bredcrumb

ಸಮಂತಾ ಅವರಿಂದ ದೂರವಾದ ನಾಗಚೈತನ್ಯ ಎರಡನೇ ಮದುವೆ ಹೇಗಿತ್ತು.. ?

By Sarvesh Mithare
| Published: Wednesday, December 4, 2024, 23:34 [IST]

ನಾಗಚೈತನ್ಯ ಮತ್ತು ಶೋಭಿತಾ ಅವರ ಅದ್ಧೂರಿ ಮದುವೆ ಸಮಾರಂಭಕ್ಕೆ ಇಂದು ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋ ಸಾಕ್ಷಿಯಾಗಿದೆ. ನವ ಜೋಡಿಗೆ ಶುಭ ಕೋರಲು ಗಣ್ಯಾತಿಗಣ್ಯರ ದಂಡು ಹೈದ್ರಾಬಾದ್‌ನಲ್ಲಿ ಬಂದು ಇಳಿದಿದೆ.

Nagarjuna Shares the First Official Wedding Photos of Naga Chaitanya and Sobhita Dhulipala
1/6

ಸಮಂತಾ ಅವರಿಂದ ದೂರವಾದ ನಾಗಚೈತನ್ಯ ಇಂದು ಶೋಭಿತಾ ಜೊತೆ ಸಪ್ತಪದಿ ತುಳಿದಿದ್ದಾರೆ. ಹೈದ್ರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ನಟಿ ಶೋಭಿತಾ ಜೊತೆಗೆ ನಟ ನಾಗ ಚೈತನ್ಯ ಮದುವೆಯಾಗಿದ್ದಾರೆ.
Nagarjuna Shares the First Official Wedding Photos of Naga Chaitanya and Sobhita Dhulipala
2/6

ಸಹಜವಾಗಿ ನಾಗಚೈತನ್ಯ ಮತ್ತು ಶೋಭಿತಾ ಇಬ್ಬರು ಚಿತ್ರರಂಗದ ಎರಡು ಧ್ರುವತಾರೆಯರು. ಎಲ್ಲಕ್ಕಿಂತ ಹೆಚ್ಚಾಗಿ ನಾಗಚೈತನ್ಯ ತೆಲುಗು ಚಿತ್ರರಂಗದ ದಂತಕತೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಮೊಮ್ಮಗ. ಚಿರ ಯುವಕ ನಾಗಾರ್ಜುನ ಅವರ ಮಗ. ಈ ಕಾರಣಕ್ಕೆ ಭಾರತೀಯ ಚಿತ್ರರಂಗದ ಅನೇಕರು ಈ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಆ ಪೈಕಿ ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಪ್ರಮುಖರು.
Nagarjuna Shares the First Official Wedding Photos of Naga Chaitanya and Sobhita Dhulipala
3/6

ಇನ್ನು ತೆರೆ ಮೇಲೆ ಗ್ಲಾಮರಸ್ ಅವತಾರದಿಂದ ಎಲ್ಲರ ಕಣ್ಣು ಕುಕ್ಕಿದರೂ ಕೂಡ ಶೋಭಿತಾಗೆ ಮೊದಲಿಂದ ಭಾರತದ ಸಂಸ್ಕ್ರತಿ ಆಚಾರ-ವಿಚಾರದ ಕಡೆ ಹೆಚ್ಚು ಒಲವು ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಶೋಭಿತಾ ಈ ಹಿಂದೆ ನಾಗಾರ್ಜುನ ಮತ್ತು ನಾಗಚೈತನ್ಯ ಸರಳ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದರು ಕೂಡ ಅದನ್ನು ತಿರಸ್ಕರಿಸಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ಮುಂದಾಗಿದ್ದರು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮದುವೆಯನ್ನು ಮಾಡಿಕೊಳ್ಳುವುದಾಗಿ ಹೇಳಿದ್ದರು. ಅದ್ರಂತೆ ಈ ಮದುವೆ ಇಂದು ನಡೆದಿದೆ
Nagarjuna Shares the First Official Wedding Photos of Naga Chaitanya and Sobhita Dhulipala
4/6

ಶೋಭಿತಾ ತಮ್ಮ ಮದುವೆಯಲ್ಲಿ ತೆಲುಗು ಸಂಪ್ರದಾಯದಂತೆ ಎಲ್ಲ ಧಾರ್ಮಿಕ ವಿಧಿಗಳನ್ನು ಅನುಸರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನಡೆಯಲಿದ್ದು ಹೆಚ್ಚು ಕಡಿಮೆ 08 ಗಂಟೆಗಳ ಕಾಲ ವೈದಿಕ , ಸಾಂಪ್ರದಾಯಿಕ ಶ್ರೀಮಂತಿಕೆಯಿಂದ ವಿವಾಹ ನೆರವೇರಲಿದೆ ಎನ್ನುವ ಸುದ್ದಿ ಇದೆ. ಇದರ ಸತ್ಯಾಸತ್ಯತೆ ಇನ್ನೂ ಗೊತ್ತಾಗಬೇಕಿದೆ
Nagarjuna Shares the First Official Wedding Photos of Naga Chaitanya and Sobhita Dhulipala
5/6

ಇನ್ನುಳಿದಂತೆ ಮದುವೆಯ ನಂತರ ನಾಗಚೈತನ್ಯ ಮತ್ತು ಶೋಭಿತಾ ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಅಥವಾ ಶ್ರೀಶೈಲಂ ದೇವಸ್ಥಾನಕ್ಕೆ ತೆರಳಲಿದ್ದಾರೆ. ದೇವರ ಆಶೀರ್ವಾದವನ್ನು ಪಡೆದು ಹೊಸ ಬದುಕನ್ನು ಶುರು ಮಾಡಲಿದ್ದಾರೆ ಎನ್ನುವ ಮಾತು ಸದ್ಯ ಆಂಧ್ರದಲ್ಲಿ ಕೇಳಿ ಬರುತ್ತಿದೆ.
Nagarjuna Shares the First Official Wedding Photos of Naga Chaitanya and Sobhita Dhulipala
6/6

ನಾಗಚೈತನ್ಯ ಜೊತೆ ಮದುವೆಯಾಗುತ್ತಿರುವ ಶೋಭಿತಾ ಮೊದಲಿಂದ ಆಧ್ಯಾತ್ಮಿಕ ಮನೋಭಾವದವರು. ಸಂಪ್ರದಾಯ-ಆಚರಣೆ-ಪದ್ದತಿಗಳಲ್ಲಿ ನಂಬಿಕೆಯನ್ನು ಹೊಂದಿರುವವರು. ತಮ್ಮ ಮದುವೆ ಸಾಂಪ್ರದಾಯಿಕವಾಗಿಯೇ ನಡೆಯಬೇಕು ಎನ್ನುವ ಕನಸನ್ನು ಮೊದಲಿಂದ ಕಂಡಿರುವ ಶೋಭಿತಾ ಮೊದಲ ಬಾರಿ ನಾಗಚೈತನ್ಯ ಅವರನ್ನು ಓಟಿಟಿಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಶುರುವಾದ ಸ್ನೇಹ ಆ ನಂತರ ಪ್ರೀತಿಗೆ ತಿರುಗಿತು, ಈಗ ಇಬ್ಬರು ವಿವಾಹದ ಬಂಧನಕ್ಕೊಳಗಾಗಿದ್ದಾರೆ
X