ರುವ ಸರ್ಜಾ 'ಕೆಡಿ' ಬೆಡಗಿಯ ಗ್ಲಾಮರಸ್ ಲುಕ್ ಹೇಗಿದೆ ನೋಡಿದ್ದೀರಾ?

By Syed Ameenuddin
| Updated: Friday, December 20, 2024, 08:00 [IST]

ಕೆನಡಾ ಮೂಲದ ನಟಿ ಕಮ್ ಡ್ಯಾನ್ಸರ್ ನೂರಾ ಫತೇಹಿ ಸದ್ಯ ಭಾರತದಲ್ಲಿಯೇ ಸೆಟಲ್ ಆಗಿದ್ದಾರೆ. ಬಾಲಿವುಡ್‌ನ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿರುವ ಈ ಡ್ಯಾನ್ಸ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ ಜೊತೆಗೆ ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನೂ ರಿಲೀಸ್ ಆಗಬೇಕಿರುವ ಧ್ರುವ ಸರ್ಜಾ ಕನ್ನಡ ಸಿನಿಮಾ 'ಕೆಡಿ'ಯಲ್ಲೂ ಹೆಜ್ಜೆ ಹಾಕಿ ಹೋಗಿದ್ದಾರೆ. ಸದ್ಯ ಗ್ಲಾಮರ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೊಗಳು ಕಿಕ್ ಕೊಟ್ಟಿವೆ. 

KD movie actress Nora Fatehi photos
1/4

ಬಾಲಿವುಡ್ ನಟಿ ನೂರಾ ಫತೇಹಿ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್. ಬಿಗ್‌ ಬಜೆಟ್ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ಹೃದಯ ಗೆದ್ದಿದ್ದಾರೆ. ತೆಲುಗಿನ ಮೆಗಾ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ದಕ್ಷಿಣ ಭಾರತದಲ್ಲೂ ಫೇಮಸ್ ಆಗಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಅಭಿಮಾನಿಗಳಿಗಾಗಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
KD movie actress Nora Fatehi photos
2/4

ನೂರಾ ಫತೇಹಿ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲೆದರ್ ಟಾಪ್, ವೈಬ್ರೆಂಟ್ ಟ್ರ್ಯಾಕ್ ಪ್ಯಾಂಟ್ ಹಾಗೂ ಜಾಕೆಟ್ ಧರಿಸಿ ಗ್ಲಾಮರ್ ಲುಕ್ ಕೊಟ್ಟಿದ್ದಾರೆ. ಇದಕ್ಕೆ ಹೊಂದಿಕೊಳ್ಳುವಂತಹ ಜ್ಯುವೆಲರಿ, ಬ್ಲಾಕ್ ಬೂಟ್ ಧರಿಸಿ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಈ ಲುಕ್ ನೋಡಿ ನೆಟ್ಟಿಗರು ಕಳೆದು ಹೋಗಿದ್ದಾರೆ. ನೂರಾ ಗ್ಲಾಮರ್ ಲುಕ್‌ಗೆ ಥ್ರಿಲ್ ಆಗಿದ್ದಾರೆ.
KD movie actress Nora Fatehi photos
3/4

ಅಂದ್ಹಾಗೆ ನೂರಾ ಫತೇಹಿ ಜನಿಸದ್ದು ಕೆನಡಾದ ಟೊರಾಂಟೊದಲ್ಲಿ. ಅಲ್ಲಿಯೇ ಶಿಕ್ಷಣ ಕೂಡ ಪಡೆದಿದ್ದಾರೆ. ಅಲ್ಲಿನ ಯಾರ್ಕ್ ಯುನಿವರ್ಸಿಟಿಯಲ್ಲಿ ನೂರಾ ಫತೇಹಿ ಪೊಲಿಟಿಕಲ್ ಸೈನ್ಸ್ ನಲ್ಲಿ ಪದವಿಯನ್ನು ಪಡೆದಿದ್ದಾರೆ. ಸದ್ಯ ಭಾರತದಲ್ಲಿ ನೆಲೆಸಿರುವ ನೂರಾ ತಮ್ಮ ಸಂದರ್ಶನದಲ್ಲಿ ಕೆನಡಾ ಮೂಲದವರಾಗಿದ್ದರೂ ತಾನು ಭಾರತೀಯಳು ಎಂದು ಹೇಳಿಕೊಳ್ಳುತ್ತಾರೆ.
KD movie actress Nora Fatehi photos
4/4

ತೆಲುಗಿನ ಟೆಂಪರ್, ಬಾಹುಬಲಿ, ಕಿಕ್ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದರು. ಹಿಂದಿ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಹೆಚ್ಚು ಸಿಕ್ಕಿತ್ತು. ಹಾಗೇ ಡ್ಯಾನ್ಸ್ ಶೋ ಝಲಕ್ ದಿಕ್ಲಾಜಾ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಈಗ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳ ಬಹುಬೇಡಿಕೆಯ ನಟಿಯಾಗಿದ್ದಾರೆ.
X