bredcrumb

ಹಳೇ ರಿಲೇಷನ್‌ಶಿಪ್ಸ್ ಬಗ್ಗೆ ನಯನತಾರ ಮನದಾಳ

By Narayan
| Published: Wednesday, November 13, 2024, 22:20 [IST]

ನಯನತಾರ ಜೀವನದ ಬಗ್ಗೆ ಡಾಕ್ಯುಮೆಂಟರಿ ಸಿದ್ಧವಾಗಿದೆ. ಆಕೆಯ ಮದುವೆ ಸಮಯದಲ್ಲಿ ಚಿತ್ರಿಸಿರುವ ಡಾಕ್ಯುಮೆಂಟರಿ ಮುಂದಿನ ವಾರ ಸ್ಟ್ರೀಮಿಂಗ್ ಆಗಲಿದೆ. ಇದರಲ್ಲಿ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜರ್ನಿ ಬಗ್ಗೆ ನಯನತಾರಾ ಸಾಕಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಹಾಗಿದ್ದರೆ ತಮ್ಮ ಹಳೇ ರಿಲೇಷನ್‌ಶಿಪ್‌ಗಳ ಬಗ್ಗೆಯೂ ಮಾತನಾಡಿದ್ದಾರಾ? ಎನ್ನುವ ಕುತೂಹಲ ಕೆಲವರಲ್ಲಿದೆ. 

Nayanthara ready to talk Her Past Relationships first time in documentary
1/7

ನಟಿ ನಯನತಾರ ಸಿನಿಬದುಕಿನ ಉತ್ತುಂಗಕ್ಕೇರಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗು, ತಮಿಳು ಚಿತ್ರಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Nayanthara ready to talk Her Past Relationships first time in documentary
2/7

ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರ ಹಸೆಮಣೆ ಏರಿದ್ದರು. ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಸೇರಿಸಿ ನಯನತಾರ: ಬಿಯಾಂಡ್ ದಿ ಫೇರಿ ಟೇಲ್ ಎನ್ನುವ ಡಾಕ್ಯುಮೆಂಟರಿ ನಿರ್ಮಾಣವಾಗಿದೆ. ನವೆಂಬರ್ 18ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.
Nayanthara ready to talk Her Past Relationships first time in documentary
3/7

ನಯನತಾರ ಡಾಕ್ಯುಮೆಂಟರಿಯಲ್ಲಿ ಉಪೇಂದ್ರ, ನಾಗಾರ್ಜುನ ಸೇರಿ ಹಲವರು ಆಕೆಯ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ. ಸ್ವತಃ ನಯನ್ ಹಾಗೂ ವಿಘ್ನೇಶ್ ತಮ್ಮಿಬ್ಬರ ಲವ್, ಮದುವೆ ಬಗ್ಗೆ ಮಾತನಾಡಿದ್ದಾರೆ.
Nayanthara ready to talk Her Past Relationships first time in documentary
4/7

ಡಾಕ್ಯುಮೆಂಟರಿಯಲ್ಲಿ ನಯನತಾರ ತನ್ನ ವೈಯಕ್ತಿಕ ಜೀವನದ ಬಗ್ಗೆ ಹೇಳುವ ಹಳೇ ರಿಲೇಷನ್‌ಶಿಪ್ಸ್ ಬಗ್ಗೆ ಮಾತನಾಡಿರುವಂತೆ ಕಾಣ್ತಿದೆ. ಈ ಹಿಂದೆ ಸಿಂಬು ಹಾಗೂ ಪ್ರಭುದೇವಾ ಜೊತೆ ಆಕೆಯ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅಧಿಕೃತವಾಗಿ ಯಾರೊಬ್ಬರು ಮಾತನಾಡಲಿಲ್ಲ.
Nayanthara ready to talk Her Past Relationships first time in documentary
5/7

ಸದ್ಯ ಡಾಕ್ಯುಮೆಂಟರಿ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಅದರಲ್ಲಿ ನಾಗಾರ್ಜುನ ಮಾತನಾಡಿ "ಆ ಸಮಯದಲ್ಲಿ, ಆಕೆ ರಿಲೇಷನ್‌ಶಿಪ್‌ನ ಪ್ರಕ್ಷುಬ್ಧ ಸಮಯವನ್ನು ಎದುರಿಸುತ್ತಿದ್ದಳು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
Nayanthara ready to talk Her Past Relationships first time in documentary
6/7

ನಯನತಾರ ಸಹ ಮಾತನಾಡಿ ನಾನು ಜನರನ್ನು ಬೇಗ ನಂಬಿ ಬಿಡುತ್ತೇನೆ ಎಂದಿದ್ದಾರೆ. ಈ ಎರಡು ಮಾತುಗಳು ಆಕೆಯ ರಿಲೇಷನ್‌ಶಿಪ್‌ಗೆ ಸಂಬಂಧಿಸಿದ್ದು ಎನ್ನುವುದು ಗೊತ್ತಾಗುತ್ತಿದೆ. ಪ್ರಭುದೇವಾರಿಂದ ದೂರಾದ ಬಳಿಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ.
Nayanthara ready to talk Her Past Relationships first time in documentary
7/7

ಅಭಿಮಾನಿಗಳಂತೂ ಡಾಕ್ಯುಮೆಂಟರಿ ನೋಡಲು ಕಾಯುತ್ತಿದ್ದಾರೆ. ವಿಕ್ಕಿ-ನಯನ್ ಮದುವೆಯ ಯಾವುದೇ ವೀಡಿಯೋಗಳು ಹೊರ ಬರಲಿಲ್ಲ. ಒಂದೆರಡು ಫೋಟೊ ಹಂಚಿಕೊಂಡು ಜೋಡಿ ಸುಮ್ಮನಾಗಿತ್ತು. ಆದರೆ ತಮ್ಮ ಮದುವೆಯ ವೀಡಿಯೋ ಪ್ರಸಾರಕ್ಕೆ ನೆಟ್‌ಫಿಕ್ಸ್‌ ಜೊತೆ ನಯನ್ ಒಪ್ಪಂದ ಮಾಡಿಕೊಂಡಿದ್ದರು.
X