bredcrumb

ಮೊದಲ ಚಿತ್ರಕ್ಕೆ ಮಿಲನಾ ಸಂಭಾವನೆ ಎಷ್ಟು?

By Narayan
| Published: Friday, November 22, 2024, 16:22 [IST]

ಹಾಸನದ ಹುಡುಗಿ ಮಿಲನಾ ನಾಗರಾಜ್ ಕನ್ನಡ ಸಿನಿಮಾಗಳಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಒಂದಕ್ಕಿಂತ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ಕೃಷ್ಣ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಿಲನಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾ ಸಂಭಾವನೆ ಬಗ್ಗೆ ಆಕೆ ಮಾತನಾಡಿದ್ದಾರೆ.

Milana Nagaraj reveals her first remuneration for debut movie
1/7

'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ಮೂಲಕ ನಟಿ ಮಿಲನಾ ನಾಗರಾಜ್ ಕನ್ನಡ ಸಿನಿರಸಿಕರಿಗೆ ಪರಿಚಿತರಾದರು. ಬಳಿಕ 'ಬೃಂದಾವನ', 'ಚಾರ್ಲಿ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದರು. 'ಲವ್ ಮಾಕ್ಟೆಲ್' ಸಿನಿಮಾ ಹಿಟ್ ಆಗಿತ್ತು.
Milana Nagaraj reveals her first remuneration for debut movie
2/7

'ಲವ್ ಮಾಕ್ಟೆಲ್' ಸಕ್ಸಸ್ ಬೆನ್ನಲ್ಲೇ ಕೃಷ್ಣ- ಮಿಲನಾ ಮದುವೆ ಆಗಿದ್ದರು. ಆ ಚಿತ್ರಕ್ಕೆ ಇಬ್ಬರೂ ನಿರ್ಮಾಪಕರಾಗಿದ್ದರು. ಸ್ವತಃ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಸ್ಕ್ರಿಪ್ಟ್, ಶೂಟಿಂಗ್ ಎಲ್ಲದರಲ್ಲೂ ಮಿಲನಾ ಸಹಕಾರ ಇತ್ತು. ನಿರ್ಮಾಪಕರಾಗಿಯೂ ಇಬ್ಬರೂ ಗೆದ್ದರು.
Milana Nagaraj reveals her first remuneration for debut movie
3/7

ನಿಧಿ ಹಾಗೂ ಆದಿ ಪಾತ್ರಗಳಲ್ಲಿ ಮಿಲನಾ ಹಾಗೂ ಕೃಷ್ಣ ನಟನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಬಳಿಕ ಚಿತ್ರದ ಸೀಕ್ವೆಲ್ ಕೂಡ ಬಂದು ಗೆದ್ದಿತ್ತು. ಮದುವೆ ಬಳಿಕ ಕೂಡ ಮಿಲನಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Milana Nagaraj reveals her first remuneration for debut movie
4/7

ಈ ವಾರ ಬಿಡುಗಡೆ ಆಗಿರುವ 'ಆರಾಮ್ ಅರವಿಂದ್ ಸ್ವಾಮಿ' ಚಿತ್ರದಲ್ಲಿ ಕೂಡ ಮಿಲನಾ ನಟಿಸಿದ್ದಾರೆ. ಕಳೆದ ವರ್ಷ ಬಂದ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾ ಕೂಡ ಸಕ್ಸಸ್ ಕಂಡಿತ್ತು. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಿಲನಾ ಭಾಗವಹಿಸಿ ಮಾತನಾಡಿದ್ದಾರೆ.
Milana Nagaraj reveals her first remuneration for debut movie
5/7

ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಿಲನಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಬಗ್ಗೆಯೂ ಹೇಳಿದ್ದಾರೆ. 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರಕ್ಕೆ 3 ಲಕ್ಷ ರೂ. ಸಂಭಾವನೆ ಪಡೆದಿದ್ದಾಗಿ ಹೇಳಿದ್ದಾರೆ.
Milana Nagaraj reveals her first remuneration for debut movie
6/7

ಮಗಳಿಗೆ ಎರಡು ತಿಂಗಳು ತುಂಬುತ್ತಾ ಬರ್ತಿದೆ. ಮಗಳ ಲಾಲನೆ ಪಾಲನೆ ಜೊತೆ ಜೊತೆಗೆ ಸಿನಿಮಾ ಪ್ರಚಾರದಲ್ಲಿ ಮಿಲನಾ ತೊಡಗಿಸಿಕೊಂಡಿದ್ದಾರೆ. ನನ್ನ ವೃತ್ತಿಗೆ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಇದಕ್ಕೆ ತಂದೆ, ತಾಯಿ ಹಾಗೂ ಕೃಷ್ಣ ಬೆಂಬಲ ಇದೆ ಎಂದಿದ್ದಾರೆ.
Milana Nagaraj reveals her first remuneration for debut movie
7/7

ಚಿತ್ರರಂಗಕ್ಕೆ ಬರುವ ಮುನ್ನ ಮಿಲನಾ ಈಜುಪಟುವಾಗಿ ಗುರ್ತಿಸಿಕೊಂಡಿದ್ದರು. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇಂಜಿನಿಯರಿಂಗ್ ಪದವಿ ಮುಗಿಸಿ ಬಳಿಕ ಸಿನಿಮಾಗಳತ್ತ ಬಂದರು.
X