bredcrumb

ಬ್ಲೇಜರ್‌ನಲ್ಲಿ ಮಿರ ಮಿರ ಮಿಂಚಿದ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್...!

By Kannada Filmibeat Photos
| Published: Monday, December 16, 2024, 18:32 [IST]

ವಿಶ್ವ ಸುಂದರಿ ಕಿರೀಟವನ್ನ ಮುಡಿಗೇರಿಸಿಕೊಂಡು ಆ ನಂತರ ಸೀದಾ ಬಾಲಿವುಡ್‌ಗೆ ಬಂದವರಲ್ಲಿ ಮಾನುಷಿ ಚಿಲ್ಲರ್ ಕೂಡ ಒಬ್ಬರು. ಆದರೆ ಐಶ್ವರ್ಯ ರೈ ಮತ್ತು ಪ್ರಿಯಾಂಕ ಚೋಪ್ರಾ ಅವರನ್ನ ಹೊತ್ತು ಮೆರೆಸಿದ ಜನ ಇವರನ್ನ ಮೆರೆಸಲಿಲ್ಲ. ಅವರಿಗೆ ಸಿಕ್ಕ ಗೆಲುವು ಇವರಿಗೆ ಸಿಗಲಿಲ್ಲ. ಹಾಗಂಥ ಮಾನುಷಿ ಚಿಲ್ಲರ್ ಜನಪ್ರಿಯತೆ ಕುಂದಿಲ್ಲ. ಇವತ್ತು ಕೂಡ ಮಾನುಷಿಗೆ ಬೇಡಿಕೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮಾನುಷಿ ಚಿಲ್ಲರ್ ಮೊನ್ನೆ ಜೈಪುರದ ಇವೆಂಟ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸ್ಟೈಲ್ ಮತ್ತು ಸ್ಮೈಲ್ ಮೂಲಕ ಎಲ್ಲರ ಕಣ್ಮನ ಸೆಳೆದಿದ್ದಾರೆ. 

Manushi Chhillar
1/5

ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಮಾನುಷಿ ಚಿಲ್ಲರ್, ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈನ್ ಹ್ಯೂಡ್ ಬ್ಲೇಜರ್ ಧರಿಸಿ ಮಿಂಚಿದ್ದಾರೆ. ಕಪ್ಪು ಲೇಸ್ ಬ್ರ್ಯಾಲೆಟ್‌ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಮಾನುಷಿ ಚಿಲ್ಲರ್ ಅವರ ಲುಕ್ ಸದ್ಯ ಅನೇಕರಿಗೆ ಕಿಕ್ ಕೊಡುತ್ತಿದೆ.
Manushi Chhillar
2/5

ಇನ್ನು ಮೇಕಪ್‌ಗೆ ಜಾಸ್ತಿ ಒತ್ತು ನೀಡದೇ ಸರಳವಾದ ಮೇಕಪ್ ಮೂಲಕ ವೇದಿಕೆಯಲ್ಲಿ ಮಿಂಚು ಹರಿಸಿದ ಮಾನುಷಿ ಚಿಲ್ಲರ್ ತಮ್ಮ ಸಹಜ ಸೌಂದರ್ಯದಿಂದ ನೆರೆದವರನ್ನು ಮಂತ್ರಮುಗ್ದಗೊಳಿಸಿದ್ದಾರೆ.
Manushi Chhillar
3/5

ದೊಡ್ಡ ಗಾತ್ರದ ಬ್ಲೇಜರ್‌ಗೆ ತಕ್ಕಂತೆ ಮಾನುಷಿ ಚಿಲ್ಲರ್ ಮಾಡಿಕೊಂಡ ಕೇಶ ವಿನ್ಯಾಸ ಕೂಡ ಅನೇಕರ ಗಮನ ಸೆಳೆಯುತ್ತಿದೆ. ಫ್ಯಾಷನ್ ಪ್ರಪಂಚದಲ್ಲಿ ಮಾನುಷಿ ಚಿಲ್ಲರ್ ಅವರ ಈ ಅವತಾರದ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
Manushi Chhillar
4/5

ಅಂದ್ಹಾಗೇ ಮಾನುಷಿ ಚಿಲ್ಲರ್ ಕೇವಲ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಅಲ್ಲದೇ ಅಕ್ಷಯ್ ಕುಮಾರ್ ಜೊತೆ ಬಡೇ ಮಿಯಾ ಚೋಟೆ ಮಿಯಾದಲ್ಲಿ ಕೂಡ ತೆರೆ ಹಂಚಿಕೊಂಡಿದ್ದರು. ಇನ್ನು ವರುಣ್ ತೇಜ್ ಜೊತೆ ಆಪರೇಷನ್ ವ್ಯಾಲೆಂಟೈನ್ ಚಿತ್ರದಲ್ಲಿ ಕೂಡ ಮಾನುಷಿ ಅಭಿನಯಿಸಿದ್ದರು
Manushi Chhillar
5/5

ಇನ್ನು ವ್ಯೆಯಕ್ತಿಕ ಜೀವನದ ವಿಚಾರಕ್ಕೆ ಬಂದರೆ ಮಾನುಷಿ ಚಿಲ್ಲರ್ ಸದ್ಯ ವೀರ್ ಪಹಾರಿಯಾ ಜೊತೆ ಸುತ್ತಾಡುತ್ತಿದ್ದಾರೆ. ಈ ವೀರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಅನ್ನುವುದು ಒಂದು ವಿಶೇಷವಾದರೆ ವೀರ್ ಪಹಾರಿಯಾ ಸಾರಾ ಅಲಿ ಖಾನ್ ಅವರ ಮಾಜಿ ಪ್ರಿಯಕರ ಎನ್ನುವುದು ಇನ್ನೊಂದು ವಿಶೇಷ.
X