bredcrumb

ಸಖತ್ ಹಾಟ್ ಪ್ರಿಯಾ ವಾರಿಯರ್

By Narayan
| Published: Monday, November 4, 2024, 20:36 [IST]

ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕ್ರೇಜ್ ಕಂಪ್ಲೀಟ್ ಆಗಿ ಕಮ್ಮಿ ಆಗಿದೆ. ಆಕೆಗೆ ಯಾವುದೇ ದೊಡ್ಡ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ. ದೀಪಾವಳಿ ಸ್ಪೆಷಲ್ ಫೋಟೊಶೂಟ್ ಸದ್ದು ಮಾಡ್ತಿದೆ. 

Priya Prakash Varrier Shares Pictures From diwali special photoshoot pics
1/7

'ಒರು ಆಡಾರ್ ಲವ್' ಚಿತ್ರದ ಹಾಡೊಂದರಲ್ಲಿ ಮಿಂಚಿ ಗಮನ ಸೆಳೆದ ಬೆಡಗಿ ಪ್ರಿಯಾ ವಾರಿಯರ್. ಇಡೀ ಹಾಡು ಅಲ್ಲ, ಕೇವಲ 10 ಸೆಕೆಂಡ್‌ಗಳ ಸಣ್ಣ ಝಲಕ್ ಆಕೆಯ ಜೀವನವನ್ನೇ ಬದಲಿಸಿಬಿಟ್ಟಿತ್ತು. ತನ್ನ ಪ್ರಿಯಕರನ ಕಡೆ ತಿರುಗಿ ಆಕೆ ಕಣ್ಸನ್ನೆ ಮಾಡುವ ವೀಡಿಯೋ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ.
Priya Prakash Varrier Shares Pictures From diwali special photoshoot pics
2/7

ಇದೊಂದು ಹಾಡಿನಿಂದ ಪ್ರಿಯಾ ನ್ಯಾಷನಲ್ ಕ್ರಶ್ ಪಟ್ಟ ಅಲಂಕರಿಸಿಬಿಟ್ಟಳು. ಆಕೆಗಾಗಿ ಕಥೆಯನ್ನೇ ಬದಲಿಸಿ ಸಿನಿಮಾ ಮಾಡುವಂತಾಯಿತು. ಆದರೆ ಸಿನಿಮಾ ಗೆಲ್ಲಲಿಲ್ಲ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಂದಿತ್ತು. ಆದರೆ ಪ್ರಯೋಜನವಾಗಲಿಲ್ಲ. ಸದ್ಯ ಹಾಟ್ ಫೋಟೊಶೂಟ್‌ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾ ಕಮಾಲ್ ಮಾಡುತ್ತಿದ್ದಾಳೆ.
Priya Prakash Varrier Shares Pictures From diwali special photoshoot pics
3/7

ದೀಪಾವಳಿ ಸಂಭ್ರಮದಲ್ಲಿ ಲೆಹಂಗಾ ತೊಟ್ಟು ಪ್ರಿಯಾ ಕಲರ್‌ಫುಲ್ ಫೋಟೊಶೂಟ್ ಮಾಡಿಸಿದ್ದಾಳೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೂತು ಭಿನ್ನ ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾಳೆ. ಹ್ಯಾಪಿ ದೀಪಾವಳಿ ಎಂದು ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾಳೆ.
Priya Prakash Varrier Shares Pictures From diwali special photoshoot pics
4/7

ನೋಡನೋಡುತ್ತಿದ್ದಂತೆ ಪ್ರಿಯಾ ವಾರಿಯರ್ ಹಾಟ್ ಫೋಟೊಗಳು ವೈರಲ್ ಆಗುತ್ತಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸರಿನ್ ರಾಮ್‌ದಾಸ್ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ.
Priya Prakash Varrier Shares Pictures From diwali special photoshoot pics
5/7

ಎರಡೂ ಕೈಗಳಿಗೆ ಹೂ ಸುತ್ತಿಕೊಂಡು ದೇವಲೋಕದಿಂದ ಇಳಿದುಬಂದ ಅಪ್ಸರೆಯಂತೆ ಪ್ರಿಯಾ ಪೋಸ್ ಕೊಟ್ಟಿದ್ದಾಳೆ. ತಾವರೆ ಹೂ ಹಿಡಿದು ಮಿಂಚಿದ್ದಾಳೆ. ಫೋಟೊಗಳಿಗೆ ಲಕ್ಷ ಲಕ್ಷ ಲೈಕ್ಸ್ ಸಿಕ್ಕಿದೆ.
Priya Prakash Varrier Shares Pictures From diwali special photoshoot pics
6/7

'ಒರು ಆಡಾರ್ ಲವ್' ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಕನ್ನಡದಲ್ಲಿ 'ವಿಷ್ಣುಪ್ರಿಯ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾಳೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹಿಂದಿಯಲ್ಲಿ ಕೂಡ 2 ಚಿತ್ರಗಳಲ್ಲಿ ಪ್ರಿಯಾ ಪ್ರಕಾಶ್ ಬಣ್ಣ ಹಚ್ಚಿದ್ದಾಳೆ.
Priya Prakash Varrier Shares Pictures From diwali special photoshoot pics
7/7

ತೆಲುಗು, ತಮಿಳು ಸಿನಿಮಾಗಳು ಕೂಡ ಪ್ರಿಯಾ ಕೈ ಹಿಡಿಯಲಿಲ್ಲ. ಕಣ್ಸನ್ನೆ ವೀಡಿಯೋದಿಂದ ರಾತ್ರೋರಾತ್ರಿ ಜನಪ್ರಿಯತೆ ಸಾಧಿಸಿದ್ದ ಚೆಲುವೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಕೆಯನ್ನು ಸಿನಿರಸಿಕರು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
X