bredcrumb

ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಹಿನ್ನೆಲೆ, ಬ್ಯುಸಿನೆಸ್

By Umesh M
| Published: Sunday, December 15, 2024, 12:17 [IST]

ಸ್ಟಾರ್ ನಟರ ಮಡದಿಯರು ಕೂಡ ಉದ್ಯಮ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡು ಸದ್ದು ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕೆಲವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ತೆಲುಗು ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಬಂಧನದ ವೇಳೆ ಪತ್ನಿ ಸ್ನೇಹಾ ಕಣ್ಣೀರಾಗಿದ್ದರು. ಹಾಗಾಗಿ ಮತ್ತೊಮ್ಮೆ ಆಕೆಯ ಬಗ್ಗೆ ಚರ್ಚೆ ಶುರುವಾಗಿದೆ.

Meet Sneha reddy, actor Allu Arjun's wife, a successful businesswoman
1/5

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಸ್ನೇಹಾ ರೆಡ್ಡಿ ಮುಂದೆ ಅಲ್ಲು ಅರ್ಜುನ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಬಹಳ ಸುಶಿಕ್ಷಿತ ಪ್ರಭಾವಿ ಕುಟುಂಬದಲ್ಲಿ ಸ್ನೇಹಾ ಹುಟ್ಟಿದವರು. ತಂದೆ ಕಂಚೆರ್ಲ ಚಂದ್ರಶೇಖರ್ ರೆಡ್ಡಿ ಉದ್ಯಮಿ. SCIENT ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರು ಆಗಿದ್ದಾರೆ. ಸ್ನೇಹಾ ಪ್ರತಿಷ್ಠಿತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) ಉನ್ನತ ಶಿಕ್ಷಣ ಪೂರೈಸಿದರು. ಎಲೆಕ್ಟ್ರಾನಿಕ್ಸ್ &ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Meet Sneha reddy, actor Allu Arjun's wife, a successful businesswoman
2/5

ಅಮೇರಿಕಾದಲ್ಲಿ ಒಮ್ಮೆ ಸ್ನೇಹಿತರ ಮದುವೆ ಸಮಾರಂಭದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಸ್ನೇಹಾ ಭೇಟಿ ಮಾಡಿದ್ದರು. ಬಳಿಕ ಆ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಸಲು ಆರಂಭಿಸಿದ್ದರು. 2010ರಲ್ಲಿ ಎಂಗೇಜ್ ಆಗಿದ್ದ ಜೋಡಿ ಮರುವರ್ಷ ಮದುವೆ ಆಗಿದ್ದರು. ದಂಪತಿಗೆ ಅಲ್ಲು ಅರ್ಹಾ ಎಂಬ ಮಗಳು, ಅಲ್ಲು ಅಯಾನ್ ಎಂಬ ಮಗನೂ ಇದ್ದಾರೆ.
Meet Sneha reddy, actor Allu Arjun's wife, a successful businesswoman
3/5

ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಾ ರೆಡ್ಡಿ ಬಹಳ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 90 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಆಗಾಗ್ಗೆ ಕಲರ್‌ಫುಲ್ ಫೋಟೊಶೂಟ್‌ ಮಾಡಿ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ನೀವು ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಎಂದು ಕಾಮೆಂಟ್ ಮಾಡುತ್ತಿರುತ್ತಾರೆ. ತಮ್ಮ ವೈಯಕ್ತಿಕ ಜೀವನದ ಸುಂದರ ಕ್ಷಣಗಳ ಫೋಟೊ, ವೀಡಿಯೋ ಸಹ ಸ್ನೇಹಾ ಪೋಸ್ಟ್ ಮಾಡುತ್ತಾರೆ.
Meet Sneha reddy, actor Allu Arjun's wife, a successful businesswoman
4/5

ಉದ್ಯಮ ಕ್ಷೇತ್ರದಲ್ಲಿ ಕೂಡ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ತೊಡಗಿಸಿಕೊಂಡಿದ್ದಾರೆ. ಜುಬಿಲಿ ಹಿಲ್ಸ್‌ನಲ್ಲಿರುವ ಆನ್‌ಲೈನ್ ಫೋಟೋ ಸ್ಟುಡಿಯೋ ಪಿಕಾಬೂ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸ್ಟುಡಿಯೋ ಅತ್ಯುತ್ತಮ ಗುಣಮಟ್ಟದ ಫೋಟೊಗ್ರಫಿ ಸೇವೆ ಒದಗಿಸುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ಸಹ ಬೆಂಬಲವಾಗಿ ನಿಂತಿದ್ದಾರೆ. ಈ ಬಗ್ಗೆ ಪ್ರಚಾರ ಮಾಡುತ್ತಿರುತ್ತಾರೆ.
Meet Sneha reddy, actor Allu Arjun's wife, a successful businesswoman
5/5

ಸ್ನೇಹಾ ರೆಡ್ಡಿ ತಮ್ಮ ಶಿಕ್ಷಣ ಮುಗಿಸಿದ ಬಳಿಕ ಅಮೇರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಬಳಿಕ ಭಾರತಕ್ಕೆ ಬಂದು ತಮ್ಮ ತಂದೆಯ ಶಿಕ್ಷಣ ಸಂಸ್ಥೆಯಾದ SCIENT ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಒಂದು ವಿಭಾಗದ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡರು.
X