bredcrumb

ಮಾಳವಿಕಾ ಅವತಾರವನ್ನು ಕಿಮ್‌ಗೆ ಹೋಲಿಸಿದ ನೆಟ್ಟಿಗರು

By Narayan
| Updated: Saturday, November 9, 2024, 22:03 [IST]

ಮಾಲಿವುಡ್ ಬೆಡಗಿ ಮಾಳವಿಕಾ ಮೋಹನನ್ ತಮ್ಮ ಮೈಮಾಟ ಪ್ರದರ್ಶನದಿಂದಲೇ ಹೆಚ್ಚು ಗಮನ ಸೆಳೆದಾಕೆ. ಇದೀಗ ಮತ್ತೊಮ್ಮೆ ಡೀಪ್ ನೆಕ್ ಲೆಹಂಗಾದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಈಗ ಹಂಚಿಕೊಂಡಿದ್ದಾರೆ. 

Netizens compare Malavika mohanan with kim kardashian after she wears low neck lehenga
1/7

ಕೇರಳದಲ್ಲಿ ಹುಟ್ಟಿ ಮುಂಬೈನಲ್ಲಿ ಓದಿ ಬೆಳೆದ ಚೆಲುವೆ ಮಾಳವಿಕಾ ಮೋಹನನ್. ತಂದೆ ಖ್ಯಾತ ಛಾಯಾಗ್ರಾಹಕ ಕೆ. ಯು ಮೋಹನನ್. ಹಾಗಾಗಿ ಆಕೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಸದ್ಯ ಮಾಳವಿಕಾ ಹಾಟ್ ಫೋಟೋಸ್ ಸದ್ದು ಮಾಡ್ತಿದೆ.
Netizens compare Malavika mohanan with kim kardashian after she wears low neck lehenga
2/7

'ನಾನು ಮತ್ತು ವರಲಕ್ಷ್ಮಿ' ಎನ್ನುವ ಕನ್ನಡ ಚಿತ್ರದಲ್ಲಿ ಕೂಡ ಮಾಳವಿಕಾ ನಟಿಸಿದ್ದರು. ರಜನಿಕಾಂತ್ ನಟನೆಯ 'ಪೆಟ್ಟಾ' ಹಾಗೂ ದಳಪತಿ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರದಲ್ಲಿ ಮಿಂಚಿದ್ದರು. ಆದರೂ ಆಕೆಗೆ ಹೆಚ್ಚಿನ ಲಾಭವಾಗಲಿಲ್ಲ. ಇತ್ತೀಚೆಗೆ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ.
Netizens compare Malavika mohanan with kim kardashian after she wears low neck lehenga
3/7

ವಿಕ್ರಂ ನಟನೆಯ 'ತಂಗಲಾನ್' ಚಿತ್ರದಲ್ಲಿ ಆರತಿಯಾಗಿ ಮಾಳವಿಕಾ ಅಬ್ಬರಿಸಿದ್ದಾರೆ. ಆಕೆಯ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕಾರ್ತಿ ಜೊತೆ 'ಸರ್ದಾರ್-2' ಹಾಗೂ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರಗಳಲ್ಲಿ ಸದ್ಯಕ್ಕೆ ಬಣ್ಣ ಹಚ್ಚಿದ್ದಾರೆ.
Netizens compare Malavika mohanan with kim kardashian after she wears low neck lehenga
4/7

ಸೋಶಿಯಲ್ ಮೀಡಿಯಾದಲ್ಲಿ ಮಾಳವಿಕಾ ಸಖತ್ ಆಕ್ಟೀವ್ ಆಗಿರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 40 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಇನ್ನು ತಮ್ಮ ಬೋಲ್ಡ್ ಫೋಟೊಶೂಟ್‌ಗಳಿಂದ ಮಲಯಾಳಿ ಚೆಲುವೆ ಗಮನ ಸೆಳೆಯುತ್ತಾರೆ. ಇದೀಗ ಲೋ ನೆಕ್ ಲೆಹಂಗಾದಲ್ಲಿ ಪಡ್ಡೆ ಹುಡುಗರ ಹುಬ್ಬೇರಿಸಿದ್ದಾರೆ.
Netizens compare Malavika mohanan with kim kardashian after she wears low neck lehenga
5/7

ಅಂಬಾನಿ ಮನೆ ಮದುವೆ ಸಮಾರಂಭದಲ್ಲಿ ಹಾಲಿವುಡ್ ನಟಿ ಕಿಮ್​ ಕರ್ದಾಶಿಯಾನ್ ಇದೇ ರೀತಿಯ ಕಾಸ್ಟ್ಯೂಮ್‌ನಲ್ಲಿ ಕಂಗೊಳಿಸಿದ್ದರು. ಆಕೆಯ ತೆರೆದ ಎದೆಯ ಅವತಾರ ವೈರಲ್ ಆಗಿತ್ತು. ಇದೀಗ ಮಾಳವಿಕಾ ಕೂಡ ಅದೇ ರೀತಿ ಕಾಣಿಸಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
Netizens compare Malavika mohanan with kim kardashian after she wears low neck lehenga
6/7

ದೀಪಾವಳಿ ಸಂಭ್ರಮದಲ್ಲಿ ಸಾಕಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ. ಇದನ್ನು ಪೋಸ್ಟ್ ಮಾಡುವುದು ತಡವಾಯಿತು ಎಂದು ಆಕೆ ಕ್ಯಾಪ್ಷನ್ ಕೊಟ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
Netizens compare Malavika mohanan with kim kardashian after she wears low neck lehenga
7/7

ಕಾಸ್ಟ್ಯೂಮ್ ಡಿಸೈನರ್ ಡಾಲಿ ಜೇನ್ ಈ ಲೆಹಂಗಾವನ್ನು ಡಿಸೈನ್ ಮಾಡಿದ್ದಾರೆ. ಬಿಂದಾಸ್ ಅವತಾರದಲ್ಲಿ ಮಾಳವಿಕಾ ಮೋಹನನ್ ವಿವಿಧ ಕೋನಗಳಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಕೂಡ ನಟಿಸಲು ಆರಂಭಿಸಿರುವ ಮಾಳವಿಕಾ ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.
X