bredcrumb

ಪ್ರೀತಿಲಿ ಬಿದ್ದ ಪರಮಸುಂದ್ರಿ ಕೃತಿ!

By Narayan
| Published: Wednesday, November 20, 2024, 14:23 [IST]

ಬಣ್ಣದಲೋಕದಲ್ಲಿ ಪ್ರೇಮ್ ಕಹಾನಿಗಳಿಗೆ ಬರವಿಲ್ಲ. ಸ್ಟಾರ್ ನಟ, ನಟಿಯರು ಪ್ರೀತಿಲಿ ಮುಳುಗಿ ತೇಲುತ್ತಾರೆ. ಸಾಮಾನ್ಯವಾಗಿ ನಟಿಯರು ಹೆಚ್ಚು ಉದ್ಯಮಿಗಳ ಪ್ರೀತಿಲಿ ಬೀಳುತ್ತಾರೆ. ಬಾಲಿವುಡ್ ನಟಿ ಕೃತಿ ಸನೂನ್ ಕೂಡ ಲವ್ವಿ ಡವ್ವಿ ನಡೆಸ್ತಿದ್ದಾರೆ ಎನ್ನಲಾಗ್ತಿದೆ.

Kriti Sanon wishes rumoured boyfriend Kabir Bahia on his birthday
1/7

ಬಾಲಿವುಡ್ ನಟಿ ಕೃತಿ ಸನೂನ್‌ಗೆ ದೊಡ್ಡ ಬ್ರೇಕ್ ಸಿಗಲೇಯಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿದರೂ ಅದೃಷ್ಟ ಕೈಹಿಡಿಯಲಿಲ್ಲ. ಹಿಂದಿ ಮಾತ್ರವಲ್ಲದೇ ತೆಲುಗು ಚಿತ್ರಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಮಹೇಶ್ ಬಾಬು ಜೊತೆ 'ವನ್ ನೇನೊಕ್ಕಡಿನೆ' ಆಕೆ ನಟಿಸಿದ ಚೊಚ್ಚಲ ಸಿನಿಮಾ.
Kriti Sanon wishes rumoured boyfriend Kabir Bahia on his birthday
2/7

ಬಹಳ ದಿನಗಳಿಂದ ಕೃತಿ ಪ್ರೀತಿಲಿ ಬಿದ್ದಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿತ್ತು. ಉದ್ಯಮಿ ಕಬೀರ್ ಬಹಿಯಾ ಪ್ರೇಮಪಾಶದಲ್ಲಿ ಕೃತಿ ಸಿಲುಕಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿ ಆಗುತ್ತಲೇ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಗುತ್ತಿಲ್ಲ.
Kriti Sanon wishes rumoured boyfriend Kabir Bahia on his birthday
3/7

ಸದ್ಯ ಬೀರ್ ಬಹಿಯಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಕೃತಿ ಸ್ವೀಟ್ ಬರ್ತ್‌ಡೇ ವಿಶ್ ವೈರಲ್ ಆಗುತ್ತಿದೆ. ಇಬ್ಬರ ಲವ್ ಸ್ಟೋರಿ ನಿಜ ಎಂದೇ ಈ ಪೋಸ್ಟ್ ಹೇಳುತ್ತಿದೆ ಎನ್ನುವ ಚರ್ಚೆ ಈಗ ಶುರುವಾಗಿದೆ. ಹ್ಯಾಪಿಯೆಸ್ಟ್ ಬರ್ತ್‌ K!, ಈ ಮುಗ್ಧ ನಗು ಸದಾ ಇರಲಿ ಎಂದು ಕೃತಿ ಬರೆದುಕೊಂಡಿದ್ದಾರೆ.
Kriti Sanon wishes rumoured boyfriend Kabir Bahia on his birthday
4/7

ಕಬೀರ್ ಬಹಿಯಾ ಜೊತೆಗಿನ ಸೆಲ್ಫಿ ಹಂಚಿಕೊಂಡು ಕೃತಿ ವಿಶ್ ಮಾಡಿದ್ದಾರೆ. ಫೋಟೊ ನೋಡಿದವರು ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿರುವುದು ನಿಜ ಎಂದೇ ಕಾಮೆಂಟ್ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಹುಟ್ಟಿ ಬೆಳೆದ ಕೃತಿ ನೋಯ್ಡಾದಲ್ಲಿ ಪದವಿ ಪಡೆದಿದ್ದರು.
Kriti Sanon wishes rumoured boyfriend Kabir Bahia on his birthday
5/7

ನಟನೆ ಆರಂಭಿಸುವ ಮುನ್ನ ಕೃತಿ ಸನೂನ್ ಮಾಡೆಲ್ ಆಗಿ ಗುರ್ತಿಸಿಕೊಂಡಿದ್ದರು. ಬಳಿಕ ಬಣ್ಣದ ಲೋಕಕ್ಕೆ ಬಂದರು. ತೆಲುಗಿನಲ್ಲಿ 'ವನ್ ನೇನೊಕ್ಕಡಿನೆ' ಚಿತ್ರದ ಬಳಿಕ ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 'ದಿಲ್‌ವಾಲೆ', 'ರಾಬ್ತಾ' ಸಿನಿಮಾಗಳಲ್ಲಿ ಮಿಂಚಿದ್ದರು.
Kriti Sanon wishes rumoured boyfriend Kabir Bahia on his birthday
6/7

ನಟಿಯಾಗಿ ಮಾತ್ರವಲ್ಲದೇ ಸ್ಪೆಷಲ್ ಸಾಂಗ್‌ಗಳಲ್ಲಿ ಕೂಡ ಬಿಂದಾಸ್ ಆಗಿ ಕುಣಿದು ಕೃತಿ ಗಮನ ಸೆಳೆದರು. 'ಮಿಮಿ' ಚಿತ್ರದಲ್ಲಿ ಪರಮಸುಂದರಿ ಆಗಿ ಆಕೆ ಮಾಡಿದ ಮೋಡಿ ಪ್ರೇಕ್ಷಕರು ಮರೆತ್ತಿಲ್ಲ. ಆ ಚಿತ್ರಕ್ಕೆ ತಕ್ಕ ಮಟ್ಟಿಗೆ ಸಕ್ಸಸ್ ಕಂಡಿತ್ತು.
Kriti Sanon wishes rumoured boyfriend Kabir Bahia on his birthday
7/7

'ಆದಿಪುರುಷ್' ಚಿತ್ರದಲ್ಲಿ ಸೀತಾಮಾತೆಯಾಗಿ ನಟಿಸುವ ಅವಕಾಶ ಕೃತಿಗೆ ಸಿಕ್ಕಿತ್ತು. ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದರು. ಚಿತ್ರ ಒಂದಷ್ಟು ಟೀಕೆಗೆ ಗುರಿಯಾಗಿತ್ತು. ಆದರೆ ಸೀತಾ ಪಾತ್ರದಲ್ಲಿ ದೆಹಲಿ ಬೆಡಗಿ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
X