bredcrumb

ನಟ ಕಾಳಿದಾಸ್ ಜಯರಾಮ್- ತಾರಿಣಿ ಮದುವೆ ಚಿತ್ರಗಳು

By Kannada Filmibeat Photos
| Published: Monday, December 9, 2024, 16:53 [IST]

ಮಲಯಾಳಂ ನಟ ಜಯರಾಮ್ ಪುತ್ರ ಕಾಳಿದಾಸ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮಾಡೆಲ್ ತಾರಿಣಿ ಕಾಳಿಂಗರಾಯರ್ ಜೊತೆ ಕಾಳಿದಾಸ್ ಹಸೆಮಣೆ ಏರಿದ್ದಾರೆ. ಇತ್ತೀಚೆಗೆ ಕೇರಳದ ಗುರುವಾಯೂರಿನ ಕೃಷ್ಣ ದೇವಸ್ಥಾನದಲ್ಲಿ ಬಹಳ ಶಾಸ್ತ್ರೋಕ್ತವಾಗಿ ವಿವಾಹ ಮಹೋತ್ಸ ನೆರವೇರಿದೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. ಪೀಚ್ ಕಲರ್ ಸೀರೆಯಲ್ಲಿ ತಾರಿಣಿ ಮದುಮಗಳಾಗಿ ಮಿಂಚಿದ್ದಾರೆ. ಅದಕ್ಕೆ ಗೋಲ್ಡನ್ ಕಲರ್ ಎಂಬ್ರಾಯಡರಿ ಇದೆ. ಚಿನ್ನಾಭರಣ ಧರಿಸಿ ಮಲ್ಲಿಗೆ ಮುಡಿದು ಆಕೆ ಸಂಭ್ರಮಿಸಿದ್ದಾರೆ. ಇನ್ನು ಕೆಂಪು ಬಣ್ಣದ ಕಚ್ಚೆ ಪಂಚೆ ಹಾಗೂ ಶಲ್ಯ ತೊಟ್ಟು ಕಾಳಿದಾಸ್ ಕಾಣಿಸಿಕೊಂಡಿದ್ದಾರೆ. ಮಗನ ಮದುವೆ ಸಂಭ್ರಮದಲ್ಲಿ ಹಿರಿಯ ನಟ ಜಯರಾಮ್ ಭಾವುಕರಾಗಿದ್ದಾರೆ. ಆ ಸುಂದರ ಕ್ಷಣಗಳ ಫೊಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಗುರುವಾಯೂರಿನ ದೇವಸ್ಥಾನದಲ್ಲಿ ಕಾಳಿದಾಸ್ ಹಾಗೂ ತಾರಿಣಿ ಮದುವೆ ನಡೆದಿದೆ.
1/4

ಗುರುವಾಯೂರಿನ ದೇವಸ್ಥಾನದಲ್ಲಿ ಕಾಳಿದಾಸ್ ಹಾಗೂ ತಾರಿಣಿ ಮದುವೆ ನಡೆದಿದೆ. ಇನ್ನು ವೆಡ್ಡಿಂಗ್ ಫೋಟೊಶೂಟ್‌ನಲ್ಲಿ ನವ ವಧುವರರು ಮಿಂಚಿದ್ದಾರೆ. ಮದುವೆಗೆ ಕುಟುಂಬದ ಆಪ್ತರು, ಚಿತ್ರರಂಗದ ಕೆಲವರು ಭಾಗಿ ಆಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಐದು ವರ್ಷಗಳಿಂದ ಕಾಳಿದಾಸ್ ಹಾಗೂ ತಾರಿಣಿ ಡೇಟಿಂಗ್ ಮಾಡುತ್ತಿದ್ದರು. ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿದೆ.
2/4

ಐದು ವರ್ಷಗಳಿಂದ ಕಾಳಿದಾಸ್ ಹಾಗೂ ತಾರಿಣಿ ಡೇಟಿಂಗ್ ಮಾಡುತ್ತಿದ್ದರು. ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿದೆ. ಇನ್ನು ಸೀರೆಯಲ್ಲಿ ತಾರಿಣಿ, ಕಚ್ಚೆ ಪಂಚೆಯಲ್ಲಿ ಕಾಳಿದಾಸ್ ಮದುವೆ ಶಾಸ್ತ್ರದಲ್ಲಿ ಭಾಗಿ ಆಗಿದ್ದಾರೆ. ಹೂವಿನ ಹಾರಗಳನ್ನು ಬದಲಿಸಿಕೊಂಡು ಖುಷಿಯಾಗಿದ್ದಾರೆ.
ಕೆಲವೇ ಆಪ್ತರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಕೇಂದ್ರ ಸಚಿವ, ಮಲಯಾಳಂ ನಟ ಸುರೇಶ್ ಗೋಪಿ ಕೂಡ ಮದುವೆಗೆ ಹಾಜರಾಗಿ ಜೋಡಿಗೆ ಶುಭ ಹಾರೈಸಿದ್ದಾರೆ.
3/4

ಕೆಲವೇ ಆಪ್ತರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಕೇಂದ್ರ ಸಚಿವ, ಮಲಯಾಳಂ ನಟ ಸುರೇಶ್ ಗೋಪಿ ಕೂಡ ಮದುವೆಗೆ ಹಾಜರಾಗಿ ಜೋಡಿಗೆ ಶುಭ ಹಾರೈಸಿದ್ದಾರೆ.
ಮಗನ ಮದುವೆ ಸಂಭ್ರಮದಲ್ಲಿ ನಟ ಜಯರಾಮ್ ಭಾವುರಾಗಿದ್ದಾರೆ. ಜಯರಾಮ್ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
4/4

ಮಗನ ಮದುವೆ ಸಂಭ್ರಮದಲ್ಲಿ ನಟ ಜಯರಾಮ್ ಭಾವುರಾಗಿದ್ದಾರೆ. ಜಯರಾಮ್ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.
X