bredcrumb

ಮದುವೆಯ ನಂತರ ಕಾಕ್‌ಟೈಲ್ ಪಾರ್ಟಿಯಲ್ಲಿ ಮಿಂಚಿದ ನಾಗಚೈತನ್ಯ ಪತ್ನಿ ಶೋಭಿತಾ..!

By Kannada Filmibeat Photos
| Published: Tuesday, December 10, 2024, 16:07 [IST]

ನಾಗಚೈತನ್ಯ ಜೊತೆ ಹೊಸ ಬದುಕಿಗೆ ಮುನ್ನುಡಿಯನ್ನು ಬರೆದ ಶೋಭಿತಾ ತಮ್ಮ ಮದುವೆಯಲ್ಲಿ ದಕ್ಷಿಣ ಭಾರತದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದರು. ಚಿನ್ನದ ಝರಿಯಿಂದ ಕಸೂತಿ ಮಾಡಿದ ಸೀರೆಯಲ್ಲಿ ಗಮನ ಸೆಳೆದರು. ಸೊಗಸಾದ ಚಿನ್ನದ ಆಭರಣಗಳನ್ನು ಧರಿಸಿ ಸಾಂಪ್ರದಾಯಿಕ ದಕ್ಷಿಣ ಭಾರತದ ವಧುವಂತೆ ಕಂಗೊಳಿಸಿದ್ದರು. ದಕ್ಷಿಣ ಭಾರತದಲ್ಲಿ ಕಾಸುಮಾಲ ಎಂದು ಕರೆಯಲಾಗುವ ಸಂಪ್ರದಾಯಿಕ ನಾಣ್ಯ ವಿನ್ಯಾಸವನ್ನು ಒಳಗೊಂಡ ನೆಕ್ಲೇಸ್ ಕೂಡ ಮದುವೆಯ ದಿನ ಧರಿಸಿದ್ದ ಶೋಭಿತಾ ಎಲ್ಲರ ಕಣ್ಸೆಳೆದಿದ್ದರು. ಇಂತಹ ಶೋಭಿತಾ ಈಗ ಮದುವೆಯ ನಂತರ ಕಾಕ್ ಟೈಲ್ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಕಾಕ್‌ಟೈಲ್ ಪಾರ್ಟಿಯಲ್ಲಿ ಕೂಡ ತಮ್ಮ ಕಾಸ್ಟೂಮ್‌ನಿಂದ ಎಲ್ಲರ ಕಣ್ಮನ ಸೆಳೆದಿದ್ದಾರೆ. 

Naga Chaitanya's wife, Sobhita Dhulipala, channels retro glam at their post-wedding cocktail party.
1/5

ಮೊನ್ನೆ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ನಾಗಚೈತನ್ಯ ಮತ್ತು ಶೋಭಿತಾ ಹೈದ್ರಾಬಾದ್‌ನ ಎಎನ್ಆರ್ ಸ್ಟುಡಿಯೋದಲ್ಲಿ ತಮ್ಮ ಆಪ್ತ ಸ್ನೇಹಿತರಿಗೆ, ಚಿತ್ರರಂಗದ ಗಣ್ಯರಿಗೆ ಕಾಕ್‌ಟೈಲ್ ಪಾರ್ಟಿಯನ್ನು ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ ಕೂಡ ಶೋಭಿತಾ ತಮ್ಮ ಕಾಸ್ಟೂಮ್‌ನಿಂದ ಎಲ್ಲರ ಗಮನ ಸೆಳೆದರು.
Naga Chaitanya's wife, Sobhita Dhulipala, channels retro glam at their post-wedding cocktail party.
2/5

ಮದುವೆಯಲ್ಲಿ ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಶೋಭಿತಾ, ಈ ಕಾಕ್‌ ಟೈಲ್ ಪಾರ್ಟಿಯಲ್ಲಿ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಂಡರು. ವಸ್ತ್ರ ವಿನ್ಯಾಸಕ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ್ದ ಗೋಲ್ಡನ್ ಗೌನ್‌ನ ಶೋಭಿತಾ ಧರಿಸಿದ್ದರು.
Naga Chaitanya's wife, Sobhita Dhulipala, channels retro glam at their post-wedding cocktail party.
3/5

ಬನ್ ಹೇರ್ ಸ್ಟೈಲ್‌ ನಲ್ಲಿ ಕಾಕ್ ಟೈಲ್ ಪಾರ್ಟಿಗೆ ಬಂದ ಶೋಭಿತಾ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ಗೋಲ್ಡ್ ಗೌನ್‌ಗೆ ಹೋಲುವಂತಹ ನೆಕ್ಲೇಸ್ ಧರಿಸಿದ್ದ ಶೋಭಿತಾ ತಮ್ಮ ಉಡುಗೆಗೆ ಮ್ಯಾಚ್ ಆಗುವಂತಹ ಪರ್ಸ್‌ ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು.
Naga Chaitanya's wife, Sobhita Dhulipala, channels retro glam at their post-wedding cocktail party.
4/5

ಈ ಉಡುಗೆಯನ್ನು ಡಿಸೈನ್ ಮಾಡಿದ ಡಿಸೈನರ್ ತರುಣ್ ತಹಿಲಿಯಾನಿ ಶೋಭಿತಾ ಅವರ ಈ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಶೋಭಿತಾ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ ದಾಂಪತ್ಯ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ
Naga Chaitanya's wife, Sobhita Dhulipala, channels retro glam at their post-wedding cocktail party.
5/5

ಸದ್ಯಕ್ಕೆ ನಾಗಚೈತನ್ಯ ಅವರ ಮನದರಸಿ ಶೋಭಿತಾ ಅವರ ಈ ರೆಟ್ರೋ ಸ್ಟೈಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳ ಹೃದಯವನ್ನು ಕೂಡ ಗೆಲ್ಲುತ್ತಿದೆ. ಫೋಟೊ ನೋಡಿದ ಅನೇಕರು ಶೋಭಿತಾ ಅವರ ಫ್ಯಾಶನ್ ಸೆನ್ಸ್‌ನ ಮೆಚ್ಚಿಕೊಳ್ಳುತ್ತಿದ್ದಾರೆ. ನವ ವಧುಗೆ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಇನ್ನೂ ಶುಭ ಕೋರುತ್ತಿದ್ದಾರೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+